ಬಟ್ಟೆ ಒಣಗಿ ಹಾಕುವಾಗ ವಿದ್ಯುತಾಘಾತ: ಕುಟುಂಬದ ಮೂವರ ಸಾವು

|

Updated on: Sep 11, 2019 | 10:55 AM

ಹಾಸನ: ಮನೆ ಮುಂದೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಒಂದೇ ಕುಟುಂಬದ 3 ಮೃತಪಟ್ಟಿದ್ದು, ಮಗುವಿನ ಸ್ಥಿತಿ ಗಂಭೀರವಾಗಿದೆ. ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಅಗಸರಹಳ್ಳಿಯಲ್ಲಿ ಬುಧವಾರ ಬೆಳಗ್ಗೆ ಈ ದುರ್ಘಟನೆ ನಡೆದಿದೆ. ಭಾಗ್ಯಮ್ಮ(50) ದಾಕ್ಷಾಯಿಣಿ(30) ದಯಾನಂದ(40)ಮೃತರು. ಬೆಳಗ್ಗೆ ಬಟ್ಟೆ ಒಣಗಿಸಲು ಹೋಗಿದ್ದ ದಾಕ್ಷಾಯಿಣಿ ವಿದ್ಯುತ್​ ತಂತಿ ಮೇಲೆ ಕಾಲಿಟ್ಟಿದ್ದಾರೆ. ಈ ವೇಳೆ ದಾಕ್ಷಾಯಿಣಿಯನ್ನು ರಕ್ಷಿಸಲು ಭಾಗ್ಯಮ್ಮ ಮತ್ತು ದಯಾನಂದ ಪ್ರಯತ್ನಿಸಿದ್ದಾರೆ. ಈ ಪ್ರಯತ್ನದಲ್ಲಿ ಮೂವರೂ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಮಗುವೊಂದು ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. […]

ಬಟ್ಟೆ ಒಣಗಿ ಹಾಕುವಾಗ ವಿದ್ಯುತಾಘಾತ: ಕುಟುಂಬದ ಮೂವರ ಸಾವು
Follow us on

ಹಾಸನ: ಮನೆ ಮುಂದೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಒಂದೇ ಕುಟುಂಬದ 3 ಮೃತಪಟ್ಟಿದ್ದು, ಮಗುವಿನ ಸ್ಥಿತಿ ಗಂಭೀರವಾಗಿದೆ.

ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಅಗಸರಹಳ್ಳಿಯಲ್ಲಿ ಬುಧವಾರ ಬೆಳಗ್ಗೆ ಈ ದುರ್ಘಟನೆ ನಡೆದಿದೆ. ಭಾಗ್ಯಮ್ಮ(50) ದಾಕ್ಷಾಯಿಣಿ(30) ದಯಾನಂದ(40)ಮೃತರು. ಬೆಳಗ್ಗೆ ಬಟ್ಟೆ ಒಣಗಿಸಲು ಹೋಗಿದ್ದ ದಾಕ್ಷಾಯಿಣಿ ವಿದ್ಯುತ್​ ತಂತಿ ಮೇಲೆ ಕಾಲಿಟ್ಟಿದ್ದಾರೆ.
ಈ ವೇಳೆ ದಾಕ್ಷಾಯಿಣಿಯನ್ನು ರಕ್ಷಿಸಲು ಭಾಗ್ಯಮ್ಮ ಮತ್ತು ದಯಾನಂದ ಪ್ರಯತ್ನಿಸಿದ್ದಾರೆ. ಈ ಪ್ರಯತ್ನದಲ್ಲಿ ಮೂವರೂ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಮಗುವೊಂದು ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸರು ತೆರಳಿದ್ದಾರೆ.

Published On - 10:54 am, Wed, 11 September 19