ಬ್ರೇಕ್ ಫೇಲ್ ಆಗಿ ಡಿಜಿ, ಐಜಿಪಿ ನಿವಾಸಕ್ಕೆ ನುಗ್ಗಿದ ಬಸ್
ಅಪಘಾತ ಸಂಭವಿಸಿರುವ ಕಾರಣ ನೃಪತುಂಗ ರಸ್ತೆಯಲ್ಲಿ ವಾಹನ ಸಂಚಾರ ಮಂದಗತಿಯಲ್ಲಿ ಸಾಗಿದ್ದು, ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಘಟನೆ ಸಂಭವಿಸಿದ ಕೆಲ ಹೊತ್ತಲ್ಲಿ ಆಗಮಿಸಿದ ಹಲಸೂರು ಗೇಟ್ ಸಂಚಾರಿ ಪೊಲೀಸರು ಕ್ರೇನ್ ಮೂಲಕ ಬಸ್ ತೆರವುಗೊಳಿಸಿದ್ಧಾರೆ.
ಬೆಂಗಳೂರು: ಬ್ರೇಕ್ ಫೇಲ್ ಆದ ಕಾರಣ ಖಾಸಗಿ ಬಸ್ಸೊಂದು ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ಡಿಜಿ & ಐಜಿಪಿ ನಿವಾಸಕ್ಕೆ ನುಗ್ಗಿರುವ ಘಟನೆ ನಡೆದಿದೆ. ಹಿಂದೂಪುರ, ಬೆಂಗಳೂರು ಮಾರ್ಗವಾಗಿ ತೆರಳುತ್ತಿದ್ದ ಖಾಸಗಿ ಬಸ್ಸಿನ ಬ್ರೇಕ್ ಫೇಲ್ ಆಗಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಬಸ್ ಮುಂಭಾಗ ಕುಳಿತಿದ್ದ ಮೂವರಿಗೆ ಗಾಯವಾಗಿದ್ದು, ಡಿಜಿ & ಐಜಿಪಿ ನಿವಾಸದ ಕಾಂಪೌಂಡ್ ಭಾಗಶಃ ಜಖಂ ಆಗಿದ್ದು, ಬಸ್ನ ಮುಂಭಾಗಕ್ಕೆ ಹಾನಿಯಾಗಿದೆ.
ಅಪಘಾತ ಸಂಭವಿಸಿರುವ ಕಾರಣ ನೃಪತುಂಗ ರಸ್ತೆಯಲ್ಲಿ ವಾಹನ ಸಂಚಾರ ಮಂದಗತಿಯಲ್ಲಿ ಸಾಗಿದ್ದು, ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಘಟನೆ ಸಂಭವಿಸಿದ ಕೆಲ ಹೊತ್ತಲ್ಲಿ ಆಗಮಿಸಿದ ಹಲಸೂರು ಗೇಟ್ ಸಂಚಾರಿ ಪೊಲೀಸರು ಕ್ರೇನ್ ಮೂಲಕ ಬಸ್ ತೆರವುಗೊಳಿಸಿದ್ಧಾರೆ.
ಇದನ್ನೂ ಓದಿ: ಬಜೆಟ್ನಲ್ಲಿ ಸಾರಿಗೆ ನೌಕರರ ಬೇಡಿಕೆಗಳಿಗೆ ಎಳ್ಳು ನೀರು ಹಿನ್ನಲೆ; ಮತ್ತೆ ಮುಷ್ಕರಕ್ಕೆ ಮುಂದಾಗ್ತಾರಾ ಸಾರಿಗೆ ನೌಕರರು?
ಮೆಟ್ಟಿಲಿನ ಮೇಲಿಂದ ಬಿದ್ದು ಕರ್ತವ್ಯ ನಿರತ ಬಸನಾಳ ಗ್ರಾಮದ ಯೋಧ ಸಾವು..