AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನ್ನಡ ಚಿತ್ರರಂಗ ಅಂದ್ರೆ ಆ ನಾಲ್ವರು -ಚಂದನವನದ ಆಧಾರ ಸ್ತಂಭಗಳನ್ನು ನೆನೆದ ದರ್ಶನ್​

ಮಂಡ್ಯ: ಕನ್ನಡ ಚಿತ್ರರಂಗ ಅಂದರೆ ನಾಲ್ಕು ಜನರು. ಅವರು ರಾಜ್‌ಕುಮಾರ್, ಶಂಕರ್‌ನಾಗ್, ವಿಷ್ಣುವರ್ಧನ್ ಹಾಗೂ ಅಂಬರೀಷ್​ ಎಂದು ಹೊಟ್ಟೆಗೌಡನದೊಡ್ಡಿ ಗ್ರಾಮದಲ್ಲಿ ನಟ ದರ್ಶನ್ ಹೇಳಿದರು. ಜಿಲ್ಲೆಯ ಮದ್ದೂರು ತಾಲೂಕಿನ ಹೊಟ್ಟೆಗೌಡನ ದೊಡ್ಡಿಯಲ್ಲಿ ಅಂಬಿ ದೇಗುಲ ಉದ್ಘಾಟನೆ ವೇಳೆ ನಟ ಇಂದು ಮಾತನಾಡಿದರು. ಅಂಬಿ ಅಣ್ಣ ಸತ್ತಿಲ್ಲ. ನಮ್ಮೊಂದಿಗೆ ಜೀವಂತವಾಗಿದ್ದಾರೆ. ಪುತ್ಥಳಿ ನಿರ್ಮಿಸಿ ಅಭಿಮಾನ ತೋರಿದ ಎಲ್ರಿಗೂ ಧನ್ಯವಾದ. ನಿಮ್ಮ ಪ್ರೀತಿ ಸದಾ ಹೀಗೆ ಇರಲಿ ಎಂದ ದರ್ಶನ್​ ಹೇಳಿದರು. ಈ ವೇಳೆ ಒಂದು ಡೈಲಾಗ್ ಹೇಳುವಂತೆ ಅಭಿಮಾನಿಗಳು […]

ಕನ್ನಡ ಚಿತ್ರರಂಗ ಅಂದ್ರೆ ಆ ನಾಲ್ವರು -ಚಂದನವನದ ಆಧಾರ ಸ್ತಂಭಗಳನ್ನು ನೆನೆದ ದರ್ಶನ್​
ದರ್ಶನ್​
KUSHAL V
|

Updated on:Nov 24, 2020 | 3:11 PM

Share

ಮಂಡ್ಯ: ಕನ್ನಡ ಚಿತ್ರರಂಗ ಅಂದರೆ ನಾಲ್ಕು ಜನರು. ಅವರು ರಾಜ್‌ಕುಮಾರ್, ಶಂಕರ್‌ನಾಗ್, ವಿಷ್ಣುವರ್ಧನ್ ಹಾಗೂ ಅಂಬರೀಷ್​ ಎಂದು ಹೊಟ್ಟೆಗೌಡನದೊಡ್ಡಿ ಗ್ರಾಮದಲ್ಲಿ ನಟ ದರ್ಶನ್ ಹೇಳಿದರು. ಜಿಲ್ಲೆಯ ಮದ್ದೂರು ತಾಲೂಕಿನ ಹೊಟ್ಟೆಗೌಡನ ದೊಡ್ಡಿಯಲ್ಲಿ ಅಂಬಿ ದೇಗುಲ ಉದ್ಘಾಟನೆ ವೇಳೆ ನಟ ಇಂದು ಮಾತನಾಡಿದರು. ಅಂಬಿ ಅಣ್ಣ ಸತ್ತಿಲ್ಲ. ನಮ್ಮೊಂದಿಗೆ ಜೀವಂತವಾಗಿದ್ದಾರೆ. ಪುತ್ಥಳಿ ನಿರ್ಮಿಸಿ ಅಭಿಮಾನ ತೋರಿದ ಎಲ್ರಿಗೂ ಧನ್ಯವಾದ. ನಿಮ್ಮ ಪ್ರೀತಿ ಸದಾ ಹೀಗೆ ಇರಲಿ ಎಂದ ದರ್ಶನ್​ ಹೇಳಿದರು. ಈ ವೇಳೆ ಒಂದು ಡೈಲಾಗ್ ಹೇಳುವಂತೆ ಅಭಿಮಾನಿಗಳು ದರ್ಶನ್‌ಗೆ ಒತ್ತಾಯಿಸಿದರು. ಇದಕ್ಕೆ ಸ್ಪಂದಿಸಿದ ದಚ್ಚು ರಾಬರ್ಟ್ ಸಿನಿಮಾದ ಒಂದು ಡೈಲಾಗ್ ಸಹ ಹೇಳಿದರು. ಜೊತೆಗೆ, ಬಾಕಿ ಡೈಲಾಗ್​ನ ನೀವು ಸಿನಿಮಾದಲ್ಲೇ ನೋಡಿ ಎಂದು ನಗೆ ಚಟಾಕಿ ಹಾರಿಸಿದರು.

ಪ್ರತಾಪ್ ಸಿಂಹಗೆ ಸುಮಲತಾ ಪರೋಕ್ಷ ಟಾಂಗ್ ಇಂದು ಅಂಬರೀಷ್​ ಪುಣ್ಯಸ್ಮರಣೆ. ದಶಕಗಳಿಂದ ಅವರ ಹುಟ್ಟುಹಬ್ಬ ಆಚರಿಸುತ್ತೀದ್ದೀರಾ. ಅಂಬರೀಷ್​ ಅಗಲಿ ಎರಡು ವರ್ಷಗಳಾಗಿದೆ. ಆದ್ರೆ ನಿಮ್ಮ ಪ್ರೀತಿ ಚೂರು ಕಡಿಮೆ ಆಗಿಲ್ಲ. ಬದುಕಿದ್ದಾಗ ತೋರಿದ ಪ್ರೀತಿ ಅವರು ಸತ್ತ ಮೇಲು ತೋರಿಸಿದ್ದೀರಾ ಎಂದು ಸಂಸದೆ ಹಾಗೂ ನಟನ ಪತ್ನಿ ಸುಮಲತಾ ಅಂಬರೀಷ್​ ಹೇಳಿದರು.

ಇದು ಯಾವ ಜನ್ಮದ ಪುಣ್ಯಾನೋ ಗೊತ್ತಿಲ್ಲ. ನಿಮ್ಮ ಪ್ರೀತಿ ನನ್ನ ಚುನಾವಣೆಯಲ್ಲೂ ತೋರಿಸಿದ್ರಿ. ನನಗೆ ಮಂಡ್ಯ ಸಂಸದೆ ಎಂದು ಹೇಳಲು ಹೆಮ್ಮೆಯಾಗುತ್ತೆ. ಎಷ್ಟೋ ಸವಾಲುಗಳನ್ನ ಎದುರಿಸಿ ಚುನಾವಣೆ ಗೆಲ್ಲಲು ನಿಮ್ಮ ಪ್ರೀತಿಯೇ ಕಾರಣ. ಅಂಬಿಗಾಗಿ ಗುಡಿ ಕಟ್ಟಲು ಯಾರು ಹಣ ಕೇಳಿದವರಲ್ಲ. ಪುಣ್ಯಸ್ಮರಣೆ ದಿನ ನೀವು ಬಂದು ಉದ್ಘಾಟನೆ ಮಾಡಬೇಕು ಅಂತಾ ಕೇಳಿದ್ರು. ಈ ಪ್ರೀತಿಗೆ ನಾನೇನು ವಾಪಾಸ್ ಕೊಡಲಿ ಎಂದು ಸುಮಲತಾ ಹೇಳಿದರು.

‘ನೀವು ನನ್ನ ಇಟ್ಟ ವಿಶ್ವಾಸ ಎಂದಿಗೂ ಮರೆಯಲ್ಲ’ ನೀವು ನನ್ನ ಇಟ್ಟ ವಿಶ್ವಾಸ ಎಂದಿಗೂ ಮರೆಯಲ್ಲ. ನನ್ನ ಉಸಿರೂ ಇರುವವರೆಗೂ ನಾನು ಮರೆಯಲ್ಲ ಎಂದು ಮಾತಿನ ವೇಳೆ ಭಾವುಕರಾದರು. ಕೆಟ್ಟ ಕೆಲಸ ಮಾಡೋದು ಅವರ ಕರ್ಮ‌. ಒಳ್ಳೇದು ಮಾಡೋದು ನಮ್ಮ ಧರ್ಮ. ಈ ಮಾತನ್ನ ಅಂಬರೀಷ್​ ನನಗೆ ಹೇಳಿಕೊಟ್ಟಿದ್ದರು. ಮಾತನಾಡುವವರು ಮಾತನಾಡಲಿ ನಮ್ಮ ಕೆಲಸ ಮಾಡಬೇಕು ಎಂದು ಪರೋಕ್ಷವಾಗಿ ಸಂಸದ ಪ್ರತಾಪ್ ಸಿಂಹಗೆ ಸುಮಲತಾ ಟಾಂಗ್ ಕೊಟ್ಟರು.

ಅಂಬರೀಷ್​ ಹೆಸರು ಹೇಳಬಾರದು ಅಂತಾ ಕೆಲವರು ಹೇಳ್ತಾರೆ. ನಾನು ಯಾಕೆ ಅಂಬರೀಷ್​ ಹೇಳಬಾರದು. ನನ್ನ ಹೆಸರಲ್ಲೇ ಅಂಬಿ ಹೆಸರಿದೆ, ನನ್ನ ಹೆಸರು ಸುಮಲತಾ ಅಂಬರೀಷ್​. ಅಂಬರೀಷ್​ ಹೆಸರೇ ನನಗೆ ಸ್ಫೂರ್ತಿ. ಸಾಯುವವರೆಗೂ ಅಂಬಿ ಹೆಸರು ಹೇಳುತ್ತಾ ಕೆಲಸ ಮಾಡ್ತೀನಿ ಎಂದು ಸುಮಲತಾ ಹೇಳಿದರು. ಅಂಬರೀಶ್ ಅವರ ಮೇಲೆ ಮತ್ತೆ ನಮ್ಮ ಅಮ್ಮನ ಮೇಲೆ ನನ್ನ ಮೇಲೆ ಪ್ರೀತಿ ಇಟ್ಟಿರುವುದಕ್ಕೆ ಧನ್ಯವಾದ. ಅಂಬಿ ದೇಗುಲ ಲೋಕಾರ್ಪಣೆ: ಕಂಚಿನ ಪುತ್ಥಳಿಗೆ ಸುಮಲತಾ, ದರ್ಶನ್​, ಅಭಿ ಪುಷ್ಪಾರ್ಚನೆ

Published On - 2:57 pm, Tue, 24 November 20