ಬಸವನಗುಡಿ ಯೂನಿಯನ್ ಕ್ಲಬ್ ಉಪಾಧ್ಯಕ್ಷನಿಂದ ಮಹಿಳಾ ಪ್ರಾಂಶುಪಾಲರಿಗೆ ಲೈಂಗಿಕ ಕಿರುಕುಳ, ಕೇಸ್ ದಾಖಲು
ಮಹಿಳಾ ಪ್ರಾಂಶುಪಾಲರಿಗೆ ಕ್ಲಬ್ ಉಪಾಧ್ಯಕ್ಷನಿಂದ ಲೈಂಗಿಕ ಕಿರುಕುಳ ನೀಡಲಾಗಿದೆ ಎಂಬ ಆರೋಪದಡಿ ಯೂನಿಯನ್ ಕ್ಲಬ್‌ನ ಉಪಾಧ್ಯಕ್ಷ ಮೋಹನ್‌ರಾವ್ ವಿರುದ್ಧ ಬೆಂಗಳೂರಿನ ಬಸವನಗುಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು: ಮಹಿಳಾ ಪ್ರಾಂಶುಪಾಲರಿಗೆ ಕ್ಲಬ್ ಉಪಾಧ್ಯಕ್ಷನಿಂದ ಲೈಂಗಿಕ ಕಿರುಕುಳ (Sexual Harassment) ನೀಡಲಾಗಿದೆ ಎಂಬ ಆರೋಪದಡಿ ಯೂನಿಯನ್ ಕ್ಲಬ್‌ನ ಉಪಾಧ್ಯಕ್ಷ ಮೋಹನ್‌ರಾವ್ ವಿರುದ್ಧ ಬೆಂಗಳೂರಿನ ಬಸವನಗುಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೋಹನ್‌ರಾವ್ ನನ್ನ ಜೊತೆ ಅಸಭ್ಯವಾಗಿ ಮಾತನಾಡಿದ್ದಾರೆ ಎಂದು ಪ್ರಾಂಶುಪಾಲರು ದೂರಿನಲ್ಲಿ ತಿಳಿಸಿದ್ದಾರೆ.
ಪ್ರತಿಷ್ಠಿತ ಬಸವನಗುಡಿ ಯೂನಿಯನ್ ಕ್ಲಬ್‌ನ ಉಪಾಧ್ಯಕ್ಷ ಮೋಹನ್ ರಾವ್ ಮಹಿಳಾ ಪ್ರಿನ್ಸಿಪಾಲ್ರಿಗೆ ಲೈಂಗಿಕ ಕಿರುಕುಳ ನೀಡಿದ್ದಾರಂತೆ. ಇದೇ ತಿಂಗಳ 6ರಂದು ಮಹಿಳೆ ತನ್ನ ಪತಿ ಜೊತೆ ಕ್ಲಬ್ಗೆ ಬಂದಿದ್ದರು. ಈ ವೇಳೆ ಮಹಿಳೆ ವಾಶ್ ರೂಂ ಕಡೆ ಹೊರಟಾಗ ಮೋಹನ್ ರಾವ್ ಅಡ್ಡ ಬಂದಿದ್ದಾರೆ. ‘ಹೌ ಐ ಆ್ಯಮ್ ಲುಕಿಂಗ್’ ಎಂದು ಮಹಿಳೆಗೆ ಕೇಳಿದ್ದಾರೆ. ಆಗ ಚೆನ್ನಾಗಿದ್ದೀರಿ ಎಂದು ಮಹಿಳೆ ಉತ್ತರಿಸಿದ್ದಾರೆ. ಆಗ ಯಾಕೆ ಚೆನ್ನಾಗಿದ್ದೀನಿ ಗೊತ್ತಾ? ನನ್ನ ಹೆಂಡ್ತಿ ಜೊತೆ 27 ವರ್ಷಗಳಿಂದ ಮಲಗಿಲ್ಲ ಅದ್ಕೆ ಚೆನ್ನಾಗಿದ್ದೀನಿ ಎಂದು ಮೋಹನ್ ರಾವ್ ಹೇಳಿದ್ರು ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮೋಹನ್ ರಾವ್ ಉತ್ತರಕ್ಕೆ ಬೆಚ್ಚಿಬಿದ್ದ ಮಹಿಳೆ ಯಾಕೆ ಈತ ಹೀಗೆ ಹೇಳ್ತಿದ್ದಾರೆ ಎಂದು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಸ್ವಲ್ಪ ಹೊತ್ತಿನ ಬಳಿಕ ಮತ್ತೊಮ್ಮೆ ಶೌಚಾಲಯಕ್ಕೆ ಹೋದಾಗ ಮತ್ತೆ ಮೋಹನ್ ಮಹಿಳೆಯ ಮುಂದೆ ಪ್ರತ್ಯಕ್ಷರಾಗಿ ನನಗೆ ಎಣ್ಣೆ ಕೊಡಿಸಲ್ವ ಅಂತಾ ಕೇಳಿದ್ದಾರೆ. ಆಗ ಬೇರೇನಾದ್ರು ಮಾತಾಡಿದ್ರೆ ರಂಪ ಆಗುತ್ತೆ ಎಂದು ಯಾವುದು ಬೇಕು ತೆಗೆದುಕೊಳ್ಳಿ ಅಂದಿದ್ದಾರೆ. ಈ ವೇಳೆ ಮಹಿಳೆ ಜೊತೆ ಅಸಭ್ಯವಾಗಿ ಮಾತನಾಡಿರುವುದಾಗಿ ಮೋಹನ್ ರಾವ್ ವಿರುದ್ಧ ಮಹಿಳೆ ಆರೋಪ ಮಾಡಿದ್ದಾರೆ. ಸದ್ಯ ಲೈಂಗಿಕ ದೌರ್ಜನ್ಯ ಕೇಸ್ನಡಿ ಬಸವನಗುಡಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಮೈಸೂರಿನಲ್ಲಿ ನಾಯಿಗೆ ಲೈಂಗಿಕ ಕಿರುಕುಳ ನೀಡಿ ಹೇಯ ಕೃತ್ಯ; ವಿಕೃತ ಮನಸಿನ ಆರೋಪಿ ಬಂಧನ