ಕನ್ನಡ ಬಿಗ್ಬಾಸ್ 8ನೇ ಆವೃತ್ತಿಯಲ್ಲಿ ಬಾಗವಹಿಸುತ್ತಿರುವ ಕಿರುತೆರೆ ಕಲಾವಿದೆ ದಿವ್ಯಾ. ಧಾರಾವಾಹಿ ಯಶಸ್ಸಿನ ಜತೆ ಅದೃಷ್ಟವನ್ನೂ ಜತೆಯಾಗಿಸಿಕೊಂಡ ನಟಿಯರ ಪೈಕಿ ದಿವ್ಯಾ ಒಬ್ಬರು. ಈ ಹಿಂದೆ ‘ಸಪ್ತಪದಿ’ ಧಾರಾವಾಹಿಯಲ್ಲಿ ಸೇವಂತಿಯಾಗಿ ಅವರು ಕಿರುತೆರೆ ವೀಕ್ಷಕರ ಮನಗೆದಿದ್ದರು. ದಿವ್ಯಾ ಮೊದಲು ಆಯ್ಕೆಯಾಗಿದ್ದು ‘ಚಿಟ್ಟೆ ಹೆಜ್ಜೆ’ ಧಾರಾವಾಹಿಗೆ. ಫೇಸ್‌ಬುಕ್‌ನಲ್ಲಿ ಅವರ ಫೋಟೋ ವೀಕ್ಷಿಸಿದ ಸೀರಿಯಲ್ ತಂತ್ರಜ್ಞರೊಬ್ಬರು ನಿರ್ದೇಶಕ ವಿನು ಬಳಂಜರಿಗೆ ದಿವ್ಯಾರನ್ನು ಪರಿಚಯಿಸಿದ್ದಾರೆ. ಅಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆ ‘ಸಪ್ತಪದಿ’ ಮುಖ್ಯಪಾತ್ರಕ್ಕೇ ಅವರಿಗೆ ಕರೆ ಬಂದಿತು. ದಿವ್ಯಾ ಉರುಡುಗ ಬಿಗ್ ಬಾಸ್ ಕನ್ನಡ 8ನೇ ಆವೃತ್ತಿಯ 15ನೇ ಸ್ಪರ್ಧಿಯಾಗಿ ಮನೆ ಸೇರಿದ್ದಾರೆ.
ಆರಂಭದ ಎರಡು ಸೀರಿಯಲ್‌ಗಳ ಪಾತ್ರಗಳಲ್ಲಿ ಅಭಿನಯಕ್ಕೆ ಹೆಚ್ಚು ಸ್ಕೋಪ್ ಸಿಕ್ಕಿತು. ಎರಡು ಸೀರಿಯಲ್‌ಗಳ ನೂರಾರು ಸಂಚಿಕೆಗಳ ನಂತರ ದಿವ್ಯಾಗೆ ಸಿನಿಮಾದಲ್ಲಿ ನಟಿಸಲು ಆಹ್ವಾನವಿತ್ತು. ಆದರೆ ದಿವ್ಯಾ ಕಿರುತೆರೆಯನ್ನೇ ಆಯ್ಕೆ ಮಾಡಿಕೊಂಡರು. ದಿವ್ಯಾ ಮಲ್ಟಿಮೀಡಿಯಾ ಮತ್ತು ಆ್ಯನಿಮೇಷನ್ ವಿಷಯದಲ್ಲಿ ಬಿಎಸ್ಸಿ ಮಾಡಿದ್ದಾರೆ. ಪದವಿ ಮೂರನೇ ವರ್ಷದಲ್ಲಿದ್ದಾಗ ಕ್ಯಾಂಪಸ್ ಸೆಲೆಕ್ಷನ್‌ನಲ್ಲಿ ಬೆಂಗಳೂರಿನ ಕಂಪನಿಯೊಂದರಲ್ಲಿ ಅವರಿಗೆ ಕೆಲಸ ಸಿಕ್ಕಿತ್ತು. ಅಷ್ಟರಲ್ಲಿ ಸೀರಿಯಲ್‌ಗೆ ಕರೆಬಂದದ್ದರಿಂದ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಬಿಗ್ ಬಾಸ್ ವೇದಿಕೆಗೆ ಬಂದಾಗ ಬಹಳ ನರ್ವಸ್ ಆಗಿದ್ಧೇನೆ ಎಂದು ದಿವ್ಯಾ ಹೇಳಿದ್ದಾರೆ. ಚಿಕನ್ ಅಂದ್ರೆ ತುಂಬಾ ಇಷ್ಟಅಂದ ದಿವ್ಯಾ ಉಪ್ಪಿಟ್ಟು ಆಗೋದೇ ಇಲ್ಲ ಎಂದು ಹೇಳಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯೊಳಗೆ ಹುಡುಗ ಸಿಕ್ಕರೆ ಒಪ್ಪಿಕೊಂಡು ಬಿಡುತ್ತೀರಾ ಎಂಬ ಸುದೀಪ್ ಪ್ರಶ್ನೆಗೆ ದಿವ್ಯಾ ಉತ್ತರಿಸಿದ್ದಾರೆ. ಇಷ್ಟ ಆಗಲ್ಲ ಅಂದ್ಕೋತೀನಿ. ಇಷ್ಟ ಆದ್ರೂ ಆಗ್ಬೋದು. ಆದ್ರೆ ಮನೆಯವರಿಗೆ ಹೇಳಿನೇ ಮುಂದುವರಿಯೋದು ಎಂದು ದಿವ್ಯಾ ತಿಳಿಸಿದ್ದಾರೆ.
ಬಿಗ್ ಬಾಸ್ ವೀಕ್ಷಣೆ ಮಾಡೋದು ಎಲ್ಲಿ?
ಭಾನುವಾರ ಸಂಜೆ 6 ಗಂಟೆಗೆ ಬಿಗ್ ಬಾಸ್ 8ಕ್ಕೆ ಅದ್ದೂರಿಯಾಗಿ ಚಾಲನೆ ಸಿಕ್ಕಿದೆ. ಕಿಚ್ಚ ಸುದೀಪ್ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಪ್ರತಿ ದಿನ ರಾತ್ರಿ 9:30ರಿಂದ ಬಿಗ್ ಬಾಸ್ ಕಾರ್ಯಕ್ರಮ ಪ್ರಸಾರವಾಗಲಿದೆ. ಬಿಗ್ ಬಾಸ್ ಎಲ್ಲಿ ವೀಕ್ಷಣೆ ಮಾಡಬೇಕು ಎನ್ನುವುದು ಅನೇಕರ ಪ್ರಶ್ನೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಿಗ್ ಬಾಸ್ 8 ಪ್ರಸಾರವಾಗುತ್ತದೆ. ಆನ್ಲೈನ್ನಲ್ಲಿ ಬಿಗ್ ಬಾಸ್ ನೋಡಬೇಕು ಎಂದಾದರೆ ನೀವು ವೂಟ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬೇಕು. ಜಿಯೋ ಟಿವಿಯಲ್ಲಿ ಕೂಡ ನೀವು ಬಿಗ್ ಬಾಸ್ ವೀಕ್ಷಣೆ ಮಾಡಬಹುದಾಗಿದೆ. ಜಿಯೋ ಟಿವಿಗೆ ತೆರಳಿ ಕಲರ್ಸ್ ಕನ್ನಡ ಎಂದು ಸರ್ಚ್ ಮಾಡಿದರೆ ಕಲರ್ಸ್ ಕನ್ನಡ ವಾಹಿನಿ ಸಿಗಲಿದೆ. ಅದರಲ್ಲಿ ನೀವು ಬಿಗ್ ಬಾಸ್ ವೀಕ್ಷಿಸಬಹುದು.
ಇದನ್ನೂ ಓದಿ: Bigg Boss Kannada 8 Launch LIVE Updates: 15ನೇ ಸ್ಪರ್ಧಿಯಾಗಿ ದಿವ್ಯ ಉರುಡುಗ ಬಿಗ್ ಬಾಸ್ ಮನೆಗೆ ಎಂಟ್ರಿ
Raghu Gowda Profile: ಯೂಟ್ಯೂಬ್ನಲ್ಲಿ ಚಿತಾಲ್-ಪತಾಲ್ ಮಾಡಿದ ರಘು ಗೌಡ ಈಗ ಬಿಗ್ ಬಾಸ್ ಮನೆಗೆ
Published On - 10:30 pm, Sun, 28 February 21