ಮೈಸೂರಿನಲ್ಲಿ ನಾಯಿಗೆ ಲೈಂಗಿಕ ಕಿರುಕುಳ ನೀಡಿ ಹೇಯ ಕೃತ್ಯ; ವಿಕೃತ ಮನಸಿನ ಆರೋಪಿ ಬಂಧನ
ನಾಯಿ ಮೇಲೆ ಎರಗಿರುವ ಪಾಪಿ ಸೋಮಶೇಖರ್ ನಾಯಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ಸಂಬಂಧ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ವಿಕೃತ ಮನಸಿನ ಸೋಮಶೇಖರ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಮೈಸೂರು: ಕಾಲ ಕೆಟ್ಟು ಹೋಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಮಹಿಳೆಯರು ಮಕ್ಕಳು ಮಾತ್ರವಲ್ಲ ಪ್ರಾಣಿಗಳು ಕೂಡ ಸುರಕ್ಷಿತವಲ್ಲ ಎನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಸಾಕ್ಷಿ ಮೈಸೂರಿನಲ್ಲಿ ನಡೆದಿರುವ ಅನಾಗರಿಕ ಹಾಗೂ ಹೇಯ ಕೃತ್ಯ. ಹೌದು ಮೈಸೂರಿನ ನಿವಾಸಿ ಸೋಮಶೇಖರ್ ಒಬ್ಬ ವಿಕೃತ ಮನಸಿನವನಾಗಿದ್ದು, ಈತ ಮಾಡಿರುವ ಕೃತ್ಯ ಹೇಳಲಾಗದಷ್ಟು ಅಸಹ್ಯವಾಗಿದೆ. ನಾಗರಿಕ ಸಮಾಜದಲ್ಲಿ ಇಂತಹ ಮನಸ್ಥಿತಿಯವರು ಕೂಡ ಇರುತ್ತಾರೆ ಎನ್ನುವ ಬಗ್ಗೆ ಇನ್ನಾದರು ಜನರು ಎಚ್ಚೆತ್ತು ಕೊಳ್ಳುವುದು ಅಗತ್ಯವಾಗಿದೆ.
ನಾಯಿಯೊಂದಕ್ಕೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಸೋಮಶೇಖರ್ ಜೈಲು ಸೇರಿದ್ದಾನೆ. ಅಚ್ಚರಿ ಆದರೂ ಇದು ಸತ್ಯ. ಮೈಸೂರಿನ ಗೋಕುಲಂ 3ನೇ ಹಂತದ ಗಣಪತಿ ದೇವಸ್ಥಾನದ ಬಳಿ ಇದೇ ತಿಂಗಳ 11ರಂದು ಈ ಹೇಯ ಕೃತ್ಯ ನಡೆದಿದ್ದು, ಈತನ ಈ ಅನಾಗರಿಕ ಕೃತ್ಯವನ್ನು ಸ್ಥಳೀಯರೊಬ್ಬರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.
ಹೌದು ಅಲ್ಲೇ ಇದ್ದ ನಾಯಿ ಮೇಲೆ ಎರಗಿರುವ ಪಾಪಿ ಸೋಮಶೇಖರ್ ನಾಯಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ಸಂಬಂಧ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ವಿಕೃತ ಮನಸಿನ ಸೋಮಶೇಖರ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಸೋಮಶೇಖರ್ ವಿರುದ್ಧ ಐಪಿಸಿ ಸೆಕ್ಷನ್ 1860 ಯು /ಎಸ್ -377: ಪ್ರಾಣಿಗಳ ಜತೆ ಲೈಂಗಿಕ ಕ್ರಿಯೆ ನಡೆಸುವುದು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಗಟ್ಟುವಿಕೆ ಮತ್ತು 1960 ಯು/ಇಎಸ್-11(1)(ಎ) ಅಡಿ ಪ್ರಕರಣ ದಾಖಲಿಸಲಾಗಿದೆ. ಏನೇ ಆಗಲಿ ಸೋಮಶೇಖರ್ನ ಈ ಕೃತ್ಯ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದ್ದು ಮಾತ್ರ ನಿಜ.
ಇದನ್ನೂ ಓದಿ:Bengaluru Crime ಲೆಕ್ಚರರ್ ಮಗನಿಂದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ, ಯುವಕ ಅರೆಸ್ಟ್