AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಫಿನಾಡಲ್ಲಿ ನಿಷ್ಕಲ್ಮಶ ಪ್ರೇಮಕಥನ: ಎರಡು ಕಾಲುಗಳ ಸ್ವಾದೀನ ಕಳೆದುಕೊಂಡ ಪ್ರೇಯಸಿ.. ವೀಲ್​ಚೇರ್ ಮೇಲೆ ಕೂರಿಸಿ ತಾಳಿ ಕಟ್ಟಿದ ಪ್ರೇಮಿ!

ನಾನು ವ್ಹೀಲ್ ಚೇರ್ ಮೇಲೆ ಜೀವನ ಸಾಗಿಸ್ತಿದ್ದೀನಿ. ನಿಲೋಕ್ಕಾಗಲ್ಲ, ಓಡಾಡೋಕ್ಕಾಗಲ್ಲ, ಮುಂದೇನೋ ಗೊತ್ತಿಲ್ಲ. ನನ್ನ ಮದ್ವೆಯಾಗಿ ಏನ್ ಸುಖ ಪಡ್ತೀಯಾ ನನ್ನ ಮರೆತು ಬೇರೆ ಮದ್ವೆ ಆಗು ಅಂದಿದ್ಳು.

ಕಾಫಿನಾಡಲ್ಲಿ ನಿಷ್ಕಲ್ಮಶ ಪ್ರೇಮಕಥನ: ಎರಡು ಕಾಲುಗಳ ಸ್ವಾದೀನ ಕಳೆದುಕೊಂಡ ಪ್ರೇಯಸಿ.. ವೀಲ್​ಚೇರ್ ಮೇಲೆ ಕೂರಿಸಿ ತಾಳಿ ಕಟ್ಟಿದ ಪ್ರೇಮಿ!
6 ವರ್ಷ ಪ್ರೀತಿಸಿದ ಯುವತಿಯನ್ನ ವರಿಸಿದ ಯುವಕ
ಪೃಥ್ವಿಶಂಕರ
|

Updated on:Apr 01, 2021 | 12:41 PM

Share

ಚಿಕ್ಕಮಗಳೂರು: ಅವರದ್ದು 6 ವರ್ಷದ ಪ್ರೀತಿ. ಆದರೆ ಪ್ರೇಯಸಿಯ 2 ಕಾಲು ಸ್ವಾದೀನ ಕಳೆದುಕೊಂಡು ಎರಡು ವರ್ಷಗಳೇ ಕಳೆದ್ರೂ ಆ ಜೋಡಿಯ ಪ್ರೀತಿ ಕುಂದಿಲ್ಲ. ಅವಳೇ ತನ್ನನ್ನ ಬಿಡು ಅಂದ್ರೂ ಆತಬಿಡಲಿಲ್ಲ. ವೀಲ್ ಚೇರ್ ಮೇಲೆ ಕೂರಿಸಿ ತಾಳಿ ಕಟ್ಟಿ ಅಂದು ಇಂದು-ಎಂದೆಂದೂ ನೀ ನನ್ನವಳೇ ಎಂದಿದ್ದಾನೆ. ಕಾಫಿನಾಡಿನ ನಿಷ್ಕಲ್ಮಷ ಪ್ರೇಮಕಥನ ಇಲ್ಲಿದೆ ನೋಡಿ.

ನನ್ನ ಮರೆತು ಬೇರೆ ಮದ್ವೆ ಆಗು ಅಂದಿದ್ಳು ಪ್ರೇಯಸಿ ತನ್ನ ಪ್ರೇಮಿಗೆ, ನಾನು ವ್ಹೀಲ್ ಚೇರ್ ಮೇಲೆ ಜೀವನ ಸಾಗಿಸ್ತಿದ್ದೀನಿ. ನಿಲೋಕ್ಕಾಗಲ್ಲ, ಓಡಾಡೋಕ್ಕಾಗಲ್ಲ, ಮುಂದೇನೋ ಗೊತ್ತಿಲ್ಲ. ನನ್ನ ಮದ್ವೆಯಾಗಿ ಏನ್ ಸುಖ ಪಡ್ತೀಯಾ ನನ್ನ ಮರೆತು ಬೇರೆ ಮದ್ವೆ ಆಗು ಅಂದಿದ್ಳು. ಯಾಕಂದ್ರೆ, ಹುಟ್ಟಿನಿಂದಲೂ ಚೆನ್ನಾಗಿದ್ದ ಸ್ವಪ್ನ ದ್ವಿತೀಯ ಪಿಯು ಓದಿ ಟೈಪಿಂಗ್ ಕ್ಲಾಸ್ ಹೋದಾಗ ಇದ್ದಕ್ಕಿಂದ್ದಂತೆ ಕುಸಿದುಬಿದ್ದು ಕಾಲುಗಳ ಸ್ವಾದೀನ ಕಳೆದುಕೊಂಡು ವೀಲ್ಚೇೆರ್ ಮೇಲೆ ಜೀವನ ಸಾಗಿಸುತ್ತಿದ್ದಳು.

ಈ ಸಮಸ್ಯೆಗೆ ವೈದ್ಯರ ಬಳಿಯೂ ಪರಿಹಾರ ಸಿಗಲಿಲ್ಲ. ಇಷ್ಟಾದ್ರೂ ಪ್ರೇಯಸಿಯ ಕಾಲು ಸರಿಯಾಗಲೇ ಇಲ್ಲ. ಜೀವನವೇ ಬೇಸತ್ತು ನೊಂದಿದ್ದಳು. ಆದ್ರೆ 6 ವರ್ಷದಿಂದ ಪ್ರೀತಿಸಿದ್ದ ಮನು ಧೈರ್ಯತುಂಬಿ ಆಕೆಯನ್ನೇ ಮದುವೆಯಾಗಿದ್ದಾನೆ. ವೀಲ್ ಚೇರ್ ಮೇಲೇ ಕೂರಿಸಿಯೇ ತಾಳಿ ಕಟ್ಟಿ, ಅದೇ ವೀಲ್ ಚೇರ್ನಲ್ಲಿ ಮನೆಗೆ ಕರೆದುಕೊಂಡು ಹೋಗಿದ್ದಾನೆ.

ತನ್ನ ಪ್ರೇಯಸಿಯನ್ನ ಎತ್ತಿಕೊಂಡಿರುವ ಯುವಕ

ಜಾತಿ-ಅಂತಸ್ತಿನ ಸಮಾಧಿ ಮೇಲೆ ಹಸೆಮಣೆ ಏರಿದ ನಿಷ್ಕಲ್ಮಶ ಪ್ರೀತಿ.. ಅಂದಹಾಗೆ ಇಬ್ಬರದ್ದೂ ಚಿಕ್ಕಮಗಳೂರು ತಾಲೂಕಿನ ಭಕ್ತರಹಳ್ಳಿ. ಇಬ್ಬರದ್ದೂ ಬಡಕುಟುಂಬ. ಇಬ್ರು ಪಿಯುಸಿ ಓದಿದ್ದಾರೆ. ಹಾರ್ಡ್ವೇರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮನು ನನ್ನವಳಿಗೆ ಹೀಗಾಯ್ತಲ್ಲ ಎಂದು ಕೆಲಸ ಬಿಟ್ಟು ಮದುವೆಗೆ ಮುನ್ನವೇ ಹಳ್ಳಿಯಲ್ಲಿ ಕೆಲಸ ಮಾಡಿಕೊಂಡು ಊರೂರು ಸುತ್ತಿದ್ದಾನೆ. ಆದ್ರೆ, ಎಲ್ಲೂ ಸರಿಯಾಗಿಲ್ಲ. ಹಾಗೇ ಇಬ್ಬರದ್ದು ಅಂತರ್ಜತಿಯಾದ್ರು ಜಾತಿ ಅಡ್ಡ ಬಂದಿಲ್ಲ.

ಆಸ್ತಿ-ಅಂತಸ್ತು ಆಕರ್ಷಣೆಗೂ ಇಲ್ಲಿ ಬೆಲೆ ಸಿಕ್ಕಿಲ್ಲ. ಪ್ರಾಮಾಣಿಕ ಹಾಗೂ ನಿಷ್ಕಲ್ಮಷ ಪ್ರೀತಿಯೇ ಇಲ್ಲಿ ಜಾತಿ-ಅಂತಸ್ತಿನ ಸಮಾಧಿ ಮೇಲೆ ಹಸೆಮಣೆ ಏರಿದೆ. ಮನು ತಾಯಿ ಕೂಡ ನನ್ನ ಮಗ ಇಷ್ಟ ಪಟ್ಟಿದ್ದಾನೆ. ಅಷ್ಟೇ ಮುಗೀತು ಅಂತಿದ್ದಾರೆ. ಊರಿನ ಜನ ಕೂಡ ಪ್ರೇಮಿಗಳ ಬೆನ್ನಿಗೆ ನಿಂತಿದ್ದಾರೆ. ಒಟ್ನಲ್ಲಿ ಕಾಫಿ ನಾಡಿನ ಈ ಪ್ರೇಮ್ ಕಹಾನಿ ಇತರರಿಗೂ ಮಾದರಿ ಆಗಿದೆ. ಕಷ್ಟದಲ್ಲೂ ಕೈಬಿಡದ ಪ್ರೇಮಿ, ಈ ನಡುವೆ ಪ್ರೇಮಿಗಳ ಬೆನ್ನಿಗೆ ನಿಂತ ಪೋಷಕರು ಹಾಗೂ ಊರಿನವರು. ಒಟ್ನಲ್ಲಿ ಇದೊಂದು ಅಮರ ಪ್ರೇಮ ಕಥೆ.

ಇದನ್ನೂ ಓದಿ:ವಿಚ್ಛೇದನಕ್ಕೆ ಅರ್ಜಿ ಹಾಕಿದ ಜೋಡಿಗಳಲ್ಲಿ ಮತ್ತೆ ಪ್ರೀತಿ; ಗದಗ ಲೋಕ ಅದಾಲತ್​ನಲ್ಲಿ ಪುನಃ ಒಂದಾದ ಎರಡು ಜೋಡಿ

Published On - 9:53 am, Thu, 1 April 21