KG ಹಳ್ಳಿ- DJ ಹಳ್ಳಿ ಗಲಾಟೆ ಕೇಸ್​: ಇನ್ನೂ 84 ಆರೋಪಿಗಳ ಬಂಧಿಸಿದ ಖಾಕಿ

| Updated By: ಸಾಧು ಶ್ರೀನಾಥ್​

Updated on: Aug 15, 2020 | 9:32 AM

ಬೆಂಗಳೂರು: KG ಹಳ್ಳಿ- DJ ಹಳ್ಳಿ ಗಲಾಟೆಗೆ ಸಂಬಂಧಿಸಿದಂತೆ ಪೊಲೀಸರು ಮತ್ತಷ್ಟು ಆರೋಪಿಗಳನ್ನ ಬಂಧಿಸಿದ್ದಾರೆ. ಡಿಜೆ ಹಳ್ಳಿಯಲ್ಲಿ 34 ಜನ ಆರೋಪಿಗಳು ಹಾಗೂ ಕೆಜಿ ಹಳ್ಳಿಯಲ್ಲಿ 50 ಆರೋಪಿಗಳನ್ನ ಸೇರಿ ಒಟ್ಟು 84 ಆರೋಪಿಗಳ ಬಂಧನ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ 290 ಆರೋಪಿಗಳ ಬಂಧನವಾಗಿದೆ. ಡಿಜೆಹಳ್ಳಿ ಪೊಲೀಸರಿಂದ ನಡೆದ ರಾತ್ರಿ ಕಾರ್ಯಚರಣೆಯಲ್ಲಿ ಏರಿಯಾದ ಗಲ್ಲಿ ಗಲ್ಲಿಗಳಲ್ಲಿ ಅರೋಪಿಗಳ ಹುಡುಕಿ ಹುಡುಕಿ ಅರೆಸ್ಟ್ ಮಾಡಲಾಗಿದೆ. ತಡರಾತ್ರಿ ಹನ್ನೆರಡು ಗಂಟೆ ಸುಮಾರಿಗೆ ಡಿಜೆಹಳ್ಳಿ ಮತ್ತು ಕೆ ಜಿ ಹಳ್ಳಿಯನ್ನ […]

KG ಹಳ್ಳಿ- DJ ಹಳ್ಳಿ ಗಲಾಟೆ ಕೇಸ್​: ಇನ್ನೂ 84 ಆರೋಪಿಗಳ ಬಂಧಿಸಿದ ಖಾಕಿ
Follow us on

ಬೆಂಗಳೂರು: KG ಹಳ್ಳಿ- DJ ಹಳ್ಳಿ ಗಲಾಟೆಗೆ ಸಂಬಂಧಿಸಿದಂತೆ ಪೊಲೀಸರು ಮತ್ತಷ್ಟು ಆರೋಪಿಗಳನ್ನ ಬಂಧಿಸಿದ್ದಾರೆ. ಡಿಜೆ ಹಳ್ಳಿಯಲ್ಲಿ 34 ಜನ ಆರೋಪಿಗಳು ಹಾಗೂ ಕೆಜಿ ಹಳ್ಳಿಯಲ್ಲಿ 50 ಆರೋಪಿಗಳನ್ನ ಸೇರಿ ಒಟ್ಟು 84 ಆರೋಪಿಗಳ ಬಂಧನ ಮಾಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ 290 ಆರೋಪಿಗಳ ಬಂಧನವಾಗಿದೆ. ಡಿಜೆಹಳ್ಳಿ ಪೊಲೀಸರಿಂದ ನಡೆದ ರಾತ್ರಿ ಕಾರ್ಯಚರಣೆಯಲ್ಲಿ ಏರಿಯಾದ ಗಲ್ಲಿ ಗಲ್ಲಿಗಳಲ್ಲಿ ಅರೋಪಿಗಳ ಹುಡುಕಿ ಹುಡುಕಿ ಅರೆಸ್ಟ್ ಮಾಡಲಾಗಿದೆ. ತಡರಾತ್ರಿ ಹನ್ನೆರಡು ಗಂಟೆ ಸುಮಾರಿಗೆ ಡಿಜೆಹಳ್ಳಿ ಮತ್ತು ಕೆ ಜಿ ಹಳ್ಳಿಯನ್ನ ಸುತ್ತುವರೆದ ಪೊಲೀಸರು ಆರೋಪಿಗಳನ್ನ ಹುಡುಕಿ ಬಂಧಿಸಿದ್ದಾರೆ.

ರಾತ್ರಿ ಹನ್ನೆರಡು ಘಂಟೆಯಿಂದ ಬೆಳಗಿನ ಜಾವದವರೆಗೂ ಪೊಲೀಸರ ಕಾರ್ಯಚರಣೆ ನಡೆದಿದ್ದು ಎಸಿಪಿ ರವಿಪ್ರಸಾದ್ ನೇತ್ರತ್ವದಲ್ಲಿ ಅರೋಪಿಗಳನ್ನ ಅರೆಸ್ಟ್ ಮಾಡಲಾಯಿತು. ವಿಡಿಯೋಗಳ ಪರಿಶೀಲನೆ ನಡೆಸಿ ಅರೋಪಿಗಳನ್ನು ಅರೆಸ್ಟ್ ಮಾಡಿದ ಡಿಜೆಹಳ್ಳಿ ಪೋಲಿಸರು ಬಂಧಿತ ಆರೋಪಿಗಳಿಗೆ ಗಲಭೆಯ ವಿಡಿಯೋ ತೋರಿಸಿ ಮತ್ತೆ ಕೆಲವು ಆರೋಪಿಗಳ ಪತ್ತೆ ಹಚ್ಚಿದ್ದಾರೆ.

ಪೊಲೀಸ್ರ ಕಣ್ತಪ್ಪಿಸಲು ಮೊಬೈಲ್​ ಡೇಟಾ ಡಿಲಿಟ್ ಮಾಡಿದ್ದ ಆರೋಪಿಗಳ ಮೊಬೈಲ್ ರಿಕವರಿ ಮಾಡಲು ಟೆಕ್ನಿಕಲ್‌ ಟೀಂಗೆ ರವಾನಿಸಲಾಯಿತು. ಗಲಭೆ ದಿನ ಗ್ರೂಪ್​ಗಳಲ್ಲಿ ರವಾನೆಯಾಗಿದ್ದ ಸಂದೇಶಗಳ ರಿಕವರಿಗೆ ಪೊಲೀಸರು ಮುಂದಾಗಿದ್ದಾರೆ. ಜೊತೆಗೆ, ಗ್ರೂಪ್​ಗಳಿಂದ ಎಗ್ಸಿಟ್ ಆಗಿದ್ದ ಆರೋಪಿಗಳ ಪತ್ತೆ ಹಚ್ಚುತ್ತಿದ್ದಾರೆ.