DySP Lakshmi Suicide Case.. 50 ದಿನ ಕಳೆದ್ರೂ ಪತ್ತೆಯಾಗಿಲ್ಲ ಲಕ್ಷ್ಮೀ ಬಳಸ್ತಿದ್ದ ಮೊಬೈಲ್
DySP Lakshmi Suicide Case.. ಡಿಸೆಂಬರ್ 17 ರಂದು DySP ಲಕ್ಷ್ಮೀ ನಾಗರಭಾವಿಯ ಸ್ನೇಹಿತ ಮಗು ಫ್ಲಾಟ್ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. 50 ದಿನ ಕಳೆದ್ರೂ ಲಕ್ಷ್ಮೀ ಬಳಸ್ತಿದ್ದ ಮೊಬೈಲ್ ಪತ್ತೆಯಾಗಿಲ್ಲ.
ಬೆಂಗಳೂರು: DySP ಲಕ್ಷ್ಮೀ ಸಾವು ಪ್ರಕರಣ ನಿಗೂಢವಾಗಿಯೇ ಉಳಿದು ಬಿಟ್ಟಿದೆ. ಯಾಕಂದ್ರೆ 50 ದಿನ ಕಳೆದ್ರೂ ಲಕ್ಷ್ಮೀ ಬಳಸ್ತಿದ್ದ ಮೊಬೈಲ್ ಪತ್ತೆಯಾಗಿಲ್ಲ. ಸದ್ಯ ಎಫ್ಎಸ್ಎಲ್ ವರದಿಗಾಗಿ ಪೊಲೀಸರು ಕಾದುಕುಳಿತ್ತಿದ್ದಾರೆ.
ಡಿಸೆಂಬರ್ 17 ರಂದು DySP ಲಕ್ಷ್ಮೀ ನಾಗರಭಾವಿಯ ಸ್ನೇಹಿತ ಮಗು ಫ್ಲಾಟ್ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಈ ಪ್ರಕರಣ ಸಂಬಂಧ ಲಕ್ಷ್ಮಿಯ ನಾಲ್ವರು ಸ್ನೇಹಿತರನ್ನು ಪೊಲೀಸರು ವಿಚಾರಣೆ ನಡೆಸಿದ್ದರು. ಆದ್ರೆ ಮೃತ DySP ಲಕ್ಷ್ಮೀ ಆತ್ಮಹತ್ಯೆ ಬಳಿಕ ಆಕೆ ಬಳಸುತ್ತಿದ್ದ ಮೊಬೈಲ್ ನಾಪತ್ತೆಯಾಗಿದೆ.
ಮೊಬೈಲ್ ಬಗ್ಗೆ ಇದುವರೆಗೂ ಯಾವುದೇ ಮಾಹಿತಿ ಸಿಕ್ಕಿಲ್ಲ. ಮೊಬೈಲ್ ಎಲ್ಲಿ ಹೊಯ್ತು ಎಂಬುವುದೇ ದೊಡ್ಡ ಪ್ರಶ್ನೆಯಾಗಿದೆ. ಮೊಬೈಲ್ ಟವರ್ ಲೊಕೇಶನ್ ಪರಿಶೀಲನೆ ನಡೆಸಿದ ಮೇಳೆ ಫೋನ್ ಮನು ಫ್ಲಾಟ್ ಲೊಕೇಶ್ಗೆ ಕೊನೆಗೊಂಡಿದೆ. ನಂತರ ಅದು ಸ್ವಿಚ್ ಆಫ್ ಆಗಿದೆ ಎಂಬ ಮಾಹಿತಿ ಸಿಕ್ಕಿದೆ. ಆದ್ರೆ ಈ ಪ್ರಕರಣ ನಡೆದು 50 ದಿನಗಳಾದ್ರೂ ಅಧಿಕಾರಿಗಳಿಗೆ ಮೊಬೈಲ್ ಫೋನ್ ಸಿಕ್ಕಿಲ್ಲ. ಯಾರು ಫೋನ್ ತೆಗೆದುಕೊಂಡು ಹೋದರು, ಏನಾಯ್ತು ಎಂಬುವುದು ನಿಗೂಢವಾಗಿದೆ.
ಫೋನ್ ಪತ್ತೆಯಾದ್ರೆ ಮಹತ್ವದ ಮಾಹಿತಿ ಸಿಗುವ ಸಾಧ್ಯತೆ ಇದೆ. ಕಾಲ್ ಡೀಟೇಲ್ಸ್, ಇನ್ ಕಮಿಂಗ್, ಔಟ್ ಗೋಯಿಂಗ್ ಕರೆ ವಿವರಗಳು, ವಾಟ್ಸಾಪ್ ಚಾಟಿಂಗ್ ವಿವರ ಪತ್ತೆಯಾಗೋ ಸಾಧ್ಯತೆ ಇದೆ. ದಿನಗಳು ಕಳೆದರೂ DySP ಲಕ್ಷ್ಮೀ ಮೊಬೈಲ್ ಪತ್ತೆಯಾಗಿಲ್ಲ. ಸದ್ಯ FSL ವರದಿ ಬಳಿಕ ಮುಂದಿನ ತನಿಖೆ ಬಗ್ಗೆ ನಿರ್ಧರಿಸಲು ಪೊಲೀಸರು ಚಿಂತನೆ ನಡೆಸಿದ್ದಾರೆ. ಈ ಪ್ರಕರಣ ಅನ್ನಪೂರ್ಣೇಶ್ವರಿನಗರ ಠಾಣೆಯಲ್ಲಿ ದಾಖಲಾಗಿದೆ.
ಮದ್ಯಪಾನ ರಂಪಾಟದ ಜೊತೆಗೆ DySP ಲಕ್ಷ್ಮೀ ವಿರುದ್ಧ ಇತ್ತು ಮತ್ತೊಂದು ಗಂಭೀರ ಆರೋಪ!
DySP Lakshmi ದಾಂಪತ್ಯದಲ್ಲಿ ಎದ್ದ ಬಿರುಗಾಳಿ ಯಾವುದು? ಲಕ್ಷ್ಮೀ ಪ್ರೇಮ ವಿವಾಹದ ಇನ್ಸೈಡ್ ಸ್ಟೋರಿ ಇಲ್ಲಿದೆ