ಬಿಎಸ್ಸಿ ಪದವೀಧರ ಕೆಲಸಕ್ಕಾಗಿ ಅಲೆದಲೆದು ಪ್ರಾಣವನ್ನೆ ಬಲಿ ಕೊಟ್ಟ, ಯಾವೂರಲ್ಲಿ?

  • TV9 Web Team
  • Published On - 16:05 PM, 4 Nov 2020
ಬಿಎಸ್ಸಿ ಪದವೀಧರ ಕೆಲಸಕ್ಕಾಗಿ ಅಲೆದಲೆದು ಪ್ರಾಣವನ್ನೆ ಬಲಿ ಕೊಟ್ಟ, ಯಾವೂರಲ್ಲಿ?

ಚಿಕ್ಕಬಳ್ಳಾಪುರ: ನಿರುದ್ಯೋಗ ಸಮಸ್ಯೆಯಿಂದ ಬೇಸತ್ತು ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರದ ಪೊಲೀಸ್ ಕ್ವಾರ್ಟರ್ಸ್​​ನಲ್ಲಿ ನಡೆದಿದೆ.

ಮನೋಜ್ ಕುಮಾರ್(22) ಆತ್ಮಹತ್ಯೆಗೆ ಶರಣಾದ ಯುವಕನಾಗಿದ್ದಾನೆ. ಸಂಬಂಧಿಯೊಬ್ಬರ ಕ್ವಾರ್ಟರ್ಸ್​ನಲ್ಲಿ ಉಳಿದುಕೊಂಡಿದ್ದ ಮನೋಜ್ ಕುಮಾರ್ ಬಿಎಸ್ಸಿ ಪದವಿ ಪಡೆದು ಕೆಲಸಕ್ಕಾಗಿ ಅಲೆಯುತ್ತಿದ್ದ. ​ಯಾವುದೇ ಕೆಲಸ ಸಿಗದೆ ಹಿನ್ನೆಲೆಯಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡ ಮನೋಜ್ ಕ್ವಾರ್ಟರ್ಸ್​ನಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು ಸ್ಥಳಕ್ಕಾಗಮಿಸಿದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಿದ್ದಾರೆ.