AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೇಪರ್​ ಕಪ್​ನಲ್ಲಿ ಟೀ-ಕಾಫಿ ಕುಡಿಯೋ ಅಭ್ಯಾಸವನ್ನು ಇಂದೇ ಬಿಟ್ಟುಬಿಡಿ ಪ್ಲೀಸ್; ಇದು ನಿಮ್ಮ ಒಳಿತಿಗೆ

ಓರ್ವ ವ್ಯಕ್ತಿ ಸರಾಸರಿ 3 ಟೀ/ಕಾಫಿ ಕುಡಿಯುತ್ತಾನೆ. ಒಂದೊಮ್ಮೆ ಆತ ಪೇಪರ್​ ಕಪ್​ನಲ್ಲಿ ಇದನ್ನು ಸೇವನೆ ಮಾಡಿದರೆ ದೇಹಕ್ಕೆ ತುಂಬಾನೇ ಅಪಾಯಕಾರಿಯಾಗಲಿದೆ. ಒಂದು ದಿನಕ್ಕೆ ಸುಮಾರು 75 ಸಾವಿರ ಮೈಕ್ರೋ ಪ್ಲಾಸ್ಟಿಕ್​ ಕಣಗಳು ದೇಹ ಸೇರಿಕೊಳ್ಳಲಿವೆ.

ಪೇಪರ್​ ಕಪ್​ನಲ್ಲಿ ಟೀ-ಕಾಫಿ ಕುಡಿಯೋ ಅಭ್ಯಾಸವನ್ನು ಇಂದೇ ಬಿಟ್ಟುಬಿಡಿ ಪ್ಲೀಸ್; ಇದು ನಿಮ್ಮ ಒಳಿತಿಗೆ
ಸಾಂದರ್ಭಿಕ ಚಿತ್ರ
ರಾಜೇಶ್ ದುಗ್ಗುಮನೆ
| Edited By: |

Updated on: Mar 14, 2021 | 6:52 AM

Share

ಕೊರೊನಾ ವೈರಸ್​ ಕಾಣಿಸಿಕೊಂಡ ನಂತರ ಸಾಕಷ್ಟು ಬದಲಾವಣೆ ಆಗಿದೆ. ಹೋಟೆಲ್​ಗಳಲ್ಲಿ ಸ್ಟೀಲ್​ ಪ್ಲೇಟ್​ಗಳ ಬದಲಿಗೆ ಪೇಪರ್​​​ ಪ್ಲೇಟ್​ಗಳು ಬಂದಿವೆ. ಟೀ-ಕಾಫಿ ಕುಡಿಯೋಕೆ ಗ್ಲಾಸ್ ಲೋಟದ ಬದಲಿಗೆ ಪೇಪರ್ ಲೋಟ ಬಂದಿದೆ. ಆದರೆ, ಈ ಪೇಪರ್ ಲೋಟ ತುಂಬಾನೇ ಅಪಾಯಕಾರಿ ಎನ್ನುವ ವಿಚಾರ ಅನೇಕರಿಗೆ ಗೊತ್ತಿಲ್ಲ. ಹೀಗಾಗಿ, ಪೇಪರ್​ ಕಪ್​ನಲ್ಲಿ ಬಿಸಿ ದ್ರವ್ಯವನ್ನು ಹಾಕಿ ಕುಡಿಯುವ ಅಭ್ಯಾಸ ನಿಮಗಿದ್ದರೆ ಇಂದೇ ಬಿಟ್ಟು ಬಿಡಿ ಎನ್ನುತ್ತಿದೆ ಅಧ್ಯಯನ. ಅಂಗಡಿಯಲ್ಲಿ ಕೊಡುವ ಪೇಪರ್​ ಕಪ್​ ಅನ್ನು ಯಾವಾಗಲಾದರೂ ಸರಿಯಾಗಿ ಗಮನಿಸಿದ್ದೀರಾ? ಈ ಕಪ್​ನ ಒಳಭಾಗದಲ್ಲಿ ತೆಳುವಾದ ಪ್ಲಾಸ್ಟಿಕ್​ ಪದರ ಇರುತ್ತದೆ. ಈ ತೆಳ್ಳನೆಯ ಪ್ಲಾಸ್ಟಿಕ್​ ಹಾಕೋದಕ್ಕೂ ಒಂದು ಕಾರಣ ಇದೆ. ಕಾಗದಕ್ಕೆ ಯಾವುದೇ ದ್ರವ್ಯ ತಾಗಿದರೂ ಅದು ಮುದ್ದೆ ಆಗಿ ಬಿಡುತ್ತದೆ. ಆದರೆ, ಅದರ ಮೇಲೆ ಒಂದು ಸಣ್ಣನೆಯ ಪ್ಲಾಸ್ಟಿಕ್​ ಲೇಯರ್ ಇದ್ದರೆ ವಾಟರ್​ಪ್ರೂಫ್​ ರೀತಿ ವರ್ತಿಸುತ್ತದೆ. ಹೀಗಾಗಿ, ತೆಳ್ಳನೆಯ ಪೇಪರ್​ ಲೇಯರ್​ ಹಾಕಲಾಗುತ್ತದೆ.

ಈ ಪೇಪರ್​ ಕಪ್​ನಲ್ಲಿ ಬಿಸಿ ದ್ರವ್ಯ ಹಾಕಿದಾಗ ಪ್ಲಾಸ್ಟಿಕ್​ ಕರಗುತ್ತದೆ. ವೈದ್ಯರು 100 ಎಂಎಲ್​ ಕಪ್​ನಲ್ಲಿ ಬಿಸಿ ನೀರನ್ನು ಹಾಕಿ 15 ನಿಮಿಷ ಇಟ್ಟಿದ್ದರು. ನಂತರ ಮೈಕ್ರೋಸ್ಕೋಪ್​ ಮೂಲಕ ನೀರನ್ನು ಪರೀಕ್ಷಿಸಲಾಯಿತು. ಈ ವೇಳೆ 25,000ಕ್ಕೂ ಅಧಿಕ ಮೈಕ್ರೋ ಪ್ಲಾಸ್ಟಿಕ್​ ಕಂಡಿದೆ. ಇದರ ಜತೆಗೆ ಜಿಂಕ್​, ಲೆಡ್​ ಅಂಶಗಳು ಕೂಡ ನೀರಿನಲ್ಲಿ ಕಂಡಿದೆ.

ಓರ್ವ ವ್ಯಕ್ತಿ ಸರಾಸರಿ 3 ಟೀ/ಕಾಫಿ ಕುಡಿಯುತ್ತಾನೆ. ಒಂದೊಮ್ಮೆ ಆತ ಪೇಪರ್​ ಕಪ್​ನಲ್ಲಿ ಇದನ್ನು ಸೇವನೆ ಮಾಡಿದರೆ ದೇಹಕ್ಕೆ ತುಂಬಾನೇ ಅಪಾಯಕಾರಿಯಾಗಲಿದೆ. ಒಂದು ದಿನಕ್ಕೆ ಸುಮಾರು 75 ಸಾವಿರ ಮೈಕ್ರೋ ಪ್ಲಾಸ್ಟಿಕ್​ ಕಣಗಳು ದೇಹ ಸೇರಿಕೊಳ್ಳಲಿವೆ. ಈ ಪ್ಲಾಸ್ಟಿಕ್​ ಕಣಗಳು ಕಣ್ಣಿಗೆ ಕಾಣುವುದೇ ಇಲ್ಲ. ಆದರೆ, ಇವು ದೇಹ ಸೇರಿ ಭಾರೀ ತೊಂದರೆ ಉಂಟು ಮಾಡುತ್ತದೆ ಎಂದು ಅಧ್ಯಯನ ಹೇಳಿದೆ.

ಇದನ್ನೂ ಓದಿ: ‘5 A Day’: ಎರಡು ಹಣ್ಣು – ಮೂರು ತರಕಾರಿ.. ಪ್ರತಿದಿನವೂ ಸೇವಿಸುವುದರಿಂದ ಆರೋಗ್ಯ ವೃದ್ಧಿ!

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್