
ಬೆಂಗಳೂರು: ಸ್ಯಾಂಡಲ್‌ವುಡ್ ಸ್ಟಾರ್ಸ್ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿ ಹೇಳಿಕೆ ನೀಡಿದ್ದ ಕನ್ನಡ ನಿರ್ದೇಶಕ ಇಂದ್ರಜಿತ್ ಲಂಕೇಶ್ಗೆ CCB ನೊಟೀಸ್ ಜಾರಿಮಾಡಿದೆ.
CCB ಯ ಮಾದಕವಸ್ತು ನಿಗ್ರಹ ದಳದಿಂದ ನೊಟೀಸ್ ಜಾರಿಯಾಗಿದ್ದು ಡ್ರಗ್ಸ್ ಜಾಲದ ಕುರಿತು ಇಂದ್ರಜಿತ್ ಬಳಿ ಇರುವ ಮಾಹಿತಿಯನ್ನ CCB ಯೊಂದಿಗೆ ಹಂಚಿಕೊಳ್ಳುವಂತೆ ಸೂಚನೆ ನೀಡಲಾಗಿದೆ.
ಈ ಹಿಂದೆ ಇಂದ್ರಜಿತ್ ಲಂಕೇಶ್ ಡ್ರಗ್ಸ್ ಜಾಲದಲ್ಲಿರುವ ನಟ ನಟಿಯರ ಮಾಹಿತಿ ತನಗೆ ಗೊತ್ತು ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸುವಾಗ ಹೇಳಿದ್ದರು. ಹೀಗಾಗಿ, ಡ್ರಗ್ಸ್ ವಿರುದ್ಧದ ಹೋರಾಟದಲ್ಲಿ ಬೆಂಗಳೂರು ಪೊಲೀಸರೊಂದಿಗೆ ಕೈಜೋಡಿಸಲು ಮನವಿ ಮಾಡಿಕೊಂಡಿರುವ CCB ದಳವು ಇಂದ್ರಜಿತ್ ನೀಡಲಿರುವ ಮಾಹಿತಿಯನ್ನ ಆಧರಿಸಿ ತನಿಖೆ ನಡೆಸಲಿದ್ದಾರೆ.