ಭೀಮೆ ರೌದ್ರತೆಗೆ ಕೊಚ್ಚಿ ಹೋದವು ಬಂಗಾರದ ಬೆಳೆಗಳು, ಜಮೀನಲ್ಲಿ ನಿಂತಿದೆ 10 ಅಡಿ ನೀರು
ಯಾದಗಿರಿ: ಭೀಮಾ ನದಿಗೆ 4 ಲಕ್ಷ ಕ್ಯೂಸೆಕ್ ನಷ್ಟು ನೀರು ಬಿಡುಗಡೆಯಾದ ಹಿನ್ನೆಲೆಯಲ್ಲಿ ಭೀಮಾ ನದಿ ದಡದ ರೈತರಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ರೈತರು ಬೆವರು ಸುರಿಸಿ ಬೆಳೆಸಿದ್ದ ಬೆಳೆಗಳು ಮುಳುಗಿವೆ. ಜಮೀನುಗಳಿಗೆ ಭೀಮಾ ನದಿ ನೀರು ನುಗ್ಗಿದೆ. ನದಿಯಿಂದ 2 ಕಿ.ಮೀ ದೂರದ ವರೆಗೂ ನೀರು ಆವರಿಸಿಕೊಂಡಿದೆ. ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ನಾಯ್ಕಲ್ ಗ್ರಾಮದ 2 ಎಕ್ಕರೆ ಜಮೀನು ಜಲಾವೃತಗೊಂಡಿದ್ದು ಹತ್ತಿ ಹಾಗೂ ಭತ್ತದ ಬೆಳೆ ಸಂಪೂರ್ಣ ನಾಶವಾಗಿದೆ. ಜಮೀನಿನಲ್ಲಿ 10 ಅಡಿ ಎತ್ತರದಷ್ಟು […]

ಯಾದಗಿರಿ: ಭೀಮಾ ನದಿಗೆ 4 ಲಕ್ಷ ಕ್ಯೂಸೆಕ್ ನಷ್ಟು ನೀರು ಬಿಡುಗಡೆಯಾದ ಹಿನ್ನೆಲೆಯಲ್ಲಿ ಭೀಮಾ ನದಿ ದಡದ ರೈತರಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ರೈತರು ಬೆವರು ಸುರಿಸಿ ಬೆಳೆಸಿದ್ದ ಬೆಳೆಗಳು ಮುಳುಗಿವೆ. ಜಮೀನುಗಳಿಗೆ ಭೀಮಾ ನದಿ ನೀರು ನುಗ್ಗಿದೆ. ನದಿಯಿಂದ 2 ಕಿ.ಮೀ ದೂರದ ವರೆಗೂ ನೀರು ಆವರಿಸಿಕೊಂಡಿದೆ.
ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ನಾಯ್ಕಲ್ ಗ್ರಾಮದ 2 ಎಕ್ಕರೆ ಜಮೀನು ಜಲಾವೃತಗೊಂಡಿದ್ದು ಹತ್ತಿ ಹಾಗೂ ಭತ್ತದ ಬೆಳೆ ಸಂಪೂರ್ಣ ನಾಶವಾಗಿದೆ. ಜಮೀನಿನಲ್ಲಿ 10 ಅಡಿ ಎತ್ತರದಷ್ಟು ನೀರು ಆವರಿಸಿಕೊಂಡಿದೆ. ನಾಯ್ಕಲ್ ಗ್ರಾಮದ ಜಮೀನುಗಳು ಕೆರೆಯಂತಾಗಿವೆ. ನಾಲ್ಕು ತಿಂಗಳಿಂದ ಬಂಗಾರದಂತೆ ಬೆಳೆದ ಬೆಳೆ ಕಳೆದುಕೊಂಡು ರೈತರು ಕಂಗಾಲಾಗಿದ್ದಾರೆ.







