ವಿಶ್ವದ 2ನೇ ಅತಿದೊಡ್ಡ ಶ್ರೀಮಂತ ಬಿಲ್​ ಗೇಟ್ಸ್​ನ ಹಿಂದಿಕ್ಕಿದ ಉದ್ಯಮಿ ಎಲಾನ್​ ಮಸ್ಕ್!

ಕಳೆದ ಜನವರಿಯಲ್ಲಿ 35ನೇ ಸ್ಥಾನದಲ್ಲಿದ ಮಸ್ಕ್ ಈಗ ಏಕಾಎಕಿ 2ನೇ ಸ್ಥಾನಕ್ಕೆ ಏರಿದ್ದು, ಆ ಮೂಲಕ ಎಲಾನ್ ಮಸ್ಕ್ ಕಳೆದ ಸೋಮವಾರ ಮೈಕ್ರೋಸಾಫ್ಟ್​ ಕಂಪನಿಯ ಸಹ ಸಂಸ್ಥಾಪಕ ಬಿಲ್ ಗೇಟ್ಸ್​ರನ್ನು ಹಿಂದಿಕ್ಕಿ ವಿಶ್ವದ ಎರಡನೇ ಅತಿ ದೊಡ್ಡ ಶ್ರೀಮಂತನಾಗಿ ಹೊರಹೊಮ್ಮಿದ್ದಾರೆ.

ವಿಶ್ವದ 2ನೇ ಅತಿದೊಡ್ಡ ಶ್ರೀಮಂತ ಬಿಲ್​ ಗೇಟ್ಸ್​ನ ಹಿಂದಿಕ್ಕಿದ ಉದ್ಯಮಿ ಎಲಾನ್​ ಮಸ್ಕ್!
ಎಲಾನ್​ ಮಸ್ಕ್
Follow us
preethi shettigar
| Updated By: KUSHAL V

Updated on:Nov 24, 2020 | 6:25 PM

ಟೆಸ್ಲಾ ಸಹ ಸಂಸ್ಥಾಪಕ ಎಲಾನ್ ಮಸ್ಕ್ ನ ನಿವ್ವಳ ಸಂಪತ್ತಿನ ಮೌಲ್ಯ 7.2 ಬಿಲಿಯನ್​ ಡಾಲರ್​ನಿಂದ 127.9 ಬಿಲಿಯನ್ ಡಾಲರ್​​ಗೆ ಏರಿದೆ. ಬ್ಲೂಮ್​ಬರ್ಗ್​ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ ಜಗತ್ತಿನ 500 ಅತಿದೊಡ್ಡ ಶ್ರೀಮಂತರ ಪಟ್ಟಿಯಲ್ಲಿರುವ ಮಸ್ಕ್​ ಯಾರೂ ಮಾಡದ ಸಾಧನೆಯನ್ನು ಮಾಡಿದ್ದಾರೆ. ಕಳೆದ ಜನವರಿಯಲ್ಲಿ 35ನೇ ಸ್ಥಾನದಲ್ಲಿದ ಮಸ್ಕ್ ಈಗ ಏಕಾಎಕಿ 2ನೇ ಸ್ಥಾನಕ್ಕೆ ಏರಿದ್ದು, ಆ ಮೂಲಕ ಎಲಾನ್ ಮಸ್ಕ್ ಕಳೆದ ಸೋಮವಾರ ಮೈಕ್ರೋಸಾಫ್ಟ್​ ಕಂಪನಿಯ ಸಹ ಸಂಸ್ಥಾಪಕ ಬಿಲ್ ಗೇಟ್ಸ್​ರನ್ನು ಹಿಂದಿಕ್ಕಿ ವಿಶ್ವದ ಎರಡನೇ ಅತಿ ದೊಡ್ಡ ಶ್ರೀಮಂತನಾಗಿ ಹೊರಹೊಮ್ಮಿದ್ದಾರೆ.

ಈ ವರ್ಷ ಎಲಾನ್ ಮಸ್ಕ್ ತನ್ನ ನಿವ್ವಳ ಸಂಪತ್ತಿನ ಮೌಲ್ಯಕ್ಕೆ 100.3 ಬಿಲಿಯನ್ ಡಾಲರ್​ನಷ್ಟು ಮೊತ್ತ​ ಸೇರಿಸಿದ್ದು,ಇದು ಟೆಸ್ಲಾ ಕಂಪನಿಯ ದೊಡ್ಡ ಸಾಧನೆಯಾಗಿದೆ. ಟೆಸ್ಲಾ ಕಂಪನಿಯ ಆದಾಯವೇ 500 ಬಿಲಿಯನ್​ ಡಾಲರ್​ರಷ್ಟಿದೆ. ಬಿಲ್​ ಗೇಟ್ಸ್ ಇದೇ ಮೊದಲ ಬಾರಿಗೆ ಎರಡನೇ ಸ್ಥಾನಕ್ಕಿಂತ ಕೆಳ ಹಂತದಲ್ಲಿದ್ದಾರೆ.

ಫಾರ್ಚೂನ್ ವರದಿಯ ಪ್ರಕಾರ, ಬಿಲ್ ಗೇಟ್ಸ್ ದತ್ತಿ ಸಂಸ್ಥೆಗಳಿಗೆ ಅಪಾರ ಪ್ರಮಾಣದಲ್ಲಿ ದೇಣಿಗೆ ನೀಡದಿದ್ದರೆ ಅವರ ನಿವ್ವಳ ಸಂಪತ್ತಿನ ಮೌಲ್ಯದಲ್ಲಿ ಕುಸಿತ ಕಂಡು ಬರುತ್ತಿರಲಿಲ್ಲ. 2006 ರಿಂದ ಬಿಲ್ ಗೇಟ್ಸ್ ತಮ್ಮ ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಪ್ರತಿಷ್ಠಾನಕ್ಕೆ 27 ಬಿಲಿಯನ್​ ಡಾಲರ್​ಗಿಂತ ಹೆಚ್ಚಿನ ಮೊತ್ತವನ್ನು ದಾನ ಮಾಡಿದ್ದಾರೆ.

ಒಟ್ಟಾರೆ, ಕೊರೊನಾದಿಂದ ಜಾಗತಿಕ ಆರ್ಥಿಕತೆಗೆ ಹೊಡೆತಬಿದ್ದು ವಿಶ್ವದ ಕಾರ್ಮಿಕ ವರ್ಗ ಮತ್ತು ಬಡವರ ಮೇಲೆ ಇದರ ಪರಿಣಾಮ ಬೀರಿದ್ದರೂ, ಬ್ಲೂಮ್​ಬರ್ಗ್​ ಬಿಲಿಯನೇರ್ಸ್ ಸೂಚ್ಯಂಕದ ಸದಸ್ಯರು ಮಾತ್ರ ತಮ್ಮ ಸಂಪತ್ತನ್ನು ಒಟ್ಟು 1.3 ಟ್ರಿಲಿಯನ್ ಡಾಲರ್​ನಷ್ಟು ವೃದ್ಧಿಸಿದ್ದಾರೆ.

Published On - 6:23 pm, Tue, 24 November 20

ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ