ಮೃತ ಸೋಂಕಿತನ ಅಂತ್ಯಸಂಸ್ಕಾರದಲ್ಲಿ ಭಾಗಿಯಾದ ಡಿ.ಕೆ.ಸುರೇಶ್
ರಾಮನಗರ: ಬೆಂಗಳೂರಿನಲ್ಲಿ ನಿನ್ನೆ ಕೊರೊನಾ ಶಂಕಿತ ವೃದ್ಧ ಮೃತಪಟ್ಟಿದ್ದರು. ಅವರ ಅಂತ್ಯಕ್ರಿಯೆಯಲ್ಲಿ ಸಂಸದ ಡಿ.ಕೆ.ಸುರೇಶ್ ಭಾಗಿಯಾಗಿದ್ದಾರೆ. ಪಿಪಿಇ ಕಿಟ್ ಧರಿಸಿ ಡಿ.ಕೆ.ಸುರೇಶ್ ರಾಮನಗರ ಜಿಲ್ಲೆಯ ಕನಕಪುರದ ದೇಗುಲ ಮಠದ ಸ್ಮಶಾನದಲ್ಲಿ ನಡೆದ ಸೋಂಕಿತನ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದಾರೆ. ಕೊರೊನಾ ಸೋಂಕಿತ 71 ವರ್ಷದ ವೃದ್ಧ ನಿನ್ನೆ ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಮೃತರು ಕನಕಪುರದ ನಿವಾಸಿಯಾಗಿದ್ದರು. ವೃದ್ಧನ ಅಂತ್ಯಸಂಸ್ಕಾರಕ್ಕೆ ಸಂಸದ ಡಿ.ಕೆ.ಸುರೇಶ್ ಸೇರಿದಂತೆ ಎಮ್ಎಲ್ಸಿ ಎಸ್ ರವಿ ಕೂಡ ಭಾಗಿಯಾಗಿದ್ರು.
ರಾಮನಗರ: ಬೆಂಗಳೂರಿನಲ್ಲಿ ನಿನ್ನೆ ಕೊರೊನಾ ಶಂಕಿತ ವೃದ್ಧ ಮೃತಪಟ್ಟಿದ್ದರು. ಅವರ ಅಂತ್ಯಕ್ರಿಯೆಯಲ್ಲಿ ಸಂಸದ ಡಿ.ಕೆ.ಸುರೇಶ್ ಭಾಗಿಯಾಗಿದ್ದಾರೆ. ಪಿಪಿಇ ಕಿಟ್ ಧರಿಸಿ ಡಿ.ಕೆ.ಸುರೇಶ್ ರಾಮನಗರ ಜಿಲ್ಲೆಯ ಕನಕಪುರದ ದೇಗುಲ ಮಠದ ಸ್ಮಶಾನದಲ್ಲಿ ನಡೆದ ಸೋಂಕಿತನ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದಾರೆ.
ಕೊರೊನಾ ಸೋಂಕಿತ 71 ವರ್ಷದ ವೃದ್ಧ ನಿನ್ನೆ ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಮೃತರು ಕನಕಪುರದ ನಿವಾಸಿಯಾಗಿದ್ದರು. ವೃದ್ಧನ ಅಂತ್ಯಸಂಸ್ಕಾರಕ್ಕೆ ಸಂಸದ ಡಿ.ಕೆ.ಸುರೇಶ್ ಸೇರಿದಂತೆ ಎಮ್ಎಲ್ಸಿ ಎಸ್ ರವಿ ಕೂಡ ಭಾಗಿಯಾಗಿದ್ರು.
Published On - 2:34 pm, Sun, 19 July 20