ಸಿಎಂ ಯಡಿಯೂರಪ್ಪ ಅವರ ಆದೇಶವನ್ನೇ ದಿಕ್ಕರಿಸಿದ್ರಾ ರೇಣುಕಾಚಾರ್ಯ?

ದಾವಣಗೆರೆ: ಭಾನುವಾರವಾದ ಇವತ್ತು ರಾಜ್ಯಾದ್ಯಂತ ಲಾಕ್‌ಡೌನ್‌ ಇದೆ. ಆದ್ರೆ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರಿಗೆ ಮಾತ್ರ ಇದು ಅನ್ವಯವಾಗೊಲ್ಲ ಅಂತಾ ಕಾಣುತ್ತೆ. ಹೀಗಾಗಿ ಲಾಕ್‌ ಡೌನ್‌ ಇದ್ರೂ ಅದನ್ನು ಉಲ್ಲಂಘಿಸಿ ಕಾಮಗಾರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಸ್ವತಃ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿರುವ ರೇಣುಕಾಚಾರ್ಯ ರಾಜ್ಯ ಸರ್ಕಾರದ ಆದೇಶವನ್ನ ಕಟ್ಟು ನಿಟ್ಟಾಗಿ ಪಾಲಿಸಬೇಕು ಮತ್ತು ಪಾಲಿಸುವಂತೆ ನೋಡಿಕೊಳ್ಳಬೇಕು. ಆದ್ರೆ ಅದನ್ನು ಬಿಟ್ಟು ಪಬ್ಲಿಸಿಟಿಯ ಹುಚ್ಚಿನಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜೆಸಿಬಿ ಬೇರೆ ಹತ್ತಿ ಚಲಾಯಿಸಿದ್ದಾರೆ ಕೂಡಾ. ಇದು ಇಷ್ಟಕ್ಕೆ ನಿಂತಿಲ್ಲ ನಂತರ […]

ಸಿಎಂ ಯಡಿಯೂರಪ್ಪ ಅವರ ಆದೇಶವನ್ನೇ ದಿಕ್ಕರಿಸಿದ್ರಾ ರೇಣುಕಾಚಾರ್ಯ?

Updated on: Jul 19, 2020 | 2:27 PM

ದಾವಣಗೆರೆ: ಭಾನುವಾರವಾದ ಇವತ್ತು ರಾಜ್ಯಾದ್ಯಂತ ಲಾಕ್‌ಡೌನ್‌ ಇದೆ. ಆದ್ರೆ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರಿಗೆ ಮಾತ್ರ ಇದು ಅನ್ವಯವಾಗೊಲ್ಲ ಅಂತಾ ಕಾಣುತ್ತೆ. ಹೀಗಾಗಿ ಲಾಕ್‌ ಡೌನ್‌ ಇದ್ರೂ ಅದನ್ನು ಉಲ್ಲಂಘಿಸಿ ಕಾಮಗಾರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.

ಸ್ವತಃ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿರುವ ರೇಣುಕಾಚಾರ್ಯ ರಾಜ್ಯ ಸರ್ಕಾರದ ಆದೇಶವನ್ನ ಕಟ್ಟು ನಿಟ್ಟಾಗಿ ಪಾಲಿಸಬೇಕು ಮತ್ತು ಪಾಲಿಸುವಂತೆ ನೋಡಿಕೊಳ್ಳಬೇಕು. ಆದ್ರೆ ಅದನ್ನು ಬಿಟ್ಟು ಪಬ್ಲಿಸಿಟಿಯ ಹುಚ್ಚಿನಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜೆಸಿಬಿ ಬೇರೆ ಹತ್ತಿ ಚಲಾಯಿಸಿದ್ದಾರೆ ಕೂಡಾ.

ಇದು ಇಷ್ಟಕ್ಕೆ ನಿಂತಿಲ್ಲ ನಂತರ ಜನರ ಗುಂಪು ಸೇರಿಸಿ ಸಾರ್ವಜನಿಕ ಮೀಟಿಂಗ್‌ ಮಾಡಿದ್ದಾರೆ. ನಂತರ ಸೇರಿದ್ದ ನೂರಾರು ಜನರಿಗೆ ಮಾಸ್ಕ್‌ ವಿತರಣೆ ಮಾಡಿದ್ದಾರೆ. ಆದ್ರೆ ಸ್ವತಃ ಶಾಸಕರಾಗಿದ್ದುಕೊಂಡು ಲಾಕ್‌ ಡೌನ್‌ ಉಲ್ಲಂಘಿಸಿದ್ದಲ್ಲದೇ ಜನರನ್ನ ಸೇರಿಸಿದ್ದು ಮಾತ್ರ ಸಾರ್ವಜನಿಕ ವಲಯದಲ್ಲಿ ಟೀಕೆಗೊಳಗಾಗಿದೆ.