Rajasthan Earthquake: ಬಿಕಾನೇರ್​​ನಲ್ಲಿ ಇಂದು ಬೆಳಗ್ಗೆ ಮತ್ತೆ ಭೂಕಂಪ; ಸತತ 2 ದಿನಗಳಿಂದಲೂ ಮುಂಜಾನೆ ಹೊತ್ತು ನಡುಗುತ್ತಿದೆ ಭೂಮಿ

ಬುಧವಾರ ಪಾಕಿಸ್ತಾನದಲ್ಲಿ ಮಧ್ಯಮ ತೀವ್ರತೆಯ ಭೂಕಂಪನ ಉಂಟಾದ ಬೆನ್ನಲ್ಲೇ ರಾಜಸ್ಥಾನದ ಬಿಕಾನೇರ್​ ಮತ್ತು ಅದರ ಸುತ್ತಲಿನ ಪ್ರದೇಶಗಳಲ್ಲಿ ಹಲವು ಸೆಕೆಂಡ್​​ಗಳ ಕಾಲ ಭೂಮಿ ನಡುಗಿತ್ತು.

Rajasthan Earthquake: ಬಿಕಾನೇರ್​​ನಲ್ಲಿ ಇಂದು ಬೆಳಗ್ಗೆ ಮತ್ತೆ ಭೂಕಂಪ; ಸತತ 2 ದಿನಗಳಿಂದಲೂ ಮುಂಜಾನೆ ಹೊತ್ತು ನಡುಗುತ್ತಿದೆ ಭೂಮಿ
ಸಾಂಕೇತಿಕ ಚಿತ್ರ

ಬಿಕಾನೇರ್​: ರಾಜಸ್ಥಾನದ ಬಿಕಾನೇರ್​​ನಲ್ಲಿ ಇಂದು ಮುಂಜಾನೆ ಮತ್ತೆ ಭೂಕಂಪ (Earthquake) ಆಗಿದ್ದು, ರಿಕ್ಟರ್ ಮಾಪಕ (Rictor Scale)ದಲ್ಲಿ 4.8ರಷ್ಟು ತೀವ್ರತೆ ಪ್ರಮಾಣ ದಾಖಲಾಗಿದೆ. ಇಲ್ಲಿ ನಿನ್ನೆಯೂ ಕೂಡ 5ಕ್ಕೂ ಹೆಚ್ಚು ತೀವ್ರತೆಯ ಭೂಕಂಪ ಆಗಿತ್ತು. ಸತತ ಎರಡು ದಿನಗಳಿಂದ ಭೂಕಂಪನವಾಗುತ್ತಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಇಂದು ಬೆಳಗ್ಗೆ 7.42ರ ಹೊತ್ತಿಗೆ ಭೂಕಂಪ ಆಗಿದೆ. ಯಾವುದೇ ಜೀವ ಹಾನಿ, ದೊಡ್ಡ ಪ್ರಮಾಣದ ಅಪಾಯದ ವರದಿ ಆಗಿಲ್ಲ ಎಂದು ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರ (National Center for Seismology) ತಿಳಿಸಿದೆ.

ಬುಧವಾರ ಪಾಕಿಸ್ತಾನದಲ್ಲಿ ಮಧ್ಯಮ ತೀವ್ರತೆಯ ಭೂಕಂಪನ ಉಂಟಾದ ಬೆನ್ನಲ್ಲೇ ರಾಜಸ್ಥಾನದ ಬಿಕಾನೇರ್​ ಮತ್ತು ಅದರ ಸುತ್ತಲಿನ ಪ್ರದೇಶಗಳಲ್ಲಿ ಹಲವು ಸೆಕೆಂಡ್​​ಗಳ ಕಾಲ ಭೂಮಿ ನಡುಗಿತ್ತು. ನಿನ್ನೆ ತೀವ್ರತೆ ರಿಕ್ಟರ್ ಮಾಪಕದಲ್ಲಿ 5.3ರಷ್ಟು ದಾಖಲಾಗಿದೆ. ಆದರೆ ಯಾವುದೇ ಪ್ರಾಣಾಪಾಯವಾಗಲಿ, ಆಸ್ತಿಪಾಸ್ತಿ ಹಾನಿಯಾಗಲೀ ಆಗಿರಲಿಲ್ಲ.

ಹಾಗೇ ಬುಧವಾರ ತಡರಾತ್ರಿ 2.10ರ ಹೊತ್ತಿಗೆ ಮೇಘಾಲಯದ ಪಶ್ಚಿಮ ಗ್ಯಾರೋ ಹಿಲ್​ನಲ್ಲಿಯೂ 4.1 ರಿಕ್ಟರ್​ ಪ್ರಮಾಣದಷ್ಟು ಭೂಮಿ ಕಂಪನವಾಗಿದೆ. ಇಲ್ಲಿ ತುರಾ ಕೇಂದ್ರಬಿಂದುವಾಗಿದ್ದು, ಭೂಮಿಯಿಂದ 10 ಕಿಮೀ ಆಳದಲ್ಲಿ ಭೂಮಿ ನಡುಗಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ಟ್ವೀಟ್ ಮಾಡಿತ್ತು. ದೇಶಾದ್ಯಂತ ಬಹುತೇಕ ಎಲ್ಲ ಕಡೆಗೂ ಸಿಕ್ಕಾಪಟೆ ಮಳೆಯಾಗುತ್ತಿದ್ದು, ಈ ಮಧ್ಯೆ ಅಲ್ಲಲ್ಲಿ ಭೂಕಂಪನವೂ ಉಂಟಾಗುತ್ತಿದೆ. ಸ್ವಲ್ಪ ದಿನಗಳ ಹಿಂದೆ ಮಣಿಪುರದಲ್ಲಿ 4.5ರಷ್ಟು ತೀವ್ರತೆಯುಳ್ಳ ಭೂಕಂಪನ ಆಗಿತ್ತು. ಇನ್ನೂ ಹಲವೆಡೆಗಳಲ್ಲಿ ಭೂಕುಸಿತ ಕೂಡ ಆಗುತ್ತಿದೆ.

ಇದನ್ನೂ ಓದಿ: ದ್ರಾಕ್ಷಿ ಹಣ್ಣಿನ ಬೀಜದ ಆರೋಗ್ಯ ಪ್ರಯೋಜನಗಳು; ಚರ್ಮದ ಕಾಂತಿ ಹೆಚ್ಚಿಸಿಕೊಳ್ಳಲು ಒಳ್ಳೆಯ ಔಷಧ

Earthquake of 4.8 magnitude hit Rajasthan’s Bikaner

Read Full Article

Click on your DTH Provider to Add TV9 Kannada