AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Contactless Transaction: ಇನ್ಮುಂದೆ ATMನಲ್ಲಿ ಹಣ ಪಡೆಯಲು ನೀವು ಕಾರ್ಡ್​ ಬಳಸಬೇಕಿಲ್ಲ!

Mastercard: ಈ ವ್ಯವಸ್ಥೆ ಶೀಘ್ರದಲ್ಲೇ ದೇಶದ ಎಲ್ಲಾ ATM ಕೇಂದ್ರಗಳಲ್ಲೂ ಜಾರಿಯಾಗಲಿದ್ದು, ನೀವು ನಿಮ್ಮ ATM ಕಾರ್ಡ್​ ಬಳಸದೇ, ಮಶೀನ್​ನಲ್ಲಿ ಪಿನ್​ ನಮೂದಿಸದೇ hಣ ಪಡೆಯುವುದು ಸಾಧ್ಯವಾಗಲಿದೆ.

Contactless Transaction: ಇನ್ಮುಂದೆ ATMನಲ್ಲಿ ಹಣ ಪಡೆಯಲು ನೀವು ಕಾರ್ಡ್​ ಬಳಸಬೇಕಿಲ್ಲ!
ಎಟಿಎಂ ಕೇಂದ್ರ (ಸಾಂದರ್ಭಿಕ ಚಿತ್ರ)
Skanda
|

Updated on:Feb 12, 2021 | 1:17 PM

Share

ತಂತ್ರಜ್ಞಾನ ದಿನೇದಿನೇ ಮುಂದುವರೆಯುತ್ತಿದ್ದಂತೆ ಎಲ್ಲಾ ಕ್ಷೇತ್ರಗಳೂ ಬದಲಾವಣೆಗೆ ಒಗ್ಗಿಕೊಳ್ಳುತ್ತಿವೆ. ಈಗಾಗಲೇ ಡಿಜಿಟಲ್ ಇಂಡಿಯಾ ಯೋಜನೆಯಡಿಯಲ್ಲಿ ಕ್ಯಾಶ್​ಲೆಸ್ ವ್ಯವಹಾರಕ್ಕೆ ದೇಶದಲ್ಲಿ ಸಾಕಷ್ಟು ಮಹತ್ವ ಒದಗಿದ್ದು ತಂತ್ರಜ್ಞಾನ ಬಳಕೆ ಜನಸಾಮಾನ್ಯರಿಗೆ ಸುಲಭವಾಗಿ ತಲುಪಿದೆ. ಈ ಬೆಳವಣಿಗೆಗಳು ಕೊರೊನಾ ಸಂದರ್ಭದಲ್ಲಂತೂ ಜನರ ಪಾಲಿಗೆ ವರದಾನವಾಗಿದ್ದವು. ಅದರ ಮುಂದುವರಿದ ಭಾಗವೆಂಬಂತೆ ATM ಕೇಂದ್ರಗಳಲ್ಲೂ ಈಗ ನೂತನ ತಂತ್ರಜ್ಞಾನ ಆಧಾರಿತ ಪದ್ಧತಿ ಜಾರಿಗೆ ತರಲು ಯೋಜಿಸಲಾಗಿದ್ದು. ಕಾಂಟ್ಯಾಕ್ಟ್ ಲೆಸ್ ವ್ಯವಹಾರಕ್ಕೆ ಇದು ದಾರಿ ಮಾಡಿಕೊಡಲಿದೆ ಎಂದು ಸಂಬಂಧಿಸಿದವರು ಹೇಳಿದ್ದಾರೆ. ATMಗಳಲ್ಲಿ ಕಾರ್ಡ್​ ಬಳಸದೇ ಕೇವಲ QR ಕೋಡ್ ಮೂಲಕವೇ ಹಣ ಪಡೆಯುವ ವ್ಯವಸ್ಥೆ ಸದ್ಯದಲ್ಲೇ ಎಲ್ಲೆಡೆ ಲಭ್ಯವಾಗಲಿದೆ.

ಇದಕ್ಕಾಗಿ AGS Transact Technologies ಜೊತೆಗೆ Mastercard ಕೈ ಜೋಡಿಸಿದ್ದು, ಈ ನೂತನ ತಂತ್ರಜ್ಞಾನದಡಿಯಲ್ಲಿ ಮೊಬೈಲ್ ಬ್ಯಾಂಕಿಂಗ್ ಆ್ಯಪ್ ಬಳಸಿಕೊಂಡು ATM ಯಂತ್ರದಿಂದ ಹಣಪಡೆಯಬಹುದಾಗಿದೆ. ಸದ್ಯ Mastercard ಬಳಕೆದಾರರಿಗೆ ಹೊಸ ಸೌಲಭ್ಯ ಸಿಗಲಿದ್ದು, ಗ್ರಾಹಕರು ಹಣ ಪಡೆಯುವ ಮುನ್ನ ATM ಯಂತ್ರದ ಮೇಲೆ ಕಾಣುವ QR ಕೋಡ್ ಸ್ಕ್ಯಾನ್ ಮಾಡಬೇಕಿದೆ. ನಂತರ ತಮ್ಮ ಮೊಬೈಲ್​ನಲ್ಲಿ ಪಿನ್​ ನಮೂದಿಸಿ, ಪಡೆಯಬೇಕಾದ ಹಣದ ಮೊತ್ತವನ್ನೂ ಹಾಕಿ ನಗದು ಸ್ವೀಕರಿಸಬಹುದಾಗಿದೆ.

ಈ ವ್ಯವಸ್ಥೆ ಶೀಘ್ರದಲ್ಲೇ ದೇಶದ ಎಲ್ಲಾ ATM ಕೇಂದ್ರಗಳಲ್ಲೂ ಜಾರಿಯಾಗಲಿದ್ದು, ನೀವು ನಿಮ್ಮ ATM ಕಾರ್ಡ್​ ಬಳಸದೇ, ಮಶೀನ್​ನಲ್ಲಿ ಪಿನ್​ ನಮೂದಿಸದೇ ಹಣ ಪಡೆಯುವುದು ಸಾಧ್ಯವಾಗಲಿದೆ.

Published On - 1:01 pm, Fri, 12 February 21

ರಾಯ್ ಆತ್ಮಹತ್ಯೆ ತನಿಖೆ ಬಗ್ಗೆ ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ರಾಯ್ ಆತ್ಮಹತ್ಯೆ ತನಿಖೆ ಬಗ್ಗೆ ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ವೆಸ್ಟ್ ಇಂಡೀಸ್ ಸ್ಕೋರ್ 114 ರನ್: 118 ರನ್ ಬಾರಿಸಿ ಸೋತ ಸೌತ್ ಆಫ್ರಿಕಾ
ವೆಸ್ಟ್ ಇಂಡೀಸ್ ಸ್ಕೋರ್ 114 ರನ್: 118 ರನ್ ಬಾರಿಸಿ ಸೋತ ಸೌತ್ ಆಫ್ರಿಕಾ
ಮಹಿಳಾ ಸಬಲೀಕರಣ ಮತ್ತು ಉದ್ಯೋಗ ಸೃಷ್ಟಿಗೆ ವಿಶೇಷ ಒತ್ತು
ಮಹಿಳಾ ಸಬಲೀಕರಣ ಮತ್ತು ಉದ್ಯೋಗ ಸೃಷ್ಟಿಗೆ ವಿಶೇಷ ಒತ್ತು
ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜಯಮಾಲಾ
ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜಯಮಾಲಾ
ಕೇಂದ್ರ ಬಜೆಟ್‌ ಮಂಡನೆ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಿ
ಕೇಂದ್ರ ಬಜೆಟ್‌ ಮಂಡನೆ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಿ
ಒಂದೇ ಪಂದ್ಯದಲ್ಲಿ ಬರೋಬ್ಬರಿ 11 ವಿಕೆಟ್ ಕಬಳಿಸಿದ ಶಹಬಾಝ್ ಅಹ್ಮದ್
ಒಂದೇ ಪಂದ್ಯದಲ್ಲಿ ಬರೋಬ್ಬರಿ 11 ವಿಕೆಟ್ ಕಬಳಿಸಿದ ಶಹಬಾಝ್ ಅಹ್ಮದ್
ಮಾಘ ಹುಣ್ಣಿಮೆ: ಕಾವೇರಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನಕ್ಕೆ ಭಕ್ತಸಾಗರ
ಮಾಘ ಹುಣ್ಣಿಮೆ: ಕಾವೇರಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನಕ್ಕೆ ಭಕ್ತಸಾಗರ
ನಿರ್ಮಲಾ ಸೀತಾರಾಮನ್​​​​​ಗೆ ಚಾರ್ಕೋಲ್ ಸ್ಕೆಚ್ ಮೂಲಕ ಸ್ವಾಗತ
ನಿರ್ಮಲಾ ಸೀತಾರಾಮನ್​​​​​ಗೆ ಚಾರ್ಕೋಲ್ ಸ್ಕೆಚ್ ಮೂಲಕ ಸ್ವಾಗತ
5 ವಿಕೆಟ್​ ಕಬಳಿಸಿ ಅತ್ಯಂತ ಹೀನಾಯ ದಾಖಲೆ ಬರೆದ ಅರ್ಷದೀಪ್ ಸಿಂಗ್
5 ವಿಕೆಟ್​ ಕಬಳಿಸಿ ಅತ್ಯಂತ ಹೀನಾಯ ದಾಖಲೆ ಬರೆದ ಅರ್ಷದೀಪ್ ಸಿಂಗ್
‘ಕಲ್ಟ್’ ಸಿನಿಮಾ ನೋಡಿ ಕಣ್ಣೀರು ಹಾಕಿದ ಸಿಎಂ ಸಿದ್ದರಾಮಯ್ಯ
‘ಕಲ್ಟ್’ ಸಿನಿಮಾ ನೋಡಿ ಕಣ್ಣೀರು ಹಾಕಿದ ಸಿಎಂ ಸಿದ್ದರಾಮಯ್ಯ