
ಮಂಡ್ಯ: ಗೌರಿ ಹಬ್ಬದಂದು ಕಾವೇರಿ ಮಾತೆಗೆ ಸಿಎಂ BSY ಬಾಗಿನ ಅರ್ಪಿಸಲಿದ್ದಾರೆ ಎಂದು ನಗರದಲ್ಲಿ ಸಚಿವ ಕೆ.ಸಿ.ನಾರಾಯಣಗೌಡ ತಿಳಿಸಿದ್ದಾರೆ.
ಗೌರಿ ಹಬ್ಬದಂದು ಬಾಗಿನ ಕಾರ್ಯಕ್ರಮ ನಿಗದಿಯಾಗಿದೆ. KRSನಲ್ಲಿ ಬಾಗಿನ ಅರ್ಪಿಸಿದ ಬಳಿಕ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕಬಿನಿ ಡ್ಯಾಂಗೆ ಬಾಗಿನ ಅರ್ಪಿಸಲಿದ್ದಾರೆ. ಆದರೆ, ಈ ಬಾರಿ ಆಡಂಬರವಾಗಿ ಬಾಗಿನ ಕಾರ್ಯಕ್ರಮ ನಡೆಸಲ್ಲ ಅಂತಾ ಹೇಳಿದ್ದಾರೆ.
ಕಳೆದ ಬಾರಿಯೂ ಆಗಸ್ಟ್ ತಿಂಗಳಲ್ಲಿ KRS ತುಂಬಿ ತುಳುಕಿತ್ತು
ಕಾವೇರಿ ಮಾತೆ ಶಕ್ತಿ ತುಂಬಿದ್ದು ಬಾಗಿನ ನೀಡುವುದು ನಮ್ಮ ಧರ್ಮ. ರೈತರಿಗೆ, ಬೆಂಗಳೂರು ಸೇರಿದಂತೆ ಜನರ ಕುಡಿಯುವ ನೀರಿಗೆ ತೊಂದರೆಯಾಗದಿರಲಿ ಎಂದು ಪೂಜೆ ಸಲ್ಲಿಸಲಾಗುವುದು. ಕಳೆದ ಬಾರಿಯೂ ಯಡಿಯೂರಪ್ಪನವರು ಇದೇ ಆಗಸ್ಟ್ ತಿಂಗಳಲ್ಲಿ ಬಾಗಿನ ಅರ್ಪಿಸಿದ್ದರು. ಆಗ, ಬೇಸಿಗೆಯಲ್ಲೂ ನೀರಿಗೆ ತೊಂದರೆಯಾಗಿರಲಿಲ್ಲ ಎಂದು ಹೇಳಿದರು.
Published On - 1:17 pm, Sat, 15 August 20