
ಚಿಕ್ಕಬಳ್ಳಾಪುರ: ಶೋಕಿ ಜೀವನ ನಡೆಸಲು ನಾಲ್ಕು ತಿಂಗಳ ಹೆಣ್ಣು ಮಗುವನ್ನು ತಂದೆ ಮಾರಿರುವ ಘಟನೆ ಚಿಂತಾಮಣಿ ತಾಲೂಕಿನ ತಿನಕಲ್ಲು ಗ್ರಾಮದಲ್ಲಿ ನಡೆದಿದೆ.
ಮನೆಯಲ್ಲಿ ಬಡತನವಿದ್ದ ಕಾರಣ ನರಸಿಂಹಮೂರ್ತಿ ಹಾಗೂ ಮಹಾಲಕ್ಷ್ಮಿ ದಂಪತಿಗೆ ಸೇರಿದ್ದ 4 ತಿಂಗಳ ಹೆಣ್ಣು ಮಗುವನ್ನು ಮಳಮಾಚನಹಳ್ಳಿಯ ದಂಪತಿಗೆ ಮಾರಿದ್ದಾರೆ. ಮಗು ಮಾರಿದ ಹಣದಲ್ಲಿ ತಂದೆ ನರಸಿಂಹಮೂರ್ತಿ ಶೋಕಿ ಜೀವನ ನಡೆಸಲು ಮುಂದಾಗಿದ್ದ.
ಈತನ ಶೋಕಿ ನೋಡಿ ಅನುಮಾನಗೊಂಡ ಗ್ರಾಮಸ್ಥರು ಮಾಹಿತಿ ಸಂಗ್ರಹಿಸಿ ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಅಧಿಕಾರಿಗಳು ಮಗುವನ್ನು ರಕ್ಷಿಸಿ ಶಿಡ್ಲಘಟ್ಟ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.
Published On - 9:23 am, Sun, 30 August 20