ಕಾಫಿ ಡೇ ಮಾಲೀಕ ದಿ. ಸಿದ್ಧಾರ್ಥ್ ಪತ್ನಿಗೆ ಬಂಧನ ಭೀತಿ
ಚಿಕ್ಕಮಗಳೂರು: ಕೆಫೆ ಕಾಫಿ ಡೇ ಮಾಲೀಕ ದಿ. ಸಿದ್ಧಾರ್ಥ್ ಅವರ ಪತ್ನಿಗೆ ಬಂಧನದ ಭೀತಿ ಎದುರಾಗಿದೆ. ಮಾಳವಿಕಾ ಸಿದ್ಧಾರ್ಥ್ ಸೇರಿ 8 ಜನರ ವಿರುದ್ಧ ಮೂಡಿಗೆರೆ ಜೆಎಂಎಫ್‌ಸಿ ಕೋರ್ಟ್‌ನಿಂದ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಲಾಗಿದೆ. ಕಾಫಿ ಬೆಳೆಯನ್ನು ನೀಡಿದ್ದ 300ಕ್ಕೂ ಹೆಚ್ಚು ಕಾಫಿ ಬೆಳೆಗಾರರಿಗೆ ಕಾಫಿ ಡೇ ಕಂಪನಿ ಹಣ ಪಾವತಿಸಿಲ್ಲ. ಎಬಿಸಿ ಕಂಪನಿಯವರು 100 ಕೋಟಿ ರೂ. ಗೂ ಹೆಚ್ಚು ಹಣ ಬಾಕಿ ಉಳಿಸಿಕೊಂಡಿದ್ದಾರೆ. ಕಂಪನಿ ವಿರುದ್ಧ ಬೆಳೆಗಾರರು ಚೆಕ್ ಬೌನ್ಸ್ ಕೇಸ್ ದಾಖಲಿಸಿದ್ದರು.
ಚಿಕ್ಕಮಗಳೂರು: ಕೆಫೆ ಕಾಫಿ ಡೇ ಮಾಲೀಕ ದಿ. ಸಿದ್ಧಾರ್ಥ್ ಅವರ ಪತ್ನಿಗೆ ಬಂಧನದ ಭೀತಿ ಎದುರಾಗಿದೆ. ಮಾಳವಿಕಾ ಸಿದ್ಧಾರ್ಥ್ ಸೇರಿ 8 ಜನರ ವಿರುದ್ಧ ಮೂಡಿಗೆರೆ ಜೆಎಂಎಫ್‌ಸಿ ಕೋರ್ಟ್‌ನಿಂದ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಲಾಗಿದೆ.
ಕಾಫಿ ಬೆಳೆಯನ್ನು ನೀಡಿದ್ದ 300ಕ್ಕೂ ಹೆಚ್ಚು ಕಾಫಿ ಬೆಳೆಗಾರರಿಗೆ ಕಾಫಿ ಡೇ ಕಂಪನಿ ಹಣ ಪಾವತಿಸಿಲ್ಲ. ಎಬಿಸಿ ಕಂಪನಿಯವರು 100 ಕೋಟಿ ರೂ. ಗೂ ಹೆಚ್ಚು ಹಣ ಬಾಕಿ ಉಳಿಸಿಕೊಂಡಿದ್ದಾರೆ. ಕಂಪನಿ ವಿರುದ್ಧ ಬೆಳೆಗಾರರು ಚೆಕ್ ಬೌನ್ಸ್ ಕೇಸ್ ದಾಖಲಿಸಿದ್ದರು.
Published On - 3:45 pm, Wed, 4 November 20