ಹಸಿರು ಕಾನನದ ಮಧ್ಯೆ ಮನಸಿಗೆ ಮುದ ನೀಡುತ್ತಿದೆ ವನ್ಯಜೀವಿಗಳ ವಿಹಾರ.. ಪ್ರವಾಸಿಗರು ಖುಷ್

  • TV9 Web Team
  • Published On - 15:40 PM, 8 Oct 2020
ಹಸಿರು ಕಾನನದ ಮಧ್ಯೆ ಮನಸಿಗೆ ಮುದ ನೀಡುತ್ತಿದೆ ವನ್ಯಜೀವಿಗಳ ವಿಹಾರ.. ಪ್ರವಾಸಿಗರು ಖುಷ್

ಚಾಮರಾಜನಗರ: ಹಸಿರನ್ನೇ ಹೊದ್ದು ನಿಂತಿರೋ ಕಾನನ. ಸ್ವಚ್ಛಂದ ತಾಣದಲ್ಲಿ ವನ್ಯಜೀವಿಗಳ ಸುಂದರ ನೋಟ. ಕಂಡಲ್ಲೆಲ್ಲ ಓಡಾಡುತ್ತಿರುವ ಜಿಂಕೆಗಳ ಹಿಂಡು. ನೀರಿನಲ್ಲಿ ವಿಶಾಂತ್ರಿ ಪಡೆಯುತ್ತಿರುವ ಹುಲಿರಾಯ. ಪ್ರಕೃತಿ ಮಾತೆಯ ಸೊಬಗು ಸವಿಯೋಕೆ ಬರ್ತಿರೋ ಪ್ರವಾಸಿಗರ ಹಿಂಡು.

ಚಾಮರಾಜನಗರ ಜಿಲ್ಲೆಯಲ್ಲಿರುವ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಈಗ ಹಸಿರು ಸೀರೆಯುಟ್ಟ ನಾರಿಯಂತೆ ಕಂಗೊಳಿಸುತ್ತಿದೆ. ನಿಧಾನಗತಿಯಲ್ಲಿ ಕೆರೆಕಟ್ಟೆಗಳು ತುಂಬಲಾರಂಭಿಸಿವೆ. ಎತ್ತ ನೋಡಿದರೂ ಹಸಿರ ವನರಾಶಿ ಕಂಡುಬರುತ್ತಿದೆ. ಕೊರೊನಾದಿಂದ ಪ್ರವಾಸಿಗರಿಲ್ಲದೆ ಖಾಲಿ ಖಾಲಿಯಾಗಿದ್ದ ಸಫಾರಿ ಈಗ ತುಂಬಿ ತುಳುಕುತ್ತಿದೆ. ಅದರಲ್ಲೂ ವಿಕೆಂಡ್ ದಿನಗಳಲ್ಲಿ ಪ್ರವಾಸಿಗರು ಸಾಗರೋಪಾದಿಯಲ್ಲಿ ಹರಿದು ಬರ್ತಿದ್ದಾರೆ.

ಚಾಮರಾಜನಗರ ಜಿಲ್ಲೆಯಲ್ಲಿ ಹಿಂಗಾರು ಮಳೆ ಬೀಳುತ್ತಿವುದರಿಂದ ಅಕ್ಪೋಬರ್ ತಿಂಗಳಲ್ಲೂ ಬಂಡೀಪುರ ಕಳೆಗಟ್ಟಿದೆ. ನೀರು ಹಾಗೂ ಮೇವಿನ ಚಿಂತೆ ಇಲ್ಲದೆ ವನ್ಯಜೀವಿಗಳು ಸ್ವಚ್ಚಂದವಾಗಿ ವಿಹರಿಸುವ ದೃಶ್ಯ ಸಾಮಾನ್ಯವಾಗಿ ಕಂಡುಬರುತ್ತಿದೆ. ಕೆರೆಕಟ್ಟೆಗಳಲ್ಲಿ ನೀರು ಕುಡಿಯಲು, ಇಲ್ಲವೇ ಹಸಿರು ಹುಲ್ಲು ಮೇಯಲು ಬರುವ ಕಾಡೆಮ್ಮೆ, ಜಿಂಕೆ, ಕಡವೆಯಂತಹ ಪ್ರಾಣಿಗಳನ್ನ ನೋಡಿದರೆ ಮನಸು ಮುದಗೊಳ್ಳುತ್ತದೆ.

ಒಟ್ನಲ್ಲಿ ಕೊರೊನಾದಿಂದ ಪ್ರವಾಸಿಗರಿಲ್ಲದೇ ಬಿಕೋ ಎನ್ನುತ್ತಿದ್ದ ಬಂಡಿಪುರ ಈಗ ಕಳೆಗಟ್ಟಲಾರಂಭಿಸಿದ್ದು, ಪ್ರವಾಸಿಗರು ಸಖತ್ ಎಂಜಾಯ್ ಮಾಡುತ್ತಿದ್ದಾರೆ.