12 ವರ್ಷಗಳ ಬಳಿಕ ಕೋಡಿ ಬಿದ್ದ ದ್ವಾರಸಮುದ್ರ ಕೆರೆ, ಹರಿಯೋ ನೀರಲ್ಲಿ ಪ್ರವಾಸಿಗರ ಮಸ್ತ್ ಮಜಾ
ಹಾಸನ: ಹಳೆಬೀಡು ಅಂದ್ರೆ ತಕ್ಷಣ ನೆನಪಾಗೋದು ಹೊಯ್ಸಳರ ಕಾಲದ ದೇವಸ್ಥಾನ. ಅಲ್ಲಿನ ಕಲೆ, ವಾಸ್ತು ಶಿಲ್ಪಕ್ಕೆ ಮರುಳಾಗದವರೇ ಇಲ್ಲ. ಹೀಗಾಗಿ ದೇಶವಿದೇಶದಿಂದ ಪ್ರವಾಸಿಗರು ಹರಿದು ಬರ್ತಾರೆ. ಹೀಗೆ ಹರಿದು ಬರೋ ಪ್ರವಾಸಿಗರಿಗೆ ಈ ಡಬಲ್ ಧಮಾಕ. ದೇವಸ್ಥಾನ ನೋಡುವುರದ ಜೊತೆ ನೀರಿನಲ್ಲೂ ಸಖತ್ ಎಂಜಾಯ್ ಮಾಡಬಹುದು. ತುಂಬಿದ ಕರೆಯಲ್ಲಿ ಪ್ರವಾಸಿಗರ ನೀರಾಟ.. ಬೋಟಿಂಗ್ ಮಾಡ್ತಾ ಮಸ್ತ್ ಮಜಾ ಮಾಡ್ತಿರೋ ಟೂರಿಸ್ಟ್ ಗಳು.. ಜುಳು ಜುಳು ಹರಿಯುವ ನೀರಿನಲ್ಲಿ ಮಕ್ಕಳ ಆಟ ತುಂಟಾಟ.. ಹಾಸನ ಜಿಲ್ಲೆ ಬೇಲೂರು ತಾಲೂಕಿನ […]

ಹಾಸನ: ಹಳೆಬೀಡು ಅಂದ್ರೆ ತಕ್ಷಣ ನೆನಪಾಗೋದು ಹೊಯ್ಸಳರ ಕಾಲದ ದೇವಸ್ಥಾನ. ಅಲ್ಲಿನ ಕಲೆ, ವಾಸ್ತು ಶಿಲ್ಪಕ್ಕೆ ಮರುಳಾಗದವರೇ ಇಲ್ಲ. ಹೀಗಾಗಿ ದೇಶವಿದೇಶದಿಂದ ಪ್ರವಾಸಿಗರು ಹರಿದು ಬರ್ತಾರೆ. ಹೀಗೆ ಹರಿದು ಬರೋ ಪ್ರವಾಸಿಗರಿಗೆ ಈ ಡಬಲ್ ಧಮಾಕ. ದೇವಸ್ಥಾನ ನೋಡುವುರದ ಜೊತೆ ನೀರಿನಲ್ಲೂ ಸಖತ್ ಎಂಜಾಯ್ ಮಾಡಬಹುದು.
ತುಂಬಿದ ಕರೆಯಲ್ಲಿ ಪ್ರವಾಸಿಗರ ನೀರಾಟ.. ಬೋಟಿಂಗ್ ಮಾಡ್ತಾ ಮಸ್ತ್ ಮಜಾ ಮಾಡ್ತಿರೋ ಟೂರಿಸ್ಟ್ ಗಳು.. ಜುಳು ಜುಳು ಹರಿಯುವ ನೀರಿನಲ್ಲಿ ಮಕ್ಕಳ ಆಟ ತುಂಟಾಟ.. ಹಾಸನ ಜಿಲ್ಲೆ ಬೇಲೂರು ತಾಲೂಕಿನ ಹಳೆಬೀಡಿನ ದ್ವಾರಸಮುದ್ರ ಕೆರೆಯಲ್ಲಿ ಕಂಡು ಬಂದ ದೃಶ್ಯವಿದು. ಕೆಲ ವರ್ಷಗಳಿಂದ ಮಳೆಯಿಲ್ಲದೇ ಖಾಲಿಯಾಗಿದ್ದ ಕೆರೆ, 12 ವರ್ಷಗಳ ಬಳಿಕ ಸಂಪೂರ್ಣ ಭರ್ತಿಯಾಗಿ ಕೋಡಿ ಬಿದ್ದಿದೆ. ಕೆರೆ ಕೋಡಿ ಬಿದ್ದು ಜಲಪಾಲತದಂತೆ ಹರಿಯೋ ನೀರಿನಲ್ಲಿ ಪ್ರವಾಸಿಗರು ಸಖತ್ ಎಂಜಾಯ್ ಮಾಡುತ್ತಿದ್ದಾರೆ.
ದೇಶ ವಿದೇಶಗಳ ನೂರಾರು ಪ್ರವಾಸಿಗರು ಬಂದು ಹಳೆಬೀಡಿನ ದೇವಾಲಯವನ್ನ ಕಣ್ತುಂಬಿಕೊಳ್ಳುವುದರ ಜೊತೆ ದ್ವಾರಸಮುದ್ರ ಕೆರೆ ನೀರಿನಲ್ಲಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಕೆರೆ ನೀರಿನಲ್ಲಿ ಮಿಂದೆದ್ದು ಸಂಭ್ರಮಿಸೋ ಜನರಿಗೆ ಪ್ರವಾಸೋದ್ಯಮ ಇಲಾಖೆಯಿಂದ ಬೋಟಿಂಗ್ ವ್ಯವಸ್ಥೆ ಮಾಡಲಾಗಿದ್ದು, ದಶಕದ ಬಳಿಕ ಮೇಳೈಸಿದ ಕೆರೆ ಅಂದವನ್ನ ಪ್ರವಾಸಿಗರು ಕಣ್ತುಂಬಿಕೊಂಡು ಸಂಭ್ರಮಿಸುತ್ತಿದ್ದಾರೆ.
ಒಟ್ನಲ್ಲಿ ಉತ್ತಮ ಮಳೆಯಿಂದ ತುಂಬಿರೋ ದ್ವಾರಸಮುದ್ರ ಕೆರೆ ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿದ್ದು, ಪ್ರವಾಸಿಗರು ಹಳೆಬೀಡಿನ ದೇಗುಲವನ್ನ ಕಣ್ತುಂಬಿಕೊಳ್ಳೋ ಜೊತೆಗೆ ನೀರಿನಲ್ಲಿ ಮಸ್ತ್ ಮಜಾ ಮಾಡುತ್ತಿದ್ದಾರೆ. -ಮಂಜುನಾಥ್