Facebook Fraud | ಫೇಸ್​ಬುಕ್​ನಲ್ಲಿ ಪರಿಚಯವಾದ ಯುವಕನಿಂದ ವಿವಾಹಿತೆಗೆ ವಂಚನೆ.. ಚಿಂತಾಮಣಿಯ ಫೈನಾನ್ಸಿಯರ್ ವಿರುದ್ಧ ದೂರು

Facebook Fraud | ಫೇಸ್​ಬುಕ್​ನಲ್ಲಿ ಪರಿಚಯವಾದ ಸತೀಶ್ ಪ್ರೀತಿ, ಪ್ರೇಮ, ಕಾಮ ಎಂದು ವಿವಾಹಿತ ಮಹಿಳೆಯ ತಲೆ ಕೆಡಿಸಿದ್ದಾನೆ. ಮಹಿಳೆಯ ಅತ್ಯಾಚಾರದ ವಿಡಿಯೋವನ್ನು ಫೇಸ್​ಬುಕ್​ನಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ನೊಂದ ಮಹಿಳೆ ಆರೋಪಿಸಿದ್ದಾರೆ.

Facebook Fraud | ಫೇಸ್​ಬುಕ್​ನಲ್ಲಿ ಪರಿಚಯವಾದ ಯುವಕನಿಂದ ವಿವಾಹಿತೆಗೆ ವಂಚನೆ.. ಚಿಂತಾಮಣಿಯ ಫೈನಾನ್ಸಿಯರ್ ವಿರುದ್ಧ ದೂರು
ನೊಂದ ಮಹಿಳೆ (ಎಡ) ಸತೀಶ್ (ಬಲ)
ಆಯೇಷಾ ಬಾನು Edited By: ಸಾಧು ಶ್ರೀನಾಥ್​

Updated on: Feb 19, 2021 | 10:53 AM

ಚಿಕ್ಕಬಳ್ಳಾಪುರ: ಫೇಸ್​ಬುಕ್​ನಲ್ಲಿ ಪರಿಚಯವಾದ ಯುವಕನಿಂದ ಮಹಿಳೆ ವಂಚನೆಗೆ ಒಳಗಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಫೇಸ್​ಬುಕ್ ಮೂಲಕ ಪರಿಚಯವಾದ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿಯ ಇಡ್ಲಿಪಾಳ್ಯ ನಿವಾಸಿ ಸತೀಶ್, ಮಂಡ್ಯ ಮೂಲದ ವಿವಾಹಿತೆಗೆ ವಂಚನೆ ಮಾಡಿದ್ದಾನೆ ಎಂದು ಆರೋಪಿಸಿ ಮಹಿಳೆ ಚಿಂತಾಮಣಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ.

ಫೇಸ್​ಬುಕ್​ನಲ್ಲಿ ಪರಿಚಯವಾದ ಸತೀಶ್ ಪ್ರೀತಿ, ಪ್ರೇಮ, ಕಾಮ ಎಂದು ವಿವಾಹಿತ ಮಹಿಳೆಯ ತಲೆ ಕೆಡಿಸಿದ್ದಾನೆ. ಮಹಿಳೆಯ ಅತ್ಯಾಚಾರದ ವಿಡಿಯೋವನ್ನು ಫೇಸ್​ಬುಕ್​ನಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ನೊಂದ ಮಹಿಳೆ ಆರೋಪಿಸಿದ್ದಾರೆ. ಮಹಿಳೆಯ ಸೈಟ್ ಹಾಗೂ ಮನೆ ಮಾರಿಸಿ 15 ಲಕ್ಷ ರೂಪಾಯಿ ಪಡೆದು ವಂಚನೆ ಮಾಡಿದ್ದಾನೆ ಎಂದು ಹೇಳಲಾಗಿದೆ. ಸದ್ಯ ಈ ಬಗ್ಗೆ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ. ಸತೀಶ್ ಚಿಂತಾಮಣಿಯಲ್ಲಿ ಫೈನಾನ್ಸಿಯರ್ ಆಗಿದ್ದಾನೆ. ಹಾಗೂ ಮಹಿಳೆ ಬ್ಯೂಟಿ ಪಾರ್ಲರ್​ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ನಕಲಿ ಫೇಸ್​ಬುಕ್ ಖಾತೆ: ಹುಡುಗಿ ಹೆಸರಿನಲ್ಲಿ ಹಣ ಪಡೆದು ವಂಚನೆ

ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Loading...
Unable to load recommendations.
Follow Us