ಹಂಪಿ ಉತ್ಸವ ವೇಳೆ ಬಾಯಾರಿಕೆಯಿಂದ ಬಸವಳಿದಿದ್ದ ಗಜರಾಜ ಮಾಡಿದ್ದೇನು ಗೊತ್ತಾ? photos

ಬಳ್ಳಾರಿ: ಹಂಪಿ ಉತ್ಸವ ಸಂದರ್ಭ ಮೆರವಣಿಗೆಯ ವೇಳೆ ಬಾಯಾರಿಕೆಯಿಂದ ಬಸವಳಿದಿದ್ದ ಗಜರಾಜ ಅದೇ ರಸ್ತೆಯಲ್ಲಿ ಬರುತ್ತಿದ್ದ ಟ್ಯಾಕ್ಟರ್ ಟ್ಯಾಂಕರನ್ನು ಅಡ್ಡಗಟ್ಟಿ, ಟ್ಯಾಂಕರ್​ನ ಮುಚ್ಚುಳ ತೆರೆಯುವಂತೆ ಸನ್ನೆ ಮಾಡಿ ನೀರು ಕುಡಿದಿರುವ ಪ್ರಸಂಗ ನಿನ್ನೆ ನಡೆದಿದೆ. ಹಂಪಿ ಉತ್ಸವದ ಶೋಭಾ ಯಾತ್ರೆಗೆ ಅರಣ್ಯ ಸಚಿವ ಆನಂದ್ ಸಿಂಗ್ ಚಾಲನೆ ನೀಡಿದ್ದರು. ಚಾಲನೆಯ ಸಮಯದಲ್ಲಿ ಬಾಯಾರಿಕೆಯಿಂದ ತೀವ್ರ ಬಸವಳಿದಿದ್ದ ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಗಜರಾಜ ಟ್ಯಾಕ್ಟರ್ ಟ್ಯಾಂಕರನ್ನು ಅಡ್ಡಗಟ್ಟಿದೆ. ಬಳಿಕ ಟ್ಯಾಂಕರ್ ಚಾಲಕನಿಗೆ ಸನ್ನೆ ಮಾಡಿ ನೀರು ಸೇವಿಸಿ ಗಜರಾಜ ದಾಹ […]

ಹಂಪಿ ಉತ್ಸವ ವೇಳೆ ಬಾಯಾರಿಕೆಯಿಂದ ಬಸವಳಿದಿದ್ದ ಗಜರಾಜ ಮಾಡಿದ್ದೇನು ಗೊತ್ತಾ? photos

Updated on: Nov 14, 2020 | 11:24 AM

ಬಳ್ಳಾರಿ: ಹಂಪಿ ಉತ್ಸವ ಸಂದರ್ಭ ಮೆರವಣಿಗೆಯ ವೇಳೆ ಬಾಯಾರಿಕೆಯಿಂದ ಬಸವಳಿದಿದ್ದ ಗಜರಾಜ ಅದೇ ರಸ್ತೆಯಲ್ಲಿ ಬರುತ್ತಿದ್ದ ಟ್ಯಾಕ್ಟರ್ ಟ್ಯಾಂಕರನ್ನು ಅಡ್ಡಗಟ್ಟಿ, ಟ್ಯಾಂಕರ್​ನ ಮುಚ್ಚುಳ ತೆರೆಯುವಂತೆ ಸನ್ನೆ ಮಾಡಿ ನೀರು ಕುಡಿದಿರುವ ಪ್ರಸಂಗ ನಿನ್ನೆ ನಡೆದಿದೆ.

ಹಂಪಿ ಉತ್ಸವದ ಶೋಭಾ ಯಾತ್ರೆಗೆ ಅರಣ್ಯ ಸಚಿವ ಆನಂದ್ ಸಿಂಗ್ ಚಾಲನೆ ನೀಡಿದ್ದರು. ಚಾಲನೆಯ ಸಮಯದಲ್ಲಿ ಬಾಯಾರಿಕೆಯಿಂದ ತೀವ್ರ ಬಸವಳಿದಿದ್ದ ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಗಜರಾಜ ಟ್ಯಾಕ್ಟರ್ ಟ್ಯಾಂಕರನ್ನು ಅಡ್ಡಗಟ್ಟಿದೆ. ಬಳಿಕ ಟ್ಯಾಂಕರ್ ಚಾಲಕನಿಗೆ ಸನ್ನೆ ಮಾಡಿ ನೀರು ಸೇವಿಸಿ ಗಜರಾಜ ದಾಹ ತೀರಿಸಿಕೊಂಡಿದೆ!

ಇದೇ ವೇಳೆ ಗಜರಾಜನ ಬಳಲಿಕೆಯನ್ನು ಕಂಡ ಆನಂದ್ ಸಿಂಗ್ ಪುತ್ರ ಸಿದ್ದಾರ್ಥ ಸಿಂಗ್ ಟ್ಯಾಕ್ಟರ್ ನಿಲ್ಲಿಸಲು ಚಾಲಕನಿಗೆ ಸೂಚಿಸಿದ್ದಾರೆ. ಶಾಸಕರ ಪುತ್ರನ ಸೂಚನೆ ಮೇರೆಗೆ ಟ್ಯಾಕ್ಟರ್ ಟ್ಯಾಂಕರ್​ ಅನ್ನು ಚಾಲಕ ನಿಲ್ಲಿಸಿದ್ದಾನೆ. ಟ್ಯಾಂಕರ್ ನಿಂದ ನೀರು ಕುಡಿದ ಬಳಿಕ ಸಂತೃಪ್ತನಾದ ಗಜರಾಜ ಮೆರವಣಿಗೆಯಲ್ಲಿ ಮುಂದೆ ಸಾಗಿದ..!

Published On - 11:23 am, Sat, 14 November 20