ಧಾರವಾಡ: ಮಾಜಿ ಸಚಿವ ವಿನಯ್ ಕುಲಕರ್ಣಿ ಬಿಜೆಪಿಗೆ ಸೇರ್ತಿದ್ದಾರೆ ಎಂಬ ಮಾತುಗಳು ಕೇಳಿ ಬರ್ತಿವೆ. ಈ ಬಗ್ಗೆ ಖುದ್ದು ವಿನಯ್ ಕುಲಕರ್ಣಿ ಮಾತನಾಡಿದ್ದು ಅವರು ಬಿಜೆಪಿ ಸೇರ್ತಿದ್ದಾರಾ ಎಂಬ ಮಾತಿಗೆ ಸ್ಪಷ್ಟನೆ ನೀಡಿದ್ದಾರೆ.
ಕೆಲ ಮಾಧ್ಯಮಗಳಲ್ಲಿ ಊಹಾಪೋಹ ಸುದ್ದಿಗಳು ಬರ್ತಾ ಇವೆ. ನಾನಾಗಲೇ ಅಮಿತ್ ಶಾ ಅವರನ್ನ ಭೇಟಿಯಾಗಿ ಬಿಜೆಪಿ ಸೇರ್ಪಡೆ ಬಗ್ಗೆ ಮಾತನಾಡಿದ್ದೇನೆ ಎಂದು ಹೇಳುತ್ತಿದ್ದಾರೆ. ಆದರೆ ನಾನಿನ್ನೂ ಒಬ್ಬರಿಗೂ ಭೇಟಿ ಆಗಿಲ್ಲ. ಇದೆಲ್ಲಾ ಸುಮ್ಮನೆ ಹೊರಗಿನ ಸುದ್ದಿಗಳು, ನಾನು ರಾಜಸ್ಥಾನಕ್ಕೆ ಕುದುರೆ ತರಲಿಕ್ಕೆ ಹೋಗಿದ್ದೆ. ನನ್ನ ಫಾರ್ಮ್ನಲ್ಲಿ ಕೇಳಿ ನೋಡಿ.. ಈಗಾಗಲೇ ಕುದುರೆಗಳನ್ನ ಮಾರಾಟ ಮಾಡಿದ್ದೇನೆ. ನಾನು ಕುದುರೆಗಾಗಿ ಬಹಳ ಕಡೆ ತಿರುಗಾಡಿ ಬಂದಿದ್ದೇನೆ ಎಂಬ ಸುಳ್ಳು ಸುದ್ದಿಗಳನ್ನ ಬಿತ್ತರಿಸುತ್ತಿದ್ದಾರೆ. ಯಾವುದಾದರೂ ಒಂದು ಕ್ಲಿಪಿಂಗ್ ಇದ್ರೆ ಹೇಳಿ. ಎಲ್ಲರನ್ನೂ ಡಿಸ್ಟರ್ಬ್ ಮಾಡ್ತಾ ಇದಾರೆ ಸುಖಾ ಸುಮ್ಮನೆ. ಸಾಕ್ಷಿ ಆಧಾರಿತವಾಗಿ ಸುದ್ದಿ ಮಾಡಿ ಎಂದು ಮಾಧ್ಯಮಕ್ಕೆ ವಿನಂತಿಸಿಕೊಳ್ಳುತ್ತೇನೆ. ರಾಜಕೀಯದಲ್ಲಿ ಬಹಳ ಕಷ್ಟಪಟ್ಟು ಬೆಳದಿರುತ್ತೇವೆ. ಅಂತಹವರ ಹೆಸರುಗಳನ್ನ ತೆಜೋವಧೆ ಮಾಡಬೇಡಿ ಎಂದು ಮಾಧ್ಯಮದ ವಿರುದ್ಧ ವಿನಯ್ ಕುಲಕರ್ಣಿ ಗರಂ ಆಗಿದ್ದರು.
ನಾನು ಕಾರ್ಯಕರ್ತರನ್ನ ಕೈ ಬಿಡಲ್ಲ. ಕಾರ್ಯಕರ್ತರ ನಿರ್ಧಾರ ತೆಗೆದುಕೊಂಡೇ ನಾನು ಮುಂದುವರೆಯುತ್ತೇನೆ. ನಾನು ಕಾರ್ಯಕರ್ತರ ವಿರುದ್ಧ ಏನೂ ಮಾಡಲ್ಲ. ಸಣ್ಣ ವಯಸ್ಸಿನಲ್ಲಿ ರಾಜಕೀಯಕ್ಕೆ ಬಂದಿದ್ದೇನೆ. ನಾನು ಬಿಜೆಪಿಗೆ ಸೇರುವಾಗ ಮಾಧ್ಯಮಗಳಿಗೆ ಹೇಳಿಯೇ ಸೇರ್ಪಡೆಯಾಗುತ್ತೇನೆ ಎಂದು ಧಾರವಾಡದಲ್ಲಿ ಮಾಧ್ಯಮಗಳಿಗೆ ತಿಳಿಸಿದ್ರು.
ಇನ್ನು CBIನಿಂದ ತಪ್ಪಿಸಿಕೊಳ್ಳಲು ನಾನು ಬಿಜೆಪಿ ಸೇರ್ತೇನೆ ಅಂತಾ ಸುದ್ದಿ ಮಾಡ್ತಾ ಇದ್ದಾರೆ. ನಾನು ಬಿಜೆಪಿ ಸೆರಿದರೆ ಸಿಬಿಐ ಸುಮ್ಮನೆ ಬಿಡುತ್ತಾರಾ. ತನಿಖೆ ನಡೆದಿದೆ ನಡೆಯಲಿ. ಈಗಾಗಲೇ 600 ಜನರನ್ನ ತನಿಖೆಗೆ ಒಳಪಡಿಸಲಾಗಿದೆ. ಒಂದು ವರ್ಷದಿಂದ ತನಿಖೆ ನಡೆಯುತ್ತಿದೆ. CBI ಬಿಜೆಪಿ ಅಂಡರ್ ಇದೆ ಅಂತಾ ನಿಮ್ಮ ಸುದ್ದಿಯಿಂದ ಗೊತ್ತಾಗುತ್ತಿದೆ ಎಂದು ಹೇಳಿದ್ರು.