ಸಂಪತ್ ರಾಜ್ ವಿರುದ್ಧ ಕ್ರಮ ‘ಕೈ’ಗೊಳ್ಳುವ ಅವಶ್ಯಕತೆ ಇಲ್ಲ -ಡಿಕೆಶಿ ಫರ್ಮಾನು?
ಬೆಂಗಳೂರು: ಡಿಜೆ ಹಳ್ಳಿ ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿಯವರ ನಿವಾಸದ ಮೇಲೆ ನಡೆದ ದಾಳಿಯಲ್ಲಿ ಮಾಜಿ ಮೇಯರ್ ಸಂಪತ್ ರಾಜ್ ಹೆಸರು ಕೇಳಿಬಂದಿತ್ತು. ಇದೀಗ, ಮಾಜಿ ಮೇಯರ್ ಸಂಪತ್ ರಾಜ್ ಬೆನ್ನಿಗೆ ಖುದ್ದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಿಂತಿದ್ದಾರೆ ಎಂದು ಹೇಳಲಾಗಿದೆ. ಸಂಪತ್ ರಾಜ್ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರಂತೆ. ಹಾಗಾಗಿ, ಡಿ.ಜೆ ಹಳ್ಳಿ ಗಲಭೆ ವಿಚಾರವಾಗಿ ಶಾಸಕ ಅಖಂಡ […]

ಬೆಂಗಳೂರು: ಡಿಜೆ ಹಳ್ಳಿ ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿಯವರ ನಿವಾಸದ ಮೇಲೆ ನಡೆದ ದಾಳಿಯಲ್ಲಿ ಮಾಜಿ ಮೇಯರ್ ಸಂಪತ್ ರಾಜ್ ಹೆಸರು ಕೇಳಿಬಂದಿತ್ತು.
ಇದೀಗ, ಮಾಜಿ ಮೇಯರ್ ಸಂಪತ್ ರಾಜ್ ಬೆನ್ನಿಗೆ ಖುದ್ದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಿಂತಿದ್ದಾರೆ ಎಂದು ಹೇಳಲಾಗಿದೆ. ಸಂಪತ್ ರಾಜ್ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರಂತೆ. ಹಾಗಾಗಿ, ಡಿ.ಜೆ ಹಳ್ಳಿ ಗಲಭೆ ವಿಚಾರವಾಗಿ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿಯವರನ್ನು ಕಾಂಗ್ರೆಸ್ ನಾಯಕರು ಕೈ ಬಿಟ್ಟಿದ್ದಾರೆ ಎಂಬ ಮಾತು ಕೇಳಿಬಂದಿದೆ.
ಶ್ರೀನಿವಾಸ್ ಹೈರಾಣ, ಅಖಂಡ ಆತಂಕ.. ರಾಜ್ಯ ಕಾಂಗ್ರೆಸ್ ನಾಯಕರಿಂದಲೇ ಅಖಂಡ ಶ್ರೀನಿವಾಸ್ ಮೂರ್ತಿಗೆ ಬೆಂಬಲ ಸಿಗದ ಹಿನ್ನೆಲೆಯಲ್ಲಿ ಶಾಸಕ ಸಿದ್ದರಾಮಯ್ಯರನ್ನು ಗಟ್ಟಿಯಾಗಿ ನಂಬಿದ್ದಾರೆ ಎಂದು ಹೇಳಲಾಗಿದೆ. ಆದರೆ ಇತ್ತೀಚೆಗೆ, ಸಿದ್ದರಾಮಯ್ಯರಿಂದಲೂ ಪೂರ್ಣ ಪ್ರಮಾಣದ ಬೆಂಬಲ ಸಿಗದೆ ಅಖಂಡ ಶ್ರೀನಿವಾಸ್ ಮೂರ್ತಿ ಆತಂಕಗೊಂಡಿದ್ದಾರೆ.
ಒಂದು ಕಡೆ ಶಾಸಕ ತಮ್ಮ ಬಳಿಯೇ ಬಂದು ಮಾತನಾಡಲಿ ಎಂದು ಶಿವಕುಮಾರ್ ಹೇಳುತ್ತಿದ್ದರೆ ಇತ್ತ ಚುನಾವಣೆ ಸಮಯದಲ್ಲಿ ಪಕ್ಷದೊಳಗೆ ಕಿತ್ತಾಟ ಬೇಡ ಎಂದು ಸಿದ್ದರಾಮಯ್ಯ ಮೌನಕ್ಕೆ ಶರಣಾಗಿದ್ದಾರಂತೆ. ಹೀಗಾಗಿ, ಡಿಜೆ ಹಳ್ಳಿ ಕೆಜಿ ಹಳ್ಳಿ ವಿಚಾರದಲ್ಲಿ ಪೊಲೀಸರ ಮೇಲೆ ಗೂಬೆ ಕೂರಿಸಲು ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ. ಆದರೆ, ಅಖಂಡ ಶ್ರೀನಿವಾಸ್ ಎಷ್ಟೇ ಆಗ್ರಹಿಸಿದರೂ ಸಂಪತ್ ರಾಜ್ ರಕ್ಷಣೆಗೆ ಕೈ ಪಡೆ ನಿಂತಿದೆ.
Published On - 10:55 am, Tue, 20 October 20