Raghu Gowda Profile: ಯೂಟ್ಯೂಬ್​​ನಲ್ಲಿ ಚಿತಾಲ್​-ಪತಾಲ್​ ಮಾಡಿದ ರಘು ಗೌಡ ಈಗ ಬಿಗ್​ ಬಾಸ್​ ಮನೆಗೆ

Bigg Boss Kannada Season 8, Raghu Gowda Profile: ಈಗಾಗಲೇ ರಘು ವೈನ್​ ಸ್ಟೋರ್​ ಚಾನೆಲ್ ಬರೋಬ್ಬರಿ 2 ಲಕ್ಷ ಸಬ್​ಸ್ಕ್ರೈಬರ್​ಗಳನ್ನು ಹೊಂದಿದೆ. ಅವರು ಹಾಕುವ ವಿಡಿಯೋಗಳು ಸಾಕಷ್ಟು ಮೆಚ್ಚುಗೆ ಗಳಿಸಿಕೊಂಡಿದೆ.

Raghu Gowda Profile: ಯೂಟ್ಯೂಬ್​​ನಲ್ಲಿ ಚಿತಾಲ್​-ಪತಾಲ್​ ಮಾಡಿದ ರಘು ಗೌಡ ಈಗ ಬಿಗ್​ ಬಾಸ್​ ಮನೆಗೆ
ರಘು ಗೌಡ
Follow us
| Updated By: ganapathi bhat

Updated on:Feb 28, 2021 | 9:56 PM

Bigg Boss Kannada 8 Contestant Raghu Gowda Profile: ರಘು ಗೌಡ.. ಯೂಟ್ಯೂಬ್​ ಹಾಗೂ ಸಾಮಾಜಿಕ ಜಾಲತಾಣವನ್ನು ಫಾಲೋ ಮಾಡುವವರು ಈ ಹೆಸರನ್ನು ಕೇಳಿಯೇ ಇರುತ್ತಾರೆ. ರಘು ವೈನ್​ ಸ್ಟೋರ್​ ಹೆಸರಿನ ಯೂಟ್ಯೂಬ್​ ಚಾನೆಲ್​ ಮೂಲಕವೇ ಖ್ಯಾತಿ ಪಡೆದವರು ರಘು. ಅವರು ಈಗ  ಅಭ್ಯರ್ಥಿಯಾಗಿ ಕನ್ನಡದ ಬಿಗ್​ ಬಾಸ್​ 8 ಮನೆ ಒಳಗೆ ತೆರಳಿದ್ದಾರೆ. ರಘು ಮೂಲತಃ ಐಟಿ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದವರು. ಆದರೆ, ಬೇರೆ ಏನಾದರೂ ಮಾಡಬೇಕು ಎನ್ನುವ ಆಸೆ ಅವರದ್ದಾಗಿತ್ತು. ಆಗ ಹುಟ್ಟಿಕೊಂಡಿದ್ದೇ ಯೂಟ್ಯೂಬ್​ ಚಾನೆಲ್​ ಐಡಿಯಾ. ರಘು ತಡ ಮಾಡಲಿಲ್ಲ. ಕೆಲಸಕ್ಕೆ ಗುಡ್​ ಬಾಯ್​ ಹೇಳಿ ಯೂಟ್ಯೂಬ್​ ಚಾನೆಲ್​ ಮಾಡಿಯೇ ಬಿಟ್ಟರು. ರಘು ಗೌಡ 13ನೇ ಸ್ಪರ್ಧಿಯಾಗಿ ಬಿಗ್ ಬಾಸ್ ಕನ್ನಡ ಸೀಸನ್ 8ರ ಮನೆಗೆ ಪ್ರವೇಶಿಸಿದ್ದಾರೆ.

ಈಗಾಗಲೇ ರಘು ವೈನ್​ ಸ್ಟೋರ್​ ಚಾನೆಲ್ ಬರೋಬ್ಬರಿ 1.69 ಲಕ್ಷ ಸಬ್​ಸ್ಕ್ರೈಬರ್​ಗಳನ್ನು ಹೊಂದಿದೆ. ಅವರು ಹಾಕುವ ವಿಡಿಯೋಗಳು ಸಾಕಷ್ಟು ಮೆಚ್ಚುಗೆ ಗಳಿಸಿಕೊಂಡಿದೆ. ಇನ್​ಸ್ಟಾಗ್ರಾಂನಲ್ಲೂ ಕೂಡ ರಘು ತಮ್ಮದೇ ಹವಾ ಸೃಷ್ಟಿಸಿದ್ದಾರೆ. ರಘು ಸದಾ ನಗೆ ಚಟಾಕಿ ಹಾರಿಸುತ್ತಿರುತ್ತಾರೆ. ಅವರಿಗೆ ದೊಡ್ಡ ಫ್ಯಾನ್​ ಫಾಲೋವರ್​ ಕೂಡ ಇದೆ. ಹೀಗಾಗಿ ರಘು ಮನೆ ಒಳಗೆ ಹೋದರೆ ಒಂದಷ್ಟು ವೀಕ್ಷಕರನ್ನು ಅವರು ಸೆಳೆಯಬಹುದು ಎನ್ನುವ ಆಲೋಚನೆ ವಾಹಿನಿಯದ್ದು.

ನಾನು ನನ್ನ ಮಡದಿಯನ್ನು ಮತ್ತು ಯೂಟ್ಯೂಬ್ ಚಾನಲ್​ನ ಮಿಸ್ ಮಾಡಿಕೊಳ್ಳುತ್ತೇನೆ ಎಂದು ರಘು ಗೌಡ ಹೇಳಿಕೊಂಡಿದ್ದಾರೆ. ಸುದೀಪ್ ಅವರ ಜತೆ ಮಾತನಾಡುತ್ತಾ, ತಮ್ಮ ನಟನಾ ಆಸಕ್ತಿಗೆ ಅಥವಾ ನಟಿಸುವ ಕನಸಿಗೆ ಸುದೀಪ್ ಸ್ಫೂರ್ತಿ ಎಂದು ಹೇಳಿಕೊಂಡಿದ್ದಾರೆ. ತುಂಬಾ ಜನಗಳ ಜತೆಗೆ ಬೆರೆಯುತ್ತಾರಾ ಎಂಬ ಗೊಂದಲವಿದೆ. ಎರಡು ಮೂರು ವಾರಗಳ ಕಾಲ ಕಷ್ಟವಾಗಬಹುದೇನೋ, ಆದರೆ ಆನಂತರ ಬಿಗ್ ಬಾಸ್ ಮನೆಗೆ ಹೊಂದಿಕೊಳ್ಳಬಹುದು ಎಂದು ರಘು ಗೌಡ ಪತ್ನಿ ಹೇಳಿದ್ದಾರೆ.

ಬಿಗ್​ ಬಾಸ್​ ವೀಕ್ಷಣೆ ಮಾಡೋದು ಎಲ್ಲಿ? ಭಾನುವಾರ ಸಂಜೆ 6 ಗಂಟೆಗೆ ಬಿಗ್​ ಬಾಸ್​ 8ಕ್ಕೆ ಅದ್ದೂರಿಯಾಗಿ ಚಾಲನೆ ಸಿಕ್ಕಿದೆ. ಕಿಚ್ಚ ಸುದೀಪ್​ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಪ್ರತಿ ದಿನ ರಾತ್ರಿ 9:30ರಿಂದ ಬಿಗ್​ ಬಾಸ್​ ಕಾರ್ಯಕ್ರಮ ಪ್ರಸಾರವಾಗಲಿದೆ. ಬಿಗ್​ ಬಾಸ್​ ಎಲ್ಲಿ ವೀಕ್ಷಣೆ ಮಾಡಬೇಕು ಎನ್ನುವುದು ಅನೇಕರ ಪ್ರಶ್ನೆ.  ಕಲರ್ಸ್​ ಕನ್ನಡ ವಾಹಿನಿಯಲ್ಲಿ ಬಿಗ್​ ಬಾಸ್​ 8 ಪ್ರಸಾರವಾಗುತ್ತದೆ. ಆನ್​ಲೈನ್​ನಲ್ಲಿ ಬಿಗ್​ ಬಾಸ್​ ನೋಡಬೇಕು ಎಂದಾದರೆ ನೀವು ವೂಟ್​ ಆ್ಯಪ್​ ಡೌನ್​ಲೋಡ್​ ಮಾಡಿಕೊಳ್ಳಬೇಕು. ಜಿಯೋ ಟಿವಿಯಲ್ಲಿ ಕೂಡ ನೀವು ಬಿಗ್​ ಬಾಸ್​ ವೀಕ್ಷಣೆ ಮಾಡಬಹುದಾಗಿದೆ. ಜಿಯೋ ಟಿವಿಗೆ ತೆರಳಿ ಕಲರ್ಸ್​ ಕನ್ನಡ ಎಂದು ಸರ್ಚ್​ ಮಾಡಿದರೆ ಕಲರ್ಸ್​ ಕನ್ನಡ ವಾಹಿನಿ ಸಿಗಲಿದೆ. ಅದರಲ್ಲಿ ನೀವು ಬಿಗ್​ ಬಾಸ್​ ವೀಕ್ಷಿಸಬಹುದು.

ಇದನ್ನೂ ಓದಿ: Bigg Boss Kannada 8 Launch LIVE Updates: 13ನೇ ಸ್ಪರ್ಧಿಯಾಗಿ ರಘು ಗೌಡ​ ಬಿಗ್​ ಬಾಸ್​ ಮನೆಗೆ ಎಂಟ್ರಿ

Bigg Boss Kannada 8: ಇಂದು ಸಂಜೆ 6 ಗಂಟೆಗೆ ಬಿಗ್​ ಬಾಸ್ 8 ಪ್ರಾರಂಭ​!; ಮನೆ ಒಳಗೆ ಹೋಗುವವರು ಇವ್ರೇನಾ?

Published On - 9:52 pm, Sun, 28 February 21