Budget 2021: Union Budget ಮೊಬೈಲ್ ಆ್ಯಪ್ನಲ್ಲಿ ಏನಿದೆ?
ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿರುವ ಈ ಆ್ಯಪ್ ಅಂಡ್ರಾಯ್ಡ್ ಮತ್ತು ಐಒಎಸ್ನಲ್ಲಿ ಲಭ್ಯವಿದೆ. ಫೆಬ್ರುವರಿ 1 ರಂದು ಬಜೆಟ್ ಮಂಡನೆಯಾದ ನಂತರ ಎಲ್ಲ ಮಾಹಿತಿಗಳು ಕೇಂದ್ರ ಬಜೆಟ್ ಆ್ಯಪ್ನಲ್ಲಿ ಲಭ್ಯವಾಗಲಿದೆ.
ದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಮಂಡಿಸಲಿದ್ದು ಇದೇ ಮೊದಲ ಬಾರಿ ಪೇಪರ್ ಲೆಸ್ ಬಜೆಟ್ ಮಂಡನೆ ಆಗಲಿದೆ. ಬಜೆಟ್ ಸಂಬಂಧಿತ ಎಲ್ಲ ಮಾಹಿತಿಗಳು ಜನರಿಗೆ ತಲುಪಿಸುವುದಕ್ಕಾಗಿ Union Budget Mobile App ಎಂಬ ಆ್ಯಪ್ನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.
ಆ್ಯಪ್ನಲ್ಲಿ ಏನಿದೆ? ಈ ಮೊಬೈಲ್ ಆ್ಯಪ್ನಲ್ಲಿ ಇಲ್ಲಿವರೆಗಿನ 14 ಕೇಂದ್ರ ಬಜೆಟ್ಗಳ ಪ್ರತಿ ಲಭ್ಯವಿರಲಿದೆ. ವಾರ್ಷಿಕ ಹಣಕಾಸು ಲೆಕ್ಕಪತ್ರ, ಬೇಡಿಕೆ ಮಾಹಿತಿ (ಡಿಮಾಂಡ್ ಫಾರ್ ಗ್ರಾಂಟ್ಸ್ – ಡಿಜಿ), ಆರ್ಥಿಕ ಮಸೂದೆ ಮೊದಲಾದ ದಾಖಲೆಗಳು ಇರಲಿವೆ.
ಬಳಕೆದಾರರು ಸುಲಭವಾಗಿ ಬಳಸಬಹುದಾದ ಸೆಟ್ಟಿಂಗ್ಸ್ ಇದರಲ್ಲಿದ್ದು, ಯಾವುದೇ ದಾಖಲೆಗಳನ್ನು ಡೌನ್ ಲೋಡ್ ಮಾಡಬಹುದು, ಮುದ್ರಣ ಮಾಡಬಹುದು, ಹುಡುಕಬಹುದು, ಜೂಮ್ ಇನ್ ಮತ್ತು ಜೂಮ್ ಔಟ್, ಬೈ ಡೆರೆಕ್ಷನಲ್ ಸ್ಕ್ರಾಲಿಂಗ್, ಅನುಕ್ರಮಣಿಕೆ ಮತ್ತು ಇತರ ಲಿಂಕ್ಗಳೂ ಲಭ್ಯವಿದೆ.
ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿರುವ ಈ ಆ್ಯಪ್ ಅಂಡ್ರಾಯ್ಡ್ ಮತ್ತು ಐಒಎಸ್ನಲ್ಲಿ ಲಭ್ಯವಿದೆ .
ಕೇಂದ್ರ ಬಜೆಟ್ ವೆಬ್ ಪೋರ್ಟಲ್ www.indiabudget.gov.in ನಲ್ಲಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬಹುದು. ಈ ಆ್ಯಪ್ನ್ನು ಆರ್ಥಿಕ ವ್ಯವಹಾರಗಳ ಇಲಾಖೆಯ (ಡಿಇಎ) ಮಾರ್ಗದರ್ಶನದಲ್ಲಿ ನ್ಯಾಷನಲ್ ಇನ್ ಫೋರ್ಮೆಟಿಕ್ಸ್ ಸೆಂಟರ್ (ಎನ್ಐಸಿ) ಈ ಆ್ಯಪ್ ಅಭಿವೃದ್ಧಿಪಡಿಸಿದೆ.
ಫೆಬ್ರುವರಿ 1ರಂದು ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಭಾಷಣ ಮುಗಿದ ನಂತರ ಎಲ್ಲ ದಾಖಲೆಗಳು ಈ ಆ್ಯಪ್ ನಲ್ಲಿ ಸಿಗಲಿದೆ.
ಗೂಗಲ್ ಪ್ಲೇ ಸ್ಟೋರ್ನಲ್ಲಿ Union Budget ಎಂದು ಸರ್ಚ್ ಮಾಡಿ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಬಹುದು.
ಕೇಂದ್ರ ಬಜೆಟ್ ಮಂಡನೆಗೆ ಇನ್ನೊಂದು ವಾರ ಬಾಕಿ; ಪೂರ್ವಭಾವಿಯಾಗಿ ನಡೆದ ಹಲ್ವಾ ಸಮಾರಂಭ, ಮೊಬೈಲ್ ಆ್ಯಪ್ ಉದ್ಘಾಟನೆ
Published On - 12:26 pm, Sun, 24 January 21