
ಮಂಗಳೂರು: ನಗರದಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಹಲವು ಆರೋಪಿಗಳನ್ನು ಸೇರಿಸಿ, ಪೊಲೀಸರು ಇಂದು ಪಾಠ ಮಾಡಿದ್ದಾರೆ. ಮಾದಕ ವಸ್ತು ಮಾರಾಟದಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ನಾಲ್ಕು ಸುತ್ತು ಓಡಿಸಿ, ಸರಿಯಾಗಿ ಬುದ್ಧಿವಾದ ಹೇಳಿದ್ದಾರೆ. ಡ್ರಗ್ ದಂಧೆಕೋರರು ಹಾಗೂ ಮಾದಕ ವಸ್ತು ವ್ಯಸನಿಗಳಾಗಿದ್ದವರ ಪರೇಡ್ ನಡೆಸಿದ್ದಾರೆ.
ನಗರದ ಸಿ.ಎ.ಆರ್. ಮೈದಾನದಲ್ಲಿ ನಡೆದ ಎನ್.ಡಿ.ಪಿ.ಎಸ್. ಪೆರೇಡ್ನಲ್ಲಿ ಪೊಲೀಸ್ ಕಮಿಷನರ್ ಶಶಿಕುಮಾರ್, ಡ್ರಗ್ ಪೆಡ್ಲರ್ಗಳು ಮತ್ತು ಬಳಕೆದಾರರಿಗೆ ಸರಿಯಾದ ತಿಳುವಳಿಕೆ ನೀಡಿದ್ದಾರೆ. ಗಾಂಜಾ ಎಲ್ಲಿಂದ ತರ್ತಾ ಇದ್ದೆ. ಯಾರಿಗೆ ಕೊಡ್ತಾ ಇದ್ದೆ ಅಂತಾ ಪ್ರಶ್ನೆ ಮಾಡಿದ್ದಾರೆ. ಈ ಪ್ರಶ್ನೆಗಳಿಗೆ ಡ್ರಗ್ ಮಾರಾಟಗಾರ ಇಂಗ್ಲಿಷ್ನಲ್ಲಿ ಉತ್ತರಿಸಿದ್ದಾನೆ. ಆ ಬಗ್ಗೆ ಗರಂ ಆದ ಪೊಲೀಸರು, ನೀನು ಇಂಗ್ಲಿಷ್ನಲ್ಲಿ ಮಾತಾಡಿದ್ರು ನೀನು ಡ್ರಗ್ ದಂಧೆಯವನೇ ಎಂದು ಖಡಕ್ ಮಾತು ಹೇಳಿದ್ದಾರೆ. ಕನ್ನಡ ಬರೋದಿಲ್ವಾ ನಿನಗೆ? ಕನ್ನಡದಲ್ಲಿ ಮಾತಾಡು ಎಂದು ಪಾಠ ಮಾಡಿದ್ದಾರೆ. ಮಾದಕ ವಸ್ತುಗಳ ವಹಿವಾಟಿನಲ್ಲಿ
ಈ ಹಿಂದೆ, ಸ್ವೀಟ್ನಲ್ಲಿ ಡ್ರಗ್ಸ್ ಕೊಡುತ್ತಿದ್ದ ವ್ಯಕ್ತಿ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕ್ರಮ ಕೈಗೊಂಡಿದ್ದರು. ಬೇಕರಿಯವರು ಬಕ್ಲಾವಾ ಸ್ವೀಟ್ನಲ್ಲಿ ಡ್ರಗ್ ಕೊಡುತ್ತಿದ್ದರು. ಬೇಕರಿಯವರ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು. ಇಂದು ಅಂಥಾ ಮಾದಕ ವಸ್ತು ದಂಧೆಕೋರರನ್ನು ನಾಲ್ಕು ಸುತ್ತು ಓಡಿಸಿ ಪಾಠ ಮಾಡಿದ್ದಾರೆ. ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಬೇಕರಿಯನ್ನು ಪರಿಶೀಲಿಸಲು ಆಹಾರ ಇಲಾಖೆಗೆ ಮಾಹಿತಿ ನೀಡಲಾಗಿದೆ.




Published On - 8:29 pm, Wed, 6 January 21