‘ಡ್ರಗ್ಸ್ ವೀರ’ ಖನ್ನಾಗೆ ನಾರ್ಕೋ ಟೆಸ್ಟ್! ಬಾಡಿ ವಾರಂಟ್ ಪಡೆದು ಅಹಮದಾಬಾದ್‌ನತ್ತ CCB
ಬೆಂಗಳೂರು: ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿ ವಿರೇನ್ ಖನ್ನಾಗೆ ನಾರ್ಕೋ ಟೆಸ್ಟ್ ನಡೆಸಲು ಸಿಸಿಬಿಗೆ ಒಪ್ಪಿಗೆ ಸಿಕ್ಕಿದೆ. 2 ದಿನದಲ್ಲಿ ಅಹಮದಾಬಾದ್‌ನ FSLನಲ್ಲಿ ಖನ್ನಾಗೆ ನಾರ್ಕೋ ಟೆಸ್ಟ್ ನಡೆಸಲು ಸಿದ್ಧತೆ ನಡೆದಿದೆ. ಸದ್ಯ ಆರೋಪಿ ಖನ್ನಾ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾನೆ. ಬಾಡಿ ವಾರಂಟ್ ಪಡೆದು ಸಿಸಿಬಿ ನಾರ್ಕೋ ಟೆಸ್ಟ್ಗೆ ಕರೆದೊಯ್ಯಲಿದ್ದಾರೆ. ಆರೋಪಿ ಖನ್ನಾ ಬಂಧನವಾದ ದಿನದಿಂದಲೂ ಯಾವುದೇ ಮಾಹಿತಿ ನೀಡಿರಲಿಲ್ಲ. ಹೀಗಾಗಿ ನಾರ್ಕೋ ಟೆಸ್ಟ್ ನಡೆಸಲು ಸಿಸಿಬಿ ಮುಂದಾಗಿದೆ. ಮಡಿವಾಳದಲ್ಲಿ ಅತ್ಯಾಧುನಿಕ ತಂತ್ರವಿಲ್ಲದ ಕಾರಣ […]

ಬೆಂಗಳೂರು: ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿ ವಿರೇನ್ ಖನ್ನಾಗೆ ನಾರ್ಕೋ ಟೆಸ್ಟ್ ನಡೆಸಲು ಸಿಸಿಬಿಗೆ ಒಪ್ಪಿಗೆ ಸಿಕ್ಕಿದೆ. 2 ದಿನದಲ್ಲಿ ಅಹಮದಾಬಾದ್‌ನ FSLನಲ್ಲಿ ಖನ್ನಾಗೆ ನಾರ್ಕೋ ಟೆಸ್ಟ್ ನಡೆಸಲು ಸಿದ್ಧತೆ ನಡೆದಿದೆ. ಸದ್ಯ ಆರೋಪಿ ಖನ್ನಾ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾನೆ. ಬಾಡಿ ವಾರಂಟ್ ಪಡೆದು ಸಿಸಿಬಿ ನಾರ್ಕೋ ಟೆಸ್ಟ್ಗೆ ಕರೆದೊಯ್ಯಲಿದ್ದಾರೆ.
ಆರೋಪಿ ಖನ್ನಾ ಬಂಧನವಾದ ದಿನದಿಂದಲೂ ಯಾವುದೇ ಮಾಹಿತಿ ನೀಡಿರಲಿಲ್ಲ. ಹೀಗಾಗಿ ನಾರ್ಕೋ ಟೆಸ್ಟ್ ನಡೆಸಲು ಸಿಸಿಬಿ ಮುಂದಾಗಿದೆ. ಮಡಿವಾಳದಲ್ಲಿ ಅತ್ಯಾಧುನಿಕ ತಂತ್ರವಿಲ್ಲದ ಕಾರಣ ಅಹಮದಾಬಾದ್ಗೆ ಖನ್ನಾನನ್ನ ಕರೆದೊಯ್ಯಲಾಗುತ್ತೆ. ಈ ಬಗ್ಗೆ ಐದು ದಿನದ ಹಿಂದೆ ಕೋರ್ಟ್ ಗೆ ಅರ್ಜಿ ಹಾಕಿ ಅನುಮತಿ ಪಡೆಯಲಾಗಿತ್ತು. ಆದರೆ ಖನ್ನಾ ಟೆಸ್ಟ್ಗೆ ಒಪ್ಪಿರಲಿಲ್ಲ.
ಪಾಲಿಗ್ರಾಫ್ ಟೆಸ್ಟ್ ಹಿನ್ನೆಲೆ: ತನಿಖೆಯಲ್ಲಿ ಆರೋಪಿಯ ಹೇಳಿಕೆ ಅಸ್ಪಷ್ಟ ಮತ್ತು ಸುಳ್ಳು ಹೇಳಿಕೆ ಅನಿಸಿದಾಗ ಪಾಲಿಗ್ರಾಫ್ ಟೆಸ್ಟ್ ಮೊರೆ ಹೋಗಲಾಗುತ್ತೆ. ಇದಕ್ಕೆ ನ್ಯಾಯಾಲಯದ ಅನುಮತಿ ಬೇಕು. ನಂತರ ಆರೋಪಿಯ ಅನುಮತಿಯನ್ನೂ ತನಿಖಾಧಿಕಾರಿಗಳು ಪಡೆಯಬೇಕು. ತದನಂತರ ದೇಹದ ಐದು ಭಾಗಗಳಿಗೆ ವೈರ್ ಮಾದರಿಯ ವಸ್ತು ಅಳವಡಿಸಲಾಗುತ್ತೆ. ಮನಃಶಾಸ್ತ್ರಜ್ಞರು ಇದನ್ನ ನಿರ್ವಹಣೆ ಮಾಡುತ್ತಾರೆ. ವೈರ್ ಅಳವಡಿಸಿದ ಬಳಿಕ ಪ್ರಶ್ನೆಗಳನ್ನ ಕೇಳಲಾಗುತ್ತೆ. ಒಂದಷ್ಟು ಕ್ಲಿಷ್ಟಕರ ಪ್ರಶ್ನೆ ಕೇಳುತ್ತಾರೆ. ಆರೋಪಿ ಸುಳ್ಳು ಉತ್ತರ ಕೊಟ್ಟಾಗ ವ್ಯತ್ಯಯ ಕಂಡು ಬರುತ್ತೆೆೆ. ಈ ಮೂಲಕ ಆರೋಪಿಯ ಹೇಳಿಕೆ ಎಷ್ಟು ಸತ್ಯ ಸುಳ್ಳು ಎಂಬುದು ಗೊತ್ತಾಗುತ್ತದೆ.
ಡ್ರಗ್ಸ್ ಬಗ್ಗೆ ಇಂಚಿಂಚೂ ತಿಳಿದುಕೊಂಡಿರುವ ವಿರೇನ್ ಖನ್ನಾ! ವಿರೇನ್ ಖನ್ನಾ ಮೊಬೈಲ್ ರಿಟ್ರೀವ್ ವೇಳೆ ಸ್ಫೋಟಕ ಮಾಹಿತಿ ಬಯಲಾಗಿದೆ. 262 ಮಾದರಿಯ ಡ್ರಗ್ಸ್ ಡಿಟೇಲ್ಸ್ಗಳನ್ನು ಖನ್ನಾ ತಿಳಿದುಕೊಂಡಿದ್ದ. ಅದರ ಡಿಟೇಲ್ಸ್ ಈಗ ಸಿಸಿಬಿಗೆ ಸಿಕ್ಕಿದೆ. ಪ್ರತಿಯೊಂದು ಡ್ರಗ್ಸ್ ಮಾದರಿ, ಅದನ್ನ ಸೇವಿಸೋ ವಿಧಾನ ಡ್ರಗ್ಸ್ ಸೇವನೆ ಪರಿಣಾಮದ ಬಗೆಗಿನ ಮಾಹಿತಿ ಇರೋ ಫೋಟೋ ಲಭ್ಯವಾಗಿದೆ.
ಡ್ರಗ್ಸ್ ದಂಧೆಯಲ್ಲಿದ್ದ ಖನ್ನಾ ಡ್ರಗ್ಸ್ ಬಗ್ಗೆ ಸಂಪೂರ್ಣ ಅಧ್ಯಯನ ಮಾಡಿದ್ದ. ಗಾಂಜಾ, ಕೊಕೆನ್, ಸಿಂಥೆಟಿಕ್ ಡ್ರಗ್ಸ್ ಎಂದರೇನು? ಯಾವ ಡ್ರಗ್ಸ್ನಿಂದ ಯಾವ ರೀತಿ ಪರಿಣಾಮ ಬೀರುತ್ತೆ? ಯಾವ ಡ್ರಗ್ಸ್ನಿಂದ ದೇಹದ ಸೌಂದರ್ಯ ಹೆಚ್ಚಿಸಬಹುದು? ಯಾವ ಡ್ರಗ್ಸ್ನಿಂದ ಹೆಚ್ಚು ನಶೆಯಲ್ಲಿರಬಹುದು? ಮುಖಕ್ಕೆ ಹೆಚ್ಚು ಗ್ಲೋ ಕೊಡುವ ಡ್ರಗ್ ಯಾವುದು? ಇಡೀ ದಿನ ಖುಷಿಯಾಗಿರಲು ಯಾವ ಡ್ರಗ್ ಬಳಸಬೇಕು? ಹೆಚ್ಚು ಸುಸ್ತಾದಾಗ ಯಾವ ಡ್ರಗ್ ತೆಗೆದುಕೊಳ್ಳಬಹುದು? ಡ್ರಗ್ ಮಾಹಿತಿ ಯಾವ ವೆಬ್ಸೈಟ್ನಲ್ಲಿ ಪಡೆಯಬಹುದು? ಎಂಬ ಬಗ್ಗೆ ಗಾಢವಾಗಿ ಅಧ್ಯಯ ಮಾಡಿದ್ದ. ಸದ್ಯ ಈ ಎಲ್ಲಾ ಮಾಹಿತಿಯಿರೋ ದಾಖಲೆ ರಿಟ್ರೀವ್ನಲ್ಲಿ ಲಭ್ಯವಾಗಿದೆ. ಈ ಮಾಹಿತಿ ಮೇರೆಗೆ ಸಿಸಿಬಿ ತನಿಖೆ ಚುರುಕುಗೊಂಡಿದೆ
Published On - 10:25 am, Tue, 20 October 20




