ಮೈಮೇಲೆ ದೇವರು ಬಂದಂತೆ ನಟಿಸಿ ಭಕ್ತರಿಗೆ ಮೋಸ: ವಿಡಿಯೋದಲ್ಲಿ ಬಯಲಾಯ್ತು ವಂಚಕನ ನಾಟಕ
ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಬೆಳ್ಳೂರು ಗ್ರಾಮದಲ್ಲಿ ಮೈಮೇಲೆ ದೇವರು ಬಂದಿದೆ ಎಂದು ಜನರಿಂದ ಸಾವಿರಾರು ರೂಪಾಯಿ ದೋಚುತ್ತಿದ್ದ ವ್ಯಕ್ತಿಯ ಅಸಲಿ ರೂಪವನ್ನು ಗ್ರಾಮಸ್ಥರು ಬಯಲು ಮಾಡಿದ್ದಾರೆ.

ಕೊಡಗು: ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಬೆಳ್ಳೂರು ಗ್ರಾಮದಲ್ಲಿ ಮೈಮೇಲೆ ದೇವರು ಬಂದಿದೆ ಎಂದು ಜನರಿಂದ ಸಾವಿರಾರು ರೂಪಾಯಿ ದೋಚುತ್ತಿದ್ದ ವ್ಯಕ್ತಿಯ ಅಸಲಿ ರೂಪವನ್ನು ಗ್ರಾಮಸ್ಥರು ಬಯಲು ಮಾಡಿದ್ದಾರೆ.
ಬಲ್ಯಮುಂಡೂರು ಗ್ರಾಮದ ರವಿ ಎಂಬಾತ ತನ್ನ ಮೇಲೆ ವೆಂಕಟರಮಣ ದೇವರು ಬಂದಂತೆ ನಟನೆ ಮಾಡಿ ಜನರನ್ನು ವಂಚಿಸುತ್ತಿದ್ದ. ಜೊತೆಗೆ, ಯಾರಾದ್ರು ಮಾಟ-ಮಂತ್ರ ಮಾಡಿದ್ದರೆ ಅದನ್ನು ತೆಗೆಯುತ್ತೇನೆ ಎಂದು ಜನರನ್ನು ನಂಬಿಸಿ ತಾನೇ ಗುಂಡಿ ತೋಡಿ ಅದರಲ್ಲಿ ತಗಡನ್ನು ಹಾಕಿ ಬಳಿಕ ಮಾಟ ತೆಗೆಯುವುದಾಗಿ ಅದನ್ನು ಹೊರತೆಗೆದು ತೋರಿಸ್ತಿದ್ದ. ಈ ಮುಖಾಂತರ ಜನರ ಕಣ್ಣಿಗೆ ಮಣ್ಣೆರಚುತ್ತಿದ್ದ.
ಸದ್ಯ, ರವಿ ಕಳ್ಳಾಟವನ್ನು ವಿಡಿಯೋ ಮಾಡಿರುವ ಜನರು ಆತನ ನಾಟಕವನ್ನು ಬಯಲು ಮಾಡಿದ್ದಾರೆ. ವಂಚಕ ರವಿ ಸಹ ತಪ್ಪೊಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
Published On - 10:51 am, Sun, 6 December 20