AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಲ್ಲೆಂದರಲ್ಲಿ ಹ್ಯಾಂಡ್ ಗ್ಲೌಸ್, ಮಾಸ್ಕ್ ಎಸೆಯುವ ಮುನ್ನ ಇದನ್ನೊಮ್ಮೆ ಓದಿ

ಧಾರವಾಡ: ಕೊರೊನಾ ಇದೀಗ ಸಾಕಷ್ಟು ಆತಂಕವನ್ನು ಸೃಷ್ಟಿ ಮಾಡುತ್ತಿದೆ. ಕೊವಿಡ್ 19 ಹೇಗೆಲ್ಲಾ ವಕ್ಕರಿಸುತ್ತೆ ಅನ್ನೋದೇ ಕೆಲವೊಮ್ಮೆ ಗೊತ್ತಾಗೋದಿಲ್ಲ. ಇಂಥ ಸಂದರ್ಭಗಳಲ್ಲಿ ಸಾರ್ವಜನಿಕರು ಕೂಡ ಸಾಮಾಜಿಕ ಜವಾಬ್ದಾರಿ ಮೆರೆಯೋ ಅವಶ್ಯಕತೆ ಇದೆ. ಆದರೆ ಧಾರವಾಡದಲ್ಲಿ ಕೊರೊನಾ ವಾರಿಯರ್ಸ್ ಬಳಸುತ್ತಿರೋ ಹ್ಯಾಂಡ್ ಗ್ಲೌಸ್, ಮಾಸ್ಕ್​ಗಳು ಸದ್ದಿಲ್ಲದೇ ಡಸ್ಟ್ ಬಿನ್ ಸೇರಿ ಸಾಕಷ್ಟು ಆತಂಕವನ್ನು ಸೃಷ್ಟಿಸುತ್ತಿವೆ. ಎಲ್ಲೆಂದರಲ್ಲಿ ಹ್ಯಾಂಡ್ ಗ್ಲೌಸ್, ಮಾಸ್ಕ್ ಎಸೆತ: ಅದರಲ್ಲೂ ರೈಲ್ವೆ ನಿಲ್ದಾಣದ ಸುತ್ತಮುತ್ತಲಿನ ಡಸ್ಟ್ ಬಿನ್​ಗಳಲ್ಲಿ ಇಂಥ ವಸ್ತುಗಳು ಕಂಡು ಬರುತ್ತಿದ್ದು, ಸ್ಥಳೀಯರು ಆತಂಕ […]

ಎಲ್ಲೆಂದರಲ್ಲಿ ಹ್ಯಾಂಡ್ ಗ್ಲೌಸ್, ಮಾಸ್ಕ್ ಎಸೆಯುವ ಮುನ್ನ ಇದನ್ನೊಮ್ಮೆ ಓದಿ
ಸಾಧು ಶ್ರೀನಾಥ್​
| Edited By: |

Updated on: May 23, 2020 | 11:23 AM

Share

ಧಾರವಾಡ: ಕೊರೊನಾ ಇದೀಗ ಸಾಕಷ್ಟು ಆತಂಕವನ್ನು ಸೃಷ್ಟಿ ಮಾಡುತ್ತಿದೆ. ಕೊವಿಡ್ 19 ಹೇಗೆಲ್ಲಾ ವಕ್ಕರಿಸುತ್ತೆ ಅನ್ನೋದೇ ಕೆಲವೊಮ್ಮೆ ಗೊತ್ತಾಗೋದಿಲ್ಲ. ಇಂಥ ಸಂದರ್ಭಗಳಲ್ಲಿ ಸಾರ್ವಜನಿಕರು ಕೂಡ ಸಾಮಾಜಿಕ ಜವಾಬ್ದಾರಿ ಮೆರೆಯೋ ಅವಶ್ಯಕತೆ ಇದೆ. ಆದರೆ ಧಾರವಾಡದಲ್ಲಿ ಕೊರೊನಾ ವಾರಿಯರ್ಸ್ ಬಳಸುತ್ತಿರೋ ಹ್ಯಾಂಡ್ ಗ್ಲೌಸ್, ಮಾಸ್ಕ್​ಗಳು ಸದ್ದಿಲ್ಲದೇ ಡಸ್ಟ್ ಬಿನ್ ಸೇರಿ ಸಾಕಷ್ಟು ಆತಂಕವನ್ನು ಸೃಷ್ಟಿಸುತ್ತಿವೆ.

ಎಲ್ಲೆಂದರಲ್ಲಿ ಹ್ಯಾಂಡ್ ಗ್ಲೌಸ್, ಮಾಸ್ಕ್ ಎಸೆತ: ಅದರಲ್ಲೂ ರೈಲ್ವೆ ನಿಲ್ದಾಣದ ಸುತ್ತಮುತ್ತಲಿನ ಡಸ್ಟ್ ಬಿನ್​ಗಳಲ್ಲಿ ಇಂಥ ವಸ್ತುಗಳು ಕಂಡು ಬರುತ್ತಿದ್ದು, ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಏಕೆಂದರೆ ಇತ್ತೀಚೆಗಷ್ಟೇ ಬೇರೆ ರಾಜ್ಯಗಳಿಗೆ ಹೋಗಿದ್ದ ನೂರಾರು ವಲಸೆ ಕಾರ್ಮಿಕರು ಶ್ರಮಿಕ್ ರೈಲುಗಳ ಮೂಲಕ ಜಿಲ್ಲೆಗೆ ಮರಳಿದ್ದಾರೆ. ಈ ವೇಳೆ ಅವರಿಗಾಗಿ ರೈಲು ನಿಲ್ದಾಣದಲ್ಲಿ ಕೆಲಸ ನಿರ್ವಹಿಸಿದ ರೈಲ್ವೆ ಇಲಾಖೆ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಸಿಬ್ಬಂದಿ ತಮ್ಮ ಕೆಲಸ ಮುಗಿದ ಬಳಿಕ ಹ್ಯಾಂಡ್ ಗ್ಲೌಸ್, ಮಾಸ್ಕ್​ಗಳನ್ನು ಎಲ್ಲೆಂದರಲ್ಲಿ ಎಸೆದು ಹೋಗಿದ್ದಾರೆ.

ಕೆಲವರು ಡಸ್ಟ್ ಬಿನ್ ಗಳಲ್ಲಿ ಎಸೆದಿದ್ದಾರಾದರೂ ಅದು ಕೂಡ ಸರಿಯಾದ ಕ್ರಮವಲ್ಲ. ಏಕೆಂದರೆ ರೈಲು ಮುಖಾಂತರ ಬಂದವರಿಗೆ ಸೋಂಕು ತಗುಲಿದ್ದರೆ, ಅವರಿಂದ ರೈಲು ನಿಲ್ದಾಣದಲ್ಲಿ ಕೆಲಸಕ್ಕೆ ನಿಯೋಜಿಸಿದವರಿಗೆ ಸೋಂಕು ತಗುಲೋ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಹೀಗಾಗಿ ಈ ವಸ್ತುಗಳನ್ನು ನಿಯಮಗಳ ಪ್ರಕಾರವೇ ನಾಶಪಡಿಸಬೇಕು.

ಡಸ್ಟ್​ ಬಿನ್​ಗಳಲ್ಲಿ ಆಹಾರ ಪದಾರ್ಥ ತಿನ್ನುವ ಜಾನುವಾರುಗಳು: ಇದೆಲ್ಲ ಒಂದು ಕಡೆಯಾದರೆ ಇವೇ ಡಸ್ಟ್ ಬಿನ್​ಗಳಲ್ಲಿ ಜನರು ಉಳಿದ ಆಹಾರ ಪದಾರ್ಥಗಳನ್ನು ಎಸೆಯೋದ್ರಿಂದ ಜಾನುವಾರುಗಳು ಬಂದು ಅದನ್ನು ತಿನ್ನುತ್ತಿವೆ. ಆಕಳು, ಎಮ್ಮೆ, ಮೇಕೆಗಳು ಡಸ್ಟ್ ಬಿನ್​ಗಳಲ್ಲಿನ ಆಹಾರವನ್ನು ತಿನ್ನುತ್ತಿದ್ದು ಅದೇ ಡಸ್ಟ್ ಬಿನ್​ಗಳಲ್ಲಿ ಕೊರೊನಾ ವಾರಿಯರ್ಸ್ ಬಳಸಿ ಬೀಸಾಕಿರೋ ಹ್ಯಾಂಡ್ ಗ್ಲೌಸ್, ಮಾಸ್ಕ್ ಗಳಿರೋದ್ರಿಂದ್ರ ಜನರು ಆತಂಕಗೊಂಡಿದ್ದಾರೆ.

ಕೊರೊನಾ ಪ್ರಾಣಿಗಳಿಗೆ ತಗುಲುತ್ತೋ ಇಲ್ಲವೋ ಅನ್ನೋದರ ಬಗ್ಗೆ ಇನ್ನೂ ಖಚಿತ ಮಾಹಿತಿ ಲಭ್ಯವಾಗಿಲ್ಲ. ಆದರೆ ಹೀಗೆ ಆಹಾರವನ್ನು ತಿಂದು ಮನೆಗೆ ಬರೋ ಜಾನುವಾರುಗಳಿಗೆ ಸೋಂಕು ಮಾತ್ರ ಹರಡೋದು ನಿಶ್ಚಿತ. ನೇರವಾಗಿ ಮನೆಗೆ ಬರೋ ಜಾನುವಾರುಗಳ ಜೊತೆಯೇ ಅವುಗಳ ಮಾಲೀಕರಿಗೆ ಸಂಪರ್ಕವಿರುತ್ತೆ. ಹೀಗಾಗಿ ಸೋಂಕು ತಗುಲುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಹೀಗಾಗಿ ಈ ಸಮಸ್ಯೆ ಧಾರವಾಡ ಜನರನ್ನು ಆತಂಕಕ್ಕೆ ತಳ್ಳಿದೆ. ಇದು ಕೇವಲ ರೈಲ್ವೆ ನಿಲ್ದಾಣದ್ದಷ್ಟೇ ಸಮಸ್ಯೆಯಲ್ಲ. ಅನೇಕ ಕಡೆಗಳಲ್ಲಿ ಈ ಸಮಸ್ಯೆ ಕಂಡು ಬರುತ್ತಿದೆ. ಒಟ್ಟಿನಲ್ಲಿ ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸೋದು ಎಷ್ಟು ಮುಖ್ಯವೋ ಎಲ್ಲೆಂದರಲ್ಲೇ ಇವುಗಳನ್ನು ಬೀಸಾಕೋ ಜನರು ಕೂಡ ಸಾಮಾಜಿಕ ಜವಾಬ್ದಾರಿ ನಿಭಾಯಿಸೋದು ಅಷ್ಟೇ ಮುಖ್ಯ.

ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ