ದಾಂಡೇಲಿ ಪ್ರವಾಸಕ್ಕೆ ಬಂದಿದ್ದ ಛತ್ತಿಸಗಢದ ವೈದ್ಯಕೀಯ ವಿದ್ಯಾರ್ಥಿನಿ, ಸೈಕ್ಲಿಂಗ್ ಮಾಡುವಾಗ ಆಯತಪ್ಪಿ ಬಿದ್ದು ಸಾವು
Chhattisgarh: ವೈದ್ಯಕೀಯ ವಿದ್ಯಾರ್ಥಿನಿಯಾಗಿದ್ದ ದೇವಿಕಾ ಧಾರವಾಡಕ್ಕೆ ಸೆಮಿನಾರ್‌ಗಾಗಿ ಬಂದಿದ್ದರು. ರಜಾ ದಿನದ ಕಾರಣ ಧಾರವಾಡದಿಂದ ದಾಂಡೇಲಿಗೆ ಪ್ರವಾಸಕ್ಕೆ ಆಗಮಿಸಿದ್ದರು. ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದುರ್ಘಟನೆ ನಡೆದಿದೆ.
ಕಾರವಾರ: ಕರ್ನಾಟಕದ ಪ್ರವಾಸಕ್ಕೆಂದು ದಾಂಡೇಲಿಗೆ ಬಂದಿದ್ದಾಗ ಬಿರಂಪಾಲಿ- ಅಕೋರ್ಡಾ ಎಂಬಲ್ಲಿ ಛತ್ತೀಸ್ಗಢದ (Chhattisgarh) ಯುವತಿಯೊಬ್ಬರು ಸಾವನ್ನಪ್ಪಿದ್ದಾರೆ. ಛತ್ತಿಸಗಢದ ದೇವಿಕಾ ಸಂಜಯ್ ವಾಸವಣೆ (25) ಮೃತಪಟ್ಟ ಯುವತಿ. ಸೈಕ್ಲಿಂಗ್ ಮಾಡುವಾಗ (Cycling) ಆಯತಪ್ಪಿ ಮರಕ್ಕೆ ಢಿಕ್ಕಿ ಹೊಡೆದು ದೇವಿಕಾ ಸಂಜಯ್ ವಾಸವಣೆ ಸಾವಿಗೀಡಾಗಿದ್ದಾರೆ. ಈ ವೇಳೆ ತಲೆಯ ಭಾಗಕ್ಕೆ ಪೆಟ್ಟಾಗಿ ಮೂಗಿನಿಂದ ರಕ್ತ ಸ್ರಾವವಾಗಿದ್ದು, ಯುವತಿ ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ (Medical Student Devika Sanjay Vasavane).
ಹಿಡನ್ ವ್ಯಾಲಿ ಹೋಮ್ ಸ್ಟೇನಲ್ಲಿ ಸ್ನೇಹಿತರ ಜತೆ ದೇವಿಕಾ ತಂಗಿದ್ದರು. ವೈದ್ಯಕೀಯ ವಿದ್ಯಾರ್ಥಿನಿಯಾಗಿದ್ದ ದೇವಿಕಾ ಧಾರವಾಡಕ್ಕೆ ಸೆಮಿನಾರ್‌ಗಾಗಿ ಬಂದಿದ್ದರು. ರಜಾ ದಿನದ ಕಾರಣ ಧಾರವಾಡದಿಂದ ದಾಂಡೇಲಿಗೆ ಪ್ರವಾಸಕ್ಕೆ ಆಗಮಿಸಿದ್ದರು. ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದುರ್ಘಟನೆ ನಡೆದಿದೆ. ದಾಂಡೇಲಿ ಸರಕಾರಿ ಆಸ್ಪತ್ರೆಯಲ್ಲಿ ನಡೆದ ಯುವತಿಯ ಮರಣೋತ್ತರ ಪರೀಕ್ಷೆ ನಡೆದಿದೆ.
ಕಬ್ಬಿನ ಲಾರಿಗೆ ಬೈಕ್ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು: ಯಾದಗಿರಿ: ಕಬ್ಬಿನ ಲಾರಿಗೆ ಬೈಕ್ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಿಂಬದಿ ಸವಾರನಿಗೆ ಗಾಯಗಳಾಗಿವೆ. ಯಾದಗಿರಿ ನಗರದ ಹೊರ ಭಾಗದ ರೈಲ್ವೆ ಬ್ರಿಡ್ಜ್ ಬಳಿ ದುರ್ಘಟನೆ ನಡೆದಿದೆ. ಶಹಾಪುರ ತಾಲೂಕಿನ ಮದ್ರಕಿ ಗ್ರಾಮದ ದೇವಪ್ಪ (50) ಮೃತ ಬೈಕ್ ಸವಾರ. ಯಾದಗಿರಿಯಿಂದ ಊರಿಗೆ ಹೋಗುವಾಗ ಘಟನೆ ನಡೆದಿದೆ. ಗಾಯಾಳು ಹಿಂಬದಿ ಬೈಕ್ ಸವಾರನಿಗೆ ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಯಾದಗಿರಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ದಾಬಸ್ ಪೇಟೆ ಬಳಿ ಭೀಕರ ರಸ್ತೆ ಅಪಘಾತ: ಲಾರಿಗೆ ಹಿಂದಿನಿಂದ ಬೈಕ್ ಡಿಕ್ಕಿ, ತಂದೆ-ಮಗಳು ಸಾವು ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕು ದಾಬಸ್ ಪೇಟೆಯಲ್ಲಿ ಲಾರಿಗೆ ಹಿಂದಿನಿಂದ ಬೈಕ್ ಡಿಕ್ಕಿಯಾಗಿ ತಂದೆ ಮತ್ತು ಮಗಳು ಸಾವನ್ನಪ್ಪಿದ್ದಾರೆ. ಬೈಕ್ನಲ್ಲಿದ್ದ ತಾಯಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಸುಮಾರು 40 ವರ್ಷ ವಯಸ್ಸಿನ ತಂದೆ ಮತ್ತು 6 ವರ್ಷದ ಮಗಳು ಮೃತ ದುರ್ದೈವಿಗಳು. ಬೆಂಗಳೂರು ಮಾರ್ಗವಾಗಿ ತುಮಕೂರು ಕಡೆ ಮಗು ಜೊತೆ ದಂಪತಿ ತೆರಳುತ್ತಿದ್ದರು.
iPhone ಖರೀದಿಸಲು ಮನೆಯವರ ಜೊತೆ ಮುನಿಸಿಕೊಂಡು ನಾಪತ್ತೆಯಾಗಿದ್ದ ಮೈಸೂರು ವಿದ್ಯಾರ್ಥಿ ಕೆರೆಯಲ್ಲಿ ಶವವಾಗಿ ಪತ್ತೆ ಸಾಂಸ್ಕೃತಿಕ ನಗರಿ ಮೈಸೂರಿನ ಹೊರವಲಯದಲ್ಲಿರುವ ಇಲವಾಲದಿಂದ ವಾರದ ಹಿಂದೆ ನಾಪತ್ತೆಯಾಗಿದ್ದ ವಿದ್ಯಾರ್ಥಿ ನಾಗೇಶ್(17) ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಐ ಫೋನ್ (iPhone) ಖರೀದಿ ಮಾಡುವ ವಿಚಾರವಾಗಿ ಮನೆಯವರ ಜೊತೆ ಮುನಿಸಿಕೊಂಡಿದ್ದ ನಾಗೇಶ್ ತಾನೇ ಹಣ ಹೊಂದಿಸಿದ್ದ. ಆತ ಹೊಂದಿಸಿದ್ದ ಹಣಕ್ಕಾಗಿ ಸ್ನೇಹಿತರೇ ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಈ ಸಂಬಂಧ ನಾಗೇಶ್ ಪೋಷಕರು ಇಲವಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಹಣಕ್ಕಾಗಿ ಸ್ನೇಹಿತರೇ ಕೊಲೆ ಮಾಡಿರಬೇಕು -ಅನುಮಾನ: ವಿದ್ಯಾರ್ಥಿ ನಾಗೇಶ್ ಬಹಳ ದಿನದಿಂದ ಐ ಫೋನ್ ಖರೀದಿ ಮಾಡಬೇಕು ಎಂಬ ಆಸೆಯನ್ನು ಹೊಂದಿದ್ದ. ಈ ಬಗ್ಗೆ ಪೋಷಕರ ಬಳಿ ಕೇಳಿದಾಗ ಅಷ್ಟೊಂದು ಹಣದ ಫೋನ್ ಏಕೆ ಎಂದು ನಿರಾಕರಿಸಿದ್ದರು. ಹೀಗಾಗಿ ನಾಗೇಶ್ ಪೋಷಕರೊಂದಿಗೆ ಮುನಿಸಿಕೊಂಡಿದ್ದ. ಸದ್ಯ ತಾನೇ ಐ ಫೋನ್ ಖರೀದಿಸಲು ಹಣ ಹೊಂದಿಸುತ್ತಿದ್ದ. ಆದ್ರೆ ವಾರದ ಹಿಂದೆ ಏಕಾಏಕಿ ನಾಗೇಶ್ ನಾಪತ್ತೆಯಾಗಿದ್ದ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಿಸಲಾಗಿತ್ತು. ಆದ್ರೆ ಇಂದು ವಿದ್ಯಾರ್ಥಿ ನಾಗೇಶ್ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಈ ಸಂಬಂಧ ಪೋಷಕರು ನಾಗೇಶ್ ಹೊಂದಿಸಿದ್ದ ಹಣಕ್ಕಾಗಿ ಸ್ನೇಹಿತರೇ ಕೊಲೆ ಮಾಡಿರಬೇಕು ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ.
Published On - 8:50 pm, Thu, 3 March 22