ಕೊರೊನಾ ಭೀತಿ: ಆಸ್ಪತ್ರೆಯಿಂದ ಎಸ್ಕೇಪ್ ಆಗಿದ್ದ ವ್ಯಕ್ತಿ ಕೊನೆಗೂ ಪತ್ತೆ!

ಮಂಗಳೂರು: ಡೆಡ್ಲಿ ವೈರಸ್ ಕೊರೊನಾ ಕರಾವಳಿ ಜನರ ನಿದ್ದೆಗೆಡಿಸಿದೆ. ಆಸ್ಪತ್ರೆಯಿಂದ ಎಸ್ಕೇಪ್ ಆಗಿ ಆತಂಕ ಸೃಷ್ಟಿಸಿದ್ದ ಕೊರೊನಾ ಶಂಕಿತ ವ್ಯಕ್ತಿ ಕೊನೆಗೂ ಪತ್ತೆಯಾಗಿದ್ದಾನೆ. ಆತನ ರಕ್ತದ ಮಾದರಿ ಪಡೆದಿರೋ ವೈದ್ಯರು ವರದಿಗಾಗಿ ಕಣ್ಣಿಗೆ ಎಣ್ಣೆ ಬಿಟ್ಕೊಂಡು ಕಾಯ್ತಿದ್ದಾರೆ. ಶಾಕ್ ಆಗಿರೋ ಕಡಲತಡಿ ಮಂದಿ ಹೊರಗೆ ಹೆಜ್ಜೆ ಇಡೋಕು ಭಯ ಪಡ್ತಿದ್ದಾರೆ. ಆಸ್ಪತ್ರೆಯಿಂದ ಎಸ್ಕೇಪ್ ಆಗಿದ್ದ ವ್ಯಕ್ತಿ ಕೊನೆಗೂ ಪತ್ತೆ..! ಕಿಲ್ಲರ್ ಕೊರೊನಾ ವಿಶ್ವಕ್ಕೆ ವಿಶ್ವವನ್ನೇ ಹಿಂಡಿ ಹಿಪ್ಪೆ ಮಾಡ್ತಿದೆ.. ಡೆಡ್ಲಿ ವೈರಸ್​ ದೇಶಕ್ಕೂ ದಾಂಗುಡಿ ಇಟ್ಟಿರೋ ಏಟಿಗೆ […]

ಕೊರೊನಾ ಭೀತಿ: ಆಸ್ಪತ್ರೆಯಿಂದ ಎಸ್ಕೇಪ್ ಆಗಿದ್ದ ವ್ಯಕ್ತಿ ಕೊನೆಗೂ ಪತ್ತೆ!
Follow us
ಸಾಧು ಶ್ರೀನಾಥ್​
|

Updated on:Mar 10, 2020 | 7:36 AM

ಮಂಗಳೂರು: ಡೆಡ್ಲಿ ವೈರಸ್ ಕೊರೊನಾ ಕರಾವಳಿ ಜನರ ನಿದ್ದೆಗೆಡಿಸಿದೆ. ಆಸ್ಪತ್ರೆಯಿಂದ ಎಸ್ಕೇಪ್ ಆಗಿ ಆತಂಕ ಸೃಷ್ಟಿಸಿದ್ದ ಕೊರೊನಾ ಶಂಕಿತ ವ್ಯಕ್ತಿ ಕೊನೆಗೂ ಪತ್ತೆಯಾಗಿದ್ದಾನೆ. ಆತನ ರಕ್ತದ ಮಾದರಿ ಪಡೆದಿರೋ ವೈದ್ಯರು ವರದಿಗಾಗಿ ಕಣ್ಣಿಗೆ ಎಣ್ಣೆ ಬಿಟ್ಕೊಂಡು ಕಾಯ್ತಿದ್ದಾರೆ. ಶಾಕ್ ಆಗಿರೋ ಕಡಲತಡಿ ಮಂದಿ ಹೊರಗೆ ಹೆಜ್ಜೆ ಇಡೋಕು ಭಯ ಪಡ್ತಿದ್ದಾರೆ.

ಆಸ್ಪತ್ರೆಯಿಂದ ಎಸ್ಕೇಪ್ ಆಗಿದ್ದ ವ್ಯಕ್ತಿ ಕೊನೆಗೂ ಪತ್ತೆ..! ಕಿಲ್ಲರ್ ಕೊರೊನಾ ವಿಶ್ವಕ್ಕೆ ವಿಶ್ವವನ್ನೇ ಹಿಂಡಿ ಹಿಪ್ಪೆ ಮಾಡ್ತಿದೆ.. ಡೆಡ್ಲಿ ವೈರಸ್​ ದೇಶಕ್ಕೂ ದಾಂಗುಡಿ ಇಟ್ಟಿರೋ ಏಟಿಗೆ ಎಲ್ರೂ ಬೆಚ್ಚಿ ಬಿದ್ದಿದ್ದಾರೆ.. ಕಡಲತಡಿಗೂ ಕಿಲ್ಲರ್ ಕೊರೊನಾ ಹೆಜ್ಜೆ ಇಟ್ಟಿದೆ ಅನ್ನೋ ಸುದ್ದಿ ಕೇಳಿ ಶಾಕ್ ಆಗಿದ್ರು.. ಅದ್ರಲ್ಲೂ ಆಸ್ಪತ್ರೆಯಿಂದಲೇ ಕೊರೊನಾ ಶಂಕಿತ ವ್ಯಕ್ತಿ ಜೂಟ್ ಆಗಿದ್ದು ಎಲ್ಲರನ್ನೂ ನಡುಗಿಸ್ಬಿಟ್ಟಿತ್ತು.

ಅಯ್ಯೋ.. ಕೊರೊನಾ ವೈರಸ್ ಮಂಗಳೂರಿಗೆ ಎಂಟ್ರಿ ಕೊಡ್ತಾ.. ಮುಗೀತು ನಮ್ಮ ಕಥೆ ಅಂತ ಎಲ್ಲರೂ ಅಂತಿದ್ರು. ಕೊರೊನಾ ಭೀತಿಗೆ ಕರಾವಳಿ ನಗರ ಮಂಗಳೂರಿನಲ್ಲಿ ಹೈಅಲರ್ಟ್ ಮಾಡಿದ್ರು. ಈ ವೇಳೆ ದುಬೈನಿಂದ ಮಂಗಳೂರಿಗೆ ಆಗಮಿಸಿದ್ದ ಓರ್ವ ಪ್ರಯಾಣಿಕನನ್ನ ತಪಾಸಣೆ ನಡೆಸಿದ ವೇಳೆ ಜ್ವರ ಇರೋದು ಪತ್ತೆಯಾಗಿತ್ತು.

ಟಿವಿ9 ವರದಿಯಿಂದ ಆರೋಗ್ಯಾಧಿಕಾರಿಗಳು ಅಲರ್ಟ್..! ಕೊರೊನಾ ಶಂಕಿತ ವ್ಯಕ್ತಿಯನ್ನ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ರು. ಇನ್ನೇನೂ ಐಸೋಲೇಷನ್ ವಾರ್ಡ್​​ಗೆ ಶಿಫ್ಟ್ ಮಾಡ್ಬೇಕು ಅನ್ನೋವಷ್ಟರಲ್ಲಿ ಕೊರೊನಾ ಶಂಕಿತ ವ್ಯಕ್ತಿ ಆಸ್ಪತ್ರೆಯಿಂದ ಜೂಟ್ ಆಗಿದ್ದ. ರಾಜ್ಯದಲ್ಲಿ ಆವರಿಸಿರೋ ಕೊರೊನಾ ಭೀತಿಯನ್ನ ಇಮ್ಮಡಿಗೊಳಿಸಿದ್ದ. ಅದ್ಯಾವಾಗ ಟಿವಿ9ನಲ್ಲಿ ಸುದ್ದಿ ಪ್ರಸಾರವಾಯ್ತೋ ಪರಾರಿಯಾಗಿದ್ದ ವ್ಯಕ್ತಿಯನ್ನ ಆರೋಗ್ಯಾಧಿಕಾರಿಗಳು ಮತ್ತೆ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇನ್ನು, ಮಂಗಳೂರು ಹೊರವಲಯದಲ್ಲಿರೋ ಕೊರೊನಾ ಶಂಕಿತ ವ್ಯಕ್ತಿ ಮನೆಗೆ ಆರೋಗ್ಯಾಧಿಕಾರಿಗಳು ಹೋಗಿದ್ರು. ಆದ್ರೆ ಆ ವ್ಯಕ್ತಿ ಸಂಬಂಧಿಕರ ಮನೆಗೆ ಹೋಗಿದ್ದಾನೆ ಅನ್ನೋ ಸುದ್ದಿ ಟಿವಿ9ನಲ್ಲಿ ಮತ್ತೆ ಪ್ರಸಾರ ಮಾಡಲಾಯ್ತು. ಈ ವರದಿ ಬಳಿಕ ಅಲರ್ಟ್ ಆದ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಆತನ ಮನೆ ಪತ್ತ ಹಚ್ಚಿದ್ರು.

ಮಾಸ್ಕ್ ಹಾಕಿಕೊಂಡು ಕೊರೊನಾ ಶಂಕಿತ ವ್ಯಕ್ತಿಯನ್ನ ಮನವೊಲಿಸಿ ಚಿಕಿತ್ಸೆಗೆ ಕರೆತಂದ್ರು. ಇದೀಗ ಆತನ ರಕ್ತದ ಮಾದರಿ ಸಂಗ್ರಹಿಸಿ ಬೆಂಗಳೂರಿಗೆ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿಗಾಗಿ ಎಲ್ಲರೂ ಕಾಯುತ್ತಿದ್ದಾರೆ. ರಿಪೋರ್ಟ್ ಪಾಸಿಟೀವ್ ಬರುತ್ತೋ.. ನೆಗಟೀವ್ ಬರುತ್ತೋ ಅನ್ನೋ ಆತಂಕ ಮನೆಮಾಡಿದೆ.

ಕರಾವಳಿಯಲ್ಲಿ ಈವರೆಗೂ ಪತ್ತೆಯಾಗಿಲ್ಲ ಕೊರೊನಾ ಸೋಂಕು..! ಇನ್ನು, ಮಂಗಳೂರಿನಲ್ಲಿ ಕೊರೊನಾ ವೈರಸ್ ಪತ್ತೆಯಾಗಿದ್ಯಾ ಅನ್ನೋ ಅನುಮಾನಕ್ಕೆ ಇದೀಗ ತೆರೆ ಬಿದ್ದಿದೆ. ಈವರೆಗೂ ಮಗಳೂರಿನಲ್ಲಿ ಯಾರಲ್ಲೂ ಕೊರೊನಾ ಸೋಂಕು ಪತ್ತೆಯಾಗಿಲ್ವಂತೆ. ಅಲ್ದೇ, ಮುಂಜಾಗ್ರತಾ ಕ್ರಮವಾಗಿ ವಿಮಾನ ನಿಲ್ದಾಣ ಮತ್ತು ನವ ಮಂಗಳೂರು ಬಂದರು ಬಳಿ ತಪಾಸಣೆ ತೀವ್ರಗೊಳಿಸಲಾಗಿದೆ. ಎಲ್ಲರನ್ನೂ ತಪಾಸಣೆ ನಡೆಸಿಯೇ ಹೊರಗೆ ಬಿಡಲಾಗ್ತಿದೆ ಅಂತ ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಒಟ್ನಲ್ಲಿ ಕೊರೊನಾ ವೈರಸ್ ಎಲ್ಲರನ್ನೂ ಬೆಚ್ಚಿ ಬೀಳಿಸ್ತಿದೆ. ಕರಾವಳಿ ನಗರಿಯಲ್ಲಿ ಯಾರಿಗೂ ಕೊರೊನಾ ಇಲ್ಲ ಅನ್ನೋ ಸುದ್ದಿ ಆತಂಕವನ್ನ ಕೊಂಚ ಮಟ್ಟಿಗೆ ದೂರ ಮಾಡಿದೆ. ಆದ್ರೆ, ಆಸ್ಪತ್ರೆಯಿಂದ ಜೂಟ್ ಆಗಿದ್ದ ವ್ಯಕ್ತಿಯ ರಕ್ತದ ಮಾದರಿ ರಿಪೋರ್ಟ್​​ನತ್ತ ಎಲ್ಲರ ಚಿತ್ತ ನೆಟ್ಟಿದೆ. ಏನಾಗುತ್ತೋ ಏನೋ ಭಯ ಎಲ್ಲರಲ್ಲೂ ಆವರಿಸಿದೆ.

Published On - 7:35 am, Tue, 10 March 20