AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

40 ವರ್ಷದ ಸಿನಿ ಜರ್ನಿಯ ಸಿಹಿ-ಕಹಿ ನೆನಪು: ನಡೆದು ಬಂದ ಹಾದಿ ನೆನೆದು ಜಗ್ಗೇಶ್ ಕಣ್ಣೀರು

ನವರಸನಾಯಕ ಜಗ್ಗೇಶ್ ಸಿನಿಮಾ ಇಂಡಸ್ಟ್ರಿಗೆ ಪಾದಾರ್ಪಣೆ ಮಾಡಿ 40 ವರ್ಷಗಳು ಕಳೆದಿವೆ. ತಮ್ಮ ಸಿನಿಜರ್ನಿಯನ್ನು ಮೆಲಕು ಹಾಕುತ್ತ ಜಗ್ಗೇಶ್ ಭಾವುಕರಾಗಿದ್ದಾರೆ.

40 ವರ್ಷದ ಸಿನಿ ಜರ್ನಿಯ ಸಿಹಿ-ಕಹಿ ನೆನಪು: ನಡೆದು ಬಂದ ಹಾದಿ ನೆನೆದು ಜಗ್ಗೇಶ್ ಕಣ್ಣೀರು
ನಟ ಜಗ್ಗೇಶ್
ಆಯೇಷಾ ಬಾನು
ಆಯೇಷಾ ಬಾನು| Edited By: |

Updated on:Nov 24, 2020 | 3:25 PM

Share

ಬೆಂಗಳೂರು: ನವರಸನಾಯಕ ಜಗ್ಗೇಶ್ ಸಿನಿ ಜರ್ನಿಗೆ 40 ವರ್ಷ ಪೂರೈಸಿದೆ. ಸಿನಿಮಾ ಇಂಡಸ್ಟ್ರಿಗೆ ಪಾದಾರ್ಪಣೆ ಮಾಡಿ 40 ವರ್ಷಗಳು ಕಳೆದಿರುವ ಹಿನ್ನೆಲೆಯಲ್ಲಿ ತನ್ನ ಸಿನಿ ಜೀವನದ ಕೆಲ ಘಟನೆಗಳನ್ನು ನಟ ಹಂಚಿಕೊಂಡಿದ್ದಾರೆ. ಇದೇ ವೇಳೆ ನಟ ಜಗ್ಗೇಶ್ ಕಿಡಿ ಕಾರಿದ್ದಾರೆ.

ಪ್ಯಾನ್ ಇಂಡಿಯಾ ಕಟ್ಟಿಕೊಂಡು ಏನೂ ಆಗಬೇಕಾಗಿಲ್ಲ. ಇದರಿಂದ ನಮ್ಮ ಕನ್ನಡಿಗರಿಗೆ ಕೆಲಸ ಸಿಗಲ್ಲ. ಯಾರದೋ ಭುಜ ತಟ್ಟುವಂತಹ ಕೆಲಸ ನಡೆಯುತ್ತಿದೆ. ನಮ್ಮತನವನ್ನು ಉಳಿಸಿ ಎಂದು ನವರಸನಾಯಕ ಜಗ್ಗೇಶ್ ಆಕ್ರೋಶ ಹೊರ ಹಾಕಿದ್ದಾರೆ. ನಾವು ಹಿರಿಯರು ಎಂದು ಕರೆದರೆ ನಾವು ಇಂಡಸ್ಟ್ರಿಗೆ ಹೋಗುತ್ತೇವೆ. ಯಾರದೋ ಮನೆ ಕಾಯುವ ಮನಸ್ಸು ನಮಗೆ ಇಲ್ಲ. ಅದರ ಬದಲಿಗೆ ವಿಷ ಕುಡಿದು ಸಾಯುವುದು ಒಳ್ಳೇದು ಎಂದು ಹೇಳಿದ್ರು.

ಹಳೇ ದಿನಗಳನ್ನು ನೆನೆದು ಭಾವುಕರಾದ ಜಗ್ಗೇಶ್:

ನವರಸನಾಯಕ ಜಗ್ಗೇಶ್ ಸಿನಿ ಪಯಣ

ಚೂಪು ಕಣ್ಣು ಕೆದರಿದ ತಲೆ ಆಶಾದಯಕವಾಗಿದ್ದಾನೆ ಅನ್ನೋ ಆರ್ಟಿಕಲ್‌ ನೆನಪಾಗ್ತಿದೆ. ಮೂರು ಡ್ರೆಸ್​ಗಳನ್ನ ಬದಲಾಯಿಸಿ ಕಬ್ಬನ್ ಪಾರ್ಕ್​ನಲ್ಲಿ ಫೋಟೋಶೂಟ್ ಮಾಡಿದ್ವಿ. ಯಾರೋ ಸಿಗಬಹುದು, ಯಾರೋ ಏನೋ ಕೊಡಬಹುದು ಅನ್ನೋ ಆಸೆಯೊಂದಿಗೆ ಸಿನಿ ಪಯಣ ಆರಂಭವಾಗಿತ್ತು ಎಂದು ತಮ್ಮ ಬದುಕಿನ ಏಳು ಬೀಳುಗಳನ್ನು ಮೆಲಕು ಹಾಕುತ್ತ ಅಂದಿನ ಪರಿಸ್ಥಿತಿ ನೆನೆದು ಜಗ್ಗೇಶ್ ಕಣ್ಣೀರಿಟ್ಟಿರು.

‘ಕಷ್ಟದ ಸಮಯದಲ್ಲಿ ಬೆನ್ನಿಗೆ ನಿಂತ ಹೆಂಡ್ತಿ’ ಪತ್ನಿ ಪರಿಮಳ ಜಗ್ಗೇಶ್​ ಕೂಡ ತಮ್ಮ ಪಯಣದಲ್ಲಿನ ಏಳು ಬೀಳು ಮೆಲುಕು ಹಾಕಿದರು. ಜಗ್ಗೇಶ್​ಗೆ ಪಾತ್ರಗಳು ಸಿಗದಿದ್ದಾಗ ತುಂಬಾ ಕಷ್ಟದ ದಿನಗಳನ್ನು ಕಳೆಯಬೇಕಾಯಿತು. ನಾನು ಒಂದು ಕಂಪನಿಯಲ್ಲಿ ಕೆಲಸ ಮಾಡ್ತಿದ್ದೆ. ಇದರಿಂದ ಅದೆಲ್ಲವನ್ನೂ ದಾಟಿ ಬಂದಿದ್ದೇವೆ ಎಂದು ಪರಿಮಳ ಜಗ್ಗೇಶ್ ಭಾವುಕರಾದ್ರು.

‘ರಾಜ್ ಕುಮಾರ್ ಅವರ ಜೊತೆ ರಾಯರ ವಿಚಾರ ಚರ್ಚೆ ಮಾಡ್ತಿದ್ದೆ’

ಜಗ್ಗೇಶ್ ಮತ್ತು ಪತ್ನಿ ಪರಿಮಳ

ಕಲಾವಿದ ಅನ್ನೋದನ್ನ ಮನಸ್ಸಿಂದ ಕಿತ್ತಾಕಿದ್ದೀನಿ. ಜನಪ್ರಿಯ ವ್ಯಕ್ತಿ ಅನ್ನೋದು ಇಲ್ಲ. ತುಂಬಾ ಸಾಮಾನ್ಯನಂತೆ ಬದುಕುತ್ತಿದ್ದೇನೆ. ಅವಕಾಶ ತಾನಾಗಿಯೇ ಬಂದ್ರೆ ಮಾಡ್ತೀನಿ. ನಾನಾಗೇ ನಾನು ಹೋಗಬಾರ್ದು ಅಂದ್ಕೊಂಡಿದ್ದೀನಿ. ರಾಜ್ ಕುಮಾರ್ ಅವರ ಜೊತೆ ರಾಯರ ವಿಚಾರ ಸಾಕಷ್ಟು ಚರ್ಚೆ ಮಾಡ್ತಿದ್ದೆ. ರಾಜ್ ಕುಮಾರ್ ಅವರು ಪರಮ ದೈವ ಭಕ್ತರಾಗಿದ್ರು. ರಾಜ್ ಕುಮಾರ್ ನಟರಲ್ಲ. ಅವರೊಬ್ಬ ಸಂತರು. ಅವರು ಕೂಡ ಸಂಧ್ಯಾ ವಂದನೆ ಮಾಡ್ತಿದ್ರು. ನಾನು ರಾಜಕಾರಣಕ್ಕೆ ಬಂದಿದ್ದು ಆಕಸ್ಮಿಕವಾಗಿ. ಮೊದಲು ರಾಜಕೀಯ ಕಾರ್ಯಕ್ರಮ ಅಂದ್ರೆ ಓಡಿ ಹೋಗ್ತಿದ್ದೆ ಎಂದು ಅಣ್ಣವ್ರನ್ನ ಜಗ್ಗೇಶ್ ನೆನಪು ಮಾಡಿಕೊಂಡ್ರು.

ಇಂದಿನ ಕಲಾವಿದರಿಗೆ ಜಗ್ಗೇಶ್ ಮಾತು: ಕನಸು ಮಾತ್ರ ಕಾಣಬೇಡಿ.. ಕನಸಿನ ಜೊತೆ ಹೆಜ್ಜೆ ಹಾಕಿ. ಪ್ರತಿಯೊಂದಕ್ಕೂ ಸಿಸ್ಟಮ್ ಇದೆ. ಅಂದು ಕೊಂಡ ತಕ್ಷಣವೇ ಎಲ್ಲವೂ ಆಗಲ್ಲ. ಉದರಕ್ಕೆ ಬಲಿಷ್ಠವಾದ ಕೆಲಸ ಮಾಡಿ. ಹಾಬಿಗೆ ಕಲೆ ಇಟ್ಕೊಳ್ಳಿ ಎಂದು ಹೇಳಿದರು.

ಜಗ್ಗೇಶ್ ಭಾವುಕರಾದ ಕ್ಷಣ

Published On - 2:46 pm, Tue, 24 November 20

Follow Us
ಆಯೇಷಾ ಬಾನು
ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

ಸರ್ಕಾರ ನಿಮ್ಮೊಂದಿಗಿದೆ ಪ್ರತಿಭಟನೆ ಕೈಬಿಡಿ ಎಂದು ರೈತರಿಗೆ ಜೋಶಿ ಮನವಿ!
ಸರ್ಕಾರ ನಿಮ್ಮೊಂದಿಗಿದೆ ಪ್ರತಿಭಟನೆ ಕೈಬಿಡಿ ಎಂದು ರೈತರಿಗೆ ಜೋಶಿ ಮನವಿ!
ಹೈಕಮಾಂಡ್ ತಲುಪಿದ ಸ್ಟಿಂಗ್ ವಿಚಾರ: ಕ್ಯಾಬಿನೆಟ್ ಪ್ರಸ್ತಾಪಕ್ಕೆ ಗರಂ
ಹೈಕಮಾಂಡ್ ತಲುಪಿದ ಸ್ಟಿಂಗ್ ವಿಚಾರ: ಕ್ಯಾಬಿನೆಟ್ ಪ್ರಸ್ತಾಪಕ್ಕೆ ಗರಂ
ಹುನಗುಂದದಲ್ಲಿ ರೈತರ ಪ್ರತಿಭಟನೆ: ರಾಯಚೂರು-ಸೊಲ್ಲಾಪುರ ಹೆದ್ದಾರಿ ಬಂದ್
ಹುನಗುಂದದಲ್ಲಿ ರೈತರ ಪ್ರತಿಭಟನೆ: ರಾಯಚೂರು-ಸೊಲ್ಲಾಪುರ ಹೆದ್ದಾರಿ ಬಂದ್
ರಾಹುಲ್ ಗಾಂಧಿ ನಿವಾಸದಲ್ಲಿ ವಿಪಕ್ಷ ನಾಯಕರ ಹೈ-ಟೀ
ರಾಹುಲ್ ಗಾಂಧಿ ನಿವಾಸದಲ್ಲಿ ವಿಪಕ್ಷ ನಾಯಕರ ಹೈ-ಟೀ
ಕ್ಯಾಪ್ಟನ್ ಟೀಕಿಸಿದ ತಂಡವನ್ನೇ ಆಯ್ಕೆ ಮಾಡಿಕೊಂಡ ಕುಮಾರಿ
ಕ್ಯಾಪ್ಟನ್ ಟೀಕಿಸಿದ ತಂಡವನ್ನೇ ಆಯ್ಕೆ ಮಾಡಿಕೊಂಡ ಕುಮಾರಿ
ಹೈದರಾಬಾದ್‌ನಲ್ಲಿ ಮೈ ಹೋಮ್ ವ್ಯೋಮ ಗ್ರ್ಯಾಂಡ್ ಲಾಂಚ್
ಹೈದರಾಬಾದ್‌ನಲ್ಲಿ ಮೈ ಹೋಮ್ ವ್ಯೋಮ ಗ್ರ್ಯಾಂಡ್ ಲಾಂಚ್
ದೀಪಾಂಜಲಿ ನಗರ ಮೆಟ್ರೋ ನಿಲ್ದಾಣದಲ್ಲಿ ಹಳಿಗೆ ಜಿಗಿದ ವ್ಯಕ್ತಿ
ದೀಪಾಂಜಲಿ ನಗರ ಮೆಟ್ರೋ ನಿಲ್ದಾಣದಲ್ಲಿ ಹಳಿಗೆ ಜಿಗಿದ ವ್ಯಕ್ತಿ
ಇಂದು ನವರಾತ್ರಿಯ ಮೂರನೇ ದಿನ; ಚಂದ್ರಘಂಟಾ ದೇವಿಯ ಆರಾಧನೆಯಿಂದ ಕಾರ್ಯಸಿದ್ಧಿ
ಇಂದು ನವರಾತ್ರಿಯ ಮೂರನೇ ದಿನ; ಚಂದ್ರಘಂಟಾ ದೇವಿಯ ಆರಾಧನೆಯಿಂದ ಕಾರ್ಯಸಿದ್ಧಿ
'ರಾಹುಲ್ ಗಾಂಧಿ ಎಡಪಂಥೀಯ ಸಿದ್ಧಾಂತ ಹೇರಲು ಯತ್ನಿಸುತ್ತಿದ್ದಾರೆ'; ಫಡ್ನವೀಸ್
'ರಾಹುಲ್ ಗಾಂಧಿ ಎಡಪಂಥೀಯ ಸಿದ್ಧಾಂತ ಹೇರಲು ಯತ್ನಿಸುತ್ತಿದ್ದಾರೆ'; ಫಡ್ನವೀಸ್
ಅವಧಿಗೂ ಮುನ್ನ SIR ಅಂತ್ಯ: 2.01 ಲಕ್ಷ ಮತದಾರರ ಹೆಸರು ಡಿಲೀಟ್​
ಅವಧಿಗೂ ಮುನ್ನ SIR ಅಂತ್ಯ: 2.01 ಲಕ್ಷ ಮತದಾರರ ಹೆಸರು ಡಿಲೀಟ್​