AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಡುಪಿಯಲ್ಲಿಂದು ಸಿಎಂ ಎರಡನೇ ದಿನದ ಟೆಂಪಲ್ ರನ್, ಕುಂಬಾಶಿ ದೇಗುಲದ ಗಣಯಾಗದಲ್ಲಿ ಭಾಗಿ

ಕರಾವಳಿ ಭಾಗದ ಪ್ರಸಿದ್ಧ ಗಣಪತಿ ಕ್ಷೇತ್ರವಾಗಿರುವ ಆನೆಗುಡ್ಡದಲ್ಲಿ ಹಾಸನದ ಜೆ.ಪಿ.ರಾಘವೇಂದ್ರ ರಾವ್ ಕುಟುಂಬದಿಂದ ಸಹಸ್ರ ನಾರಿಕೇಳ ಗಣಯಾಗ ನಡೆಯಲಿದೆ. ಜೆ.ಪಿ.ರಾಘವೇಂದ್ರ ರಾವ್, ಸಿಎಂ ಯಡಿಯೂರಪ್ಪನವರ ಆಪ್ತರು. ಹೀಗಾಗಿ ಇಂದು ನಡೆಯುವ ಯಾಗದಲ್ಲಿ ಭಾಗವಹಿಸಲಿದ್ದಾರೆ.

ಉಡುಪಿಯಲ್ಲಿಂದು ಸಿಎಂ ಎರಡನೇ ದಿನದ ಟೆಂಪಲ್ ರನ್, ಕುಂಬಾಶಿ ದೇಗುಲದ ಗಣಯಾಗದಲ್ಲಿ ಭಾಗಿ
ಆಯೇಷಾ ಬಾನು
ಆಯೇಷಾ ಬಾನು|

Updated on:Jan 19, 2021 | 1:31 PM

Share

ಉಡುಪಿ: ರಾಜ್ಯದ ಮುಖ್ಯಮಂತ್ರಿ ಬಿ.ಎಸ್.​ಯಡಿಯೂರಪ್ಪ ಇಂದು ಕೂಡ ಟೆಂಪಲ್ ರನ್ ಮುಂದುವರೆಸಲಿದ್ದಾರೆ. ಕರಾವಳಿ ಪ್ರವಾಸದಲ್ಲಿರುವ ಸಿಎಂ ನಿನ್ನೆ 3 ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಇಂದು ಮತ್ತೆ ಜಿಲ್ಲೆಯ ಕುಂದಾಪುರ ತಾಲೂಕಿನ ಕುಂಭಾಶಿಯ ಆನೆಗುಡ್ಡಕ್ಕೆ ಸಿಎಂ ಬಿಎಸ್ ವೈ ಭೇಟಿ ನೀಡಲಿದ್ದಾರೆ.

ಕರಾವಳಿ ಭಾಗದ ಪ್ರಸಿದ್ಧ ಗಣಪತಿ ಕ್ಷೇತ್ರವಾಗಿರುವ ಆನೆಗುಡ್ಡದಲ್ಲಿ ಹಾಸನದ ಜೆ.ಪಿ.ರಾಘವೇಂದ್ರ ರಾವ್ ಕುಟುಂಬದಿಂದ ಸಹಸ್ರ ನಾರಿಕೇಳ ಗಣಯಾಗ ನಡೆಯಲಿದೆ. ಜೆ.ಪಿ.ರಾಘವೇಂದ್ರ ರಾವ್, ಸಿಎಂ ಯಡಿಯೂರಪ್ಪನವರ ಆಪ್ತರು. ಹೀಗಾಗಿ ಇಂದು ನಡೆಯುವ ಯಾಗದಲ್ಲಿ ಭಾಗವಹಿಸಲಿದ್ದಾರೆ.

ಗೋಹತ್ಯೆ ನಿಷೇಧ ಕಾನೂನು ಜಾರಿ ಸಮಾಧಾನ ತಂದಿದೆ ಇನ್ನು ಉಡುಪಿ ಜಿಲ್ಲಾ ಪ್ರವಾಸದಲ್ಲಿರುವ ಸಿಎಂ ಯಡಿಯೂರಪ್ಪ “ಯಾವಾಗಲೂ ನಾವು ರಾಜಕೀಯ ಗೊಂದಲದಲ್ಲಿರುತ್ತೇವೆ. ರಾಜಕೀಯ ಮರೆತು ಧಾರ್ಮಿಕ ಪ್ರವಾಸಕ್ಕಾಗಿ ಬಂದಿದ್ದೇನೆ ಎಂದು ಉಡುಪಿಯಲ್ಲಿ ಹೇಳಿದ್ರು. ಈ ವೇಳೆ ಕೃಷ್ಣಮಠ, ಕರಂಬಳ್ಳಿ ವೆಂಕಟರಮಣ ದೇಗುಲಕ್ಕೆ ಹೋಗಿದ್ದೆ. ಇಂದು ಮಹಾಲಕ್ಷ್ಮೀ, ಗಣಪತಿ ದೇಗುಲಕ್ಕೆ ಹೋಗುತ್ತೇನೆ. ಕಾಪು ಹೆಜಮಾಡಿ ಬಂದರು ಶಿಲಾನ್ಯಾಸ ಕಾರ್ಯಕ್ರಮವಿದೆ. ಮೀನುಗಾರರ ಸಮಸ್ಯೆ ಏನಿದೆ ಎಂದು ತಿಳಿದುಕೊಳ್ಳುತ್ತೇನೆ. ಗೋಹತ್ಯೆ ನಿಷೇಧ ಕಾನೂನು ಜಾರಿ ನನಗೆ ಸಮಾಧಾನ ತಂದಿದೆ. ಅಷ್ಟೆ ಅಲ್ಲ ಕಾನೂನು ಜಾರಿ ಮಾಡಿದ್ದು ಎಲ್ಲರಿಗೂ ಸಮಾಧಾನ ತಂದಿದೆ. ಗೋಹತ್ಯೆ ನಿಷೇಧ ಮಾಡುವುದು ಗಾಂಧೀಜಿ ಕನಸಾಗಿತ್ತು. ಬೇರೆ ಬೇರೆ ಕಾರಣಗಳಿಂದ ಮುಂದೂಡುತ್ತಾ ಬಂದರು. ಈಗ ನಾವು ಕಾಯ್ದೆಯನ್ನು ತಕ್ಷಣಕ್ಕೆ ಜಾರಿಗೆ ತಂದಿದ್ದೇವೆ” ಎಂದರು.

‘ರಾಜಕೀಯ ಜಂಜಾಟದ ಮಧ್ಯೆ ಈ ಪ್ರವಾಸ ಮಾಡ್ತಿದ್ದೇನೆ.. ನೆಮ್ಮದಿ, ತೃಪ್ತಿಯಿದ್ದರೆ ಮಾತ್ರ ಸುಗಮ ಆಡಳಿತ ಸಾಧ್ಯ’

Published On - 9:40 am, Tue, 19 January 21

Follow Us
Ayesha Banu
Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!