ರಾಗಿಹಳ್ಳಿ ಬಳಿ ಬೈಕ್ ಚಾಲಕನ ಮೇಲೆ ಆನೆ ದಾಳಿ.. ಗಾಯಾಳು ಆಸ್ಪತ್ರೆಗೆ ದಾಖಲು
ಬೈಕ್ ಸವಾರನ ಮೇಲೆ ಆನೆ ದಾಳಿ ನಡೆಸಿದ ಘಟನೆ ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ರಾಗಿಹಳ್ಳಿಯಲ್ಲಿ ನಡೆದಿದೆ.

ಗಣೇಶ್ ಮೇಲೆ ಆನೆ ದಾಳಿ
ಆನೇಕಲ್: ಬೈಕ್ ಸವಾರನ ಮೇಲೆ ಆನೆ ದಾಳಿ ನಡೆಸಿದ ಘಟನೆ ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ರಾಗಿಹಳ್ಳಿಯಲ್ಲಿ ನಡೆದಿದೆ. ಘಟನೆಯಲ್ಲಿ ಕೊರಟಗೆರೆ ನಿವಾಸಿ ಗಣೇಶ್ ಎಂಬಾತನ ಕೈ, ಕಾಲಿಗೆ ಗಾಯಗಳಾಗಿವೆ.
ರಾಗಿಹಳ್ಳಿ ಬಹುತೇಕ ಕಾಡು ಪ್ರದೇಶವಾಗಿದೆ. ಹೀಗಾಗಿ ಆಗಾಗ ಅಲ್ಲಿ ಆನೆಗಳ ಎಂಟ್ರಿ ಸರ್ವೇ ಸಾಮಾನ್ಯ. ಅಂದು ಕೂಡ ರಾತ್ರಿ 8ಗಂಟೆಯ ಸಮಯಕ್ಕೆ ಗಜ ರಾಜ ಕತ್ತಲಲ್ಲಿ ಬೈಕ್ ಚಲಾಯಿಸುತ್ತಿದ್ದ ಗಣೇಶ್ ಮೇಲೆ ಒಂದೇ ಸಮನೆ ದಾಳಿ ನಡೆಸಿದ್ದಾನೆ. ಘಟನೆಯಲ್ಲಿ ಗಾಯಗೊಂಡ ಗಣೇಶ್ ಈಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಆನೆ ದಾಳಿ: ಅರಣ್ಯ ಇಲಾಖೆಯ ಗೂಡ್ಸ್ ಟೆಂಪೋ ಜಖಂ, ಡ್ರೇವರ್ ಬಚಾವ್!