ಸಂಪುಟಕ್ಕೆ 7 ಶಾಸಕರ ಸೇರ್ಪಡೆಗೆ ಗ್ರೀನ್​​ ಸಿಗ್ನಲ್​ ಸಿಕ್ಕಿದೆ; ಜ.13ರಂದು ನೂತನ ಸಚಿವರ ಪ್ರಮಾಣ ವಚನ -ಸಿಎಂ BSY

ಸಂಪುಟಕ್ಕೆ 7 ಶಾಸಕರ ಸೇರ್ಪಡೆಗೆ ವರಿಷ್ಠರು ಸಮ್ಮತಿಸಿದ್ದಾರೆ. ಜನವರಿ 13ರ ಮಧ್ಯಾಹ್ನ ನೂತನ ಸಚಿವರ ಪ್ರಮಾಣ ವಚನ ನೆರವೇರಲಿದೆ. ಆ 7 ಸಚಿವರ ಹೆಸರುಗಳನ್ನ ನಾಳೆ ತಿಳಿಸುತ್ತೇನೆ ಎಂದು ಯಡಿಯೂರಪ್ಪ ಹೇಳಿದರು.

ಸಂಪುಟಕ್ಕೆ 7 ಶಾಸಕರ ಸೇರ್ಪಡೆಗೆ ಗ್ರೀನ್​​ ಸಿಗ್ನಲ್​ ಸಿಕ್ಕಿದೆ; ಜ.13ರಂದು ನೂತನ ಸಚಿವರ ಪ್ರಮಾಣ ವಚನ -ಸಿಎಂ BSY
ಸಿಎಂ ಬಿ.ಎಸ್.ಯಡಿಯೂರಪ್ಪ
Edited By:

Updated on: Jan 11, 2021 | 11:14 AM

ಬೆಂಗಳೂರು: ಸಂಪುಟಕ್ಕೆ 7 ಶಾಸಕರ ಸೇರ್ಪಡೆಗೆ ಗ್ರೀನ್​​ ಸಿಗ್ನಲ್​ ಸಿಕ್ಕಿದೆ ಎಂದು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸಿಎಂ ಬಿಎಸ್​ವೈ ಹೇಳಿದ್ದಾರೆ.

ಸಂಪುಟಕ್ಕೆ 7 ಶಾಸಕರ ಸೇರ್ಪಡೆಗೆ ವರಿಷ್ಠರು ಸಮ್ಮತಿಸಿದ್ದಾರೆ. ಜನವರಿ 13ರ ಮಧ್ಯಾಹ್ನ ನೂತನ ಸಚಿವರ ಪ್ರಮಾಣ ವಚನ ನೆರವೇರಲಿದೆ. ಆ 7 ಸಚಿವರ ಹೆಸರುಗಳನ್ನ ನಾಳೆ ತಿಳಿಸುತ್ತೇನೆ ಎಂದು ಯಡಿಯೂರಪ್ಪ ಹೇಳಿದರು.

ಸಂಪುಟ ವಿಸ್ತರಣೆಗೆ ಬಿಜೆಪಿ ಹೈಕಮಾಂಡ್​ ಗ್ರೀನ್ ಸಿಗ್ನಲ್​ ಕೊಟ್ಟಿದೆ. ಕೆಐಎಬಿಯಿಂದ ಹೊರ ಬರುತ್ತಿದ್ದಂತೆ ಸಿಎಂ ಬಿಎಸ್​ವೈಗೆ ಕರೆ ಮಾಡಿ ಬಿಜೆಪಿ ವರಿಷ್ಠರು ಮಾಹಿತಿ ನೀಡಿದ್ದಾರೆ. ಹೀಗಾಗಿ, ಸಚಿವ ಸಂಪುಟ ವಿಸ್ತರಿಸಲು ಸಿಎಂ ಬಿಎಸ್​ವೈಗೆ ಅನುಮತಿ ಸಿಕ್ಕಿದೆ.

ಬೆಂಗಳೂರಿಗೆ ಹಿಂದಿರುಗಿದ್ದ ಸಿಎಂ ಬಿಎಸ್​ವೈ ದೆಹಲಿಯಲ್ಲಿ ಕೇಂದ್ರ ಗೃಹ ಇಲಾಖೆ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಮತ್ತು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್​ ಭೇಟಿಯಾಗಿದ್ದರು.

ಸಿಎಂ ಯಡಿಯೂರಪ್ಪಗೆ ಬಿಜೆಪಿ ಹೈಕಮಾಂಡ್​ ಕರೆ ಮಾಡುತ್ತಿದ್ದಂತೆ ಏರ್​ಪೋರ್ಟ್​ ಮುಂಭಾಗ ಕಾರು ನಿಲ್ಲಿಸಿ ಸಿಎಂ ಮಾತುಕತೆ ನಡೆಸಿದರು. ಬಿಜೆಪಿ ವರಿಷ್ಠರ ಜೊತೆ ಮೊಬೈಲ್​ನಲ್ಲಿ ಸಿಎಂ BSY ಮಾತುಕತೆ ನಡೆಸಿದರು. ಈ ವೇಳೆ, ಕಾರು ಚಾಲಕ ಸೇರಿದಂತೆ ಎಲ್ಲರನ್ನೂ ದೂರಕ್ಕೆ ಕಳುಹಿಸಿ ಒಬ್ಬರೇ ಕುಳಿತು ಮೊಬೈಲ್​ನಲ್ಲಿ ಮಾತಾಡಿದರು ಎಂದು ಹೇಳಲಾಗಿದೆ.

ಸದ್ಯ, ನೂತನ ಸಚಿವರಾಗುವ ಸಂಭಾವ್ಯರ ಪಟ್ಟಿಯಲ್ಲಿ ಎಂ.ಟಿ.ಬಿ. ನಾಗರಾಜ್, ಮುನಿರತ್ನ, ಆರ್.ಶಂಕರ್, ಉಮೇಶ್‌ ಕತ್ತಿ, ಸಿ.ಪಿ.ಯೋಗೀಶ್ವರ್, ಹಾಲಪ್ಪ ಆಚಾರ್, ಸುನಿಲ್‌ ಕುಮಾರ್‌ ಹಾಗೂ ಅರವಿಂದ್‌ ಲಿಂಬಾವಳಿಯ ಹೆಸರು ಪ್ರಮುಖವಾಗಿ ಕೇಳಿಬಂದಿದೆ.

ಸಿಎಂ ಜತೆ ಬೆಂಗಳೂರಿಗೆ ಆಗಮಿಸದ ಪುತ್ರ ವಿಜಯೇಂದ್ರ
ಇತ್ತ, ತಮ್ಮ ತಂದೆಯೊಟ್ಟೆಗೆ ವರಿಷ್ಠರ ಜೊತೆ ಚರ್ಚೆಗೆ ತೆರಳಿದ್ದ ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರ ವಾಪಸ್​ ಬಂದಿಲ್ಲ ಎಂದು ತಿಳಿದುಬಂದಿದೆ. ಹಾಗಾಗಿ, ಅವರು ದೆಹಲಿಯಲ್ಲಿ ಉಳಿದುಕೊಂಡಿರೂ ಸಾಧ್ಯತೆಯಿದೆ.

ಮೀಟಿಂಗ್ ಸಂತೋಷ ತಂದಿದೆ.. ಸಚಿವ ಸಂಪುಟದ ಬಗ್ಗೆ ಆದಷ್ಟು ಬೇಗ ಗುಡ್ ನ್ಯೂಸ್ ಸಿಗಲಿದೆ -ಸಿಎಂ BSY

Published On - 11:02 pm, Sun, 10 January 21