Manju Pavagada Profile: ಬಿಗ್ ಬಾಸ್ ಮನೆಯಲ್ಲಿ 10ನೇ ಅಭ್ಯರ್ಥಿಯಾಗಿ ಮಂಜು ಪಾವಗಡ

Bigg Boss Kannada Season 8, Manju Pavagada Profile: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಮನೋರಂಜನಾ ಕಾರ್ಯಕ್ರಮ ಮಜಾ ಭಾರತ ಖ್ಯಾತಿಯ ಮಂಜು ಪಾವಗಡ, ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಯಾಗಿ ಮನರಂಜನೆ ನೀಡಲು ಸಜ್ಜಾಗಿದ್ದಾರೆ.

  • TV9 Web Team
  • Published On - 21:08 PM, 28 Feb 2021
Manju Pavagada Profile: ಬಿಗ್ ಬಾಸ್ ಮನೆಯಲ್ಲಿ 10ನೇ ಅಭ್ಯರ್ಥಿಯಾಗಿ ಮಂಜು ಪಾವಗಡ
ಮಂಜು ಪಾವಗಡ

ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಮನೋರಂಜನಾ ಕಾರ್ಯಕ್ರಮ ಮಜಾ ಭಾರತ ಖ್ಯಾತಿಯ ಮಂಜು ಪಾವಗಡ, ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಯಾಗಿ ಮನರಂಜನೆ ನೀಡಲು ಸಜ್ಜಾಗಿದ್ದಾರೆ. ಹೆಚ್ಚಾಗಿ ಲಾಗ್ ಮಂಜು ಎಂದು ಪ್ರಸಿದ್ಧಿ ಪಡೆದಿರುವ ಮಂಜು, ತಮ್ಮ ವಿಭಿನ್ನ ಡೈಲಾಗ್​ಗಳಿಂದ ಜನರಲ್ಲಿ ಹೆಚ್ಚು ಮನೆಮಾತಾಗಿದ್ದಾರೆ. ಮಜಾ ಭಾರತ ಕಾರ್ಯಕ್ರಮದಲ್ಲಿ ಮಿಂಚುತ್ತಿರುವ ಮಂಜು ಪಾವಗಡ ಸ್ಯಾಂಡಲ್‌ವುಡ್​ನಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿರುವುದಲ್ಲದೆ ಕೆಲವು ಚಿತ್ರಗಳಲ್ಲಿ ತಮ್ಮ ಕಾಮಿಡಿ ಮೂಲಕ ಜನರ ಹೃದಯ ಗೆಲ್ಲುವ ಯತ್ನದಲ್ಲಿದ್ದಾರೆ. ಬಿಗ್ ಬಾಸ್ ಮನೆಯ 10ನೇ ಕಂಟೆಸ್ಟೆಂಟ್​ ಆಗಿ ಪ್ರವೇಶ ಪಡೆದಿದ್ದಾರೆ. 

ಬಿಗ್ ಬಾಸ್ ಮನೆಗೆ ಟಿಕ್​ಟಾಕ್ ಸ್ಟಾರ್ ಧನುಶ್ರೀ, ಸಿನಿಮಾ ತಾರೆ ಶುಭಾ ಪೂಂಜ, ಹಿರಿಯ ನಟ ಶಂಕರ್ ಅಶ್ವಥ್, ಹಾಡುಗಾರ ವಿಶ್ವ, ಅಗ್ನಿಸಾಕ್ಷಿ ವೈಷ್ಣವಿ ಗೌಡ, ಬೈಕ್ ರೈಡರ್ ಅರವಿಂದ ಕೆ.ಪಿ., ಪಂಚರಂಗಿ ಖ್ಯಾತಿಯ ನಿಧಿ ಸುಬ್ಬಯ್ಯ, ಸಾಮಾಜಿಕ ಜಾಲತಾಣದಲ್ಲಿ ಬಾ ಗುರು ಹವಾ ಸೃಷ್ಟಿಸಿದ ಶಮಂತ್ ಗೌಡ (ಬ್ರೋ ಗೌಡ), ಬ್ರಹ್ಮಗಂಟು ಧಾರಾವಾಹಿಯ ಗುಂಡಮ್ಮ ಗೀತಾ ಭಾರತಿ ಭಟ್ ಪ್ರವೇಶ ಪಡೆದುಕೊಂಡಿದ್ದಾರೆ. ಇನ್ನುಳಿದ ಅಭ್ಯರ್ಥಿಗಳು ಯಾರು ಎಂಬುದನ್ನು ಕಾದುನೋಡಬೇಕಾಗಿದೆ.

ಬಿಗ್​ ಬಾಸ್​ ವೀಕ್ಷಣೆ ಮಾಡೋದು ಎಲ್ಲಿ?
ಭಾನುವಾರ ಸಂಜೆ 6 ಗಂಟೆಗೆ ಬಿಗ್​ ಬಾಸ್​ 8ಕ್ಕೆ ಅದ್ದೂರಿಯಾಗಿ ಚಾಲನೆ ಸಿಕ್ಕಿದೆ. ಕಿಚ್ಚ ಸುದೀಪ್​ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಪ್ರತಿ ದಿನ ರಾತ್ರಿ 9:30ರಿಂದ ಬಿಗ್​ ಬಾಸ್​ ಕಾರ್ಯಕ್ರಮ ಪ್ರಸಾರವಾಗಲಿದೆ. ಬಿಗ್​ ಬಾಸ್​ ಎಲ್ಲಿ ವೀಕ್ಷಣೆ ಮಾಡಬೇಕು ಎನ್ನುವುದು ಅನೇಕರ ಪ್ರಶ್ನೆ.  ಕಲರ್ಸ್​ ಕನ್ನಡ ವಾಹಿನಿಯಲ್ಲಿ ಬಿಗ್​ ಬಾಸ್​ 8 ಪ್ರಸಾರವಾಗುತ್ತದೆ. ಆನ್​ಲೈನ್​ನಲ್ಲಿ ಬಿಗ್​ ಬಾಸ್​ ನೋಡಬೇಕು ಎಂದಾದರೆ ನೀವು ವೂಟ್​ ಆ್ಯಪ್​ ಡೌನ್​ಲೋಡ್​ ಮಾಡಿಕೊಳ್ಳಬೇಕು. ಜಿಯೋ ಟಿವಿಯಲ್ಲಿ ಕೂಡ ನೀವು ಬಿಗ್​ ಬಾಸ್​ ವೀಕ್ಷಣೆ ಮಾಡಬಹುದಾಗಿದೆ. ಜಿಯೋ ಟಿವಿಗೆ ತೆರಳಿ ಕಲರ್ಸ್​ ಕನ್ನಡ ಎಂದು ಸರ್ಚ್​ ಮಾಡಿದರೆ ಕಲರ್ಸ್​ ಕನ್ನಡ ವಾಹಿನಿ ಸಿಗಲಿದೆ. ಅದರಲ್ಲಿ ನೀವು ಬಿಗ್​ ಬಾಸ್​ ವೀಕ್ಷಿಸಬಹುದು.

ಇದನ್ನೂ ಓದಿ: Bigg Boss Kannada 8 Launch LIVE Updates: ಏಳನೇ ಸ್ಪರ್ಧಿಯಾಗಿ ಬಿಗ್​ ಬಾಸ್​ ಮನೆಗೆ ನಿಧಿ ಸುಬ್ಬಯ್ಯ

Aravind KP Profile: ಬಿಗ್ ಬಾಸ್ ಮನೆ ಪ್ರವೇಶಿಸಿದ ಅರವಿಂದ್ ಕೆ.ಪಿ. ಯಾರು?