ಕುಡಿದ ಮತ್ತಿನಲ್ಲಿ ಮರದ ತುಂಡುಗಳಿಂದ ಮಾರಾಮಾರಿ, ಒಬ್ಬ ಸಾವು
ಚಿಕ್ಕಬಳ್ಳಾಪುರ: ಕುಡಿದ ಮತ್ತಿನಲ್ಲಿ ಮರದ ತುಂಡುಗಳಿಂದ ಸ್ನೇಹಿತರು ಮತ್ತು ಮಹಿಳೆ ಹೊಡೆದಾಡಿಕೊಂಡು ಒಬ್ಬ ಮೃತಪಟ್ಟಿರುವ ಘಟನೆ ಚಿಂತಾಮಣಿ ನಗರದಲ್ಲಿ ನಡೆದಿದೆ. ಪರಸ್ಪರ ನಡೆದ ಮಾರಾಮಾರಿಯಲ್ಲಿ ನಟರಾಜ್(40) ದಾರುಣವಾಗಿ ಹತ್ಯೆಗೀಡಾಗಿದ್ದಾನೆ. ಮಾರಾಮಾರಿಯಲ್ಲಿ ಮತ್ತಿಬ್ಬರ ಸ್ಥಿತಿ ಗಂಭೀರವಾಗಿದ್ದು, ನಟರಾಜ್ ಪತ್ನಿ ಮುನಿಲಕ್ಷ್ಮಮ್ಮ ಹಾಗೂ ರಾಮಾಂಜಿ ಎಂಬುವರು ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಸ್ಥಳಕ್ಕೆ ಪ್ರಭಾರಿ ಎಸ್ಪಿ ಕಾರ್ತಿಕ್ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಪ್ರಕರಣ ಸಂಬಂಧ ಆರೋಪಿ ಪ್ರಶಾಂತ್ನನ್ನು ಪೊಲೀಸರು […]

ಚಿಕ್ಕಬಳ್ಳಾಪುರ: ಕುಡಿದ ಮತ್ತಿನಲ್ಲಿ ಮರದ ತುಂಡುಗಳಿಂದ ಸ್ನೇಹಿತರು ಮತ್ತು ಮಹಿಳೆ ಹೊಡೆದಾಡಿಕೊಂಡು ಒಬ್ಬ ಮೃತಪಟ್ಟಿರುವ ಘಟನೆ ಚಿಂತಾಮಣಿ ನಗರದಲ್ಲಿ ನಡೆದಿದೆ. ಪರಸ್ಪರ ನಡೆದ ಮಾರಾಮಾರಿಯಲ್ಲಿ ನಟರಾಜ್(40) ದಾರುಣವಾಗಿ ಹತ್ಯೆಗೀಡಾಗಿದ್ದಾನೆ.
ಮಾರಾಮಾರಿಯಲ್ಲಿ ಮತ್ತಿಬ್ಬರ ಸ್ಥಿತಿ ಗಂಭೀರವಾಗಿದ್ದು, ನಟರಾಜ್ ಪತ್ನಿ ಮುನಿಲಕ್ಷ್ಮಮ್ಮ ಹಾಗೂ ರಾಮಾಂಜಿ ಎಂಬುವರು ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಸ್ಥಳಕ್ಕೆ ಪ್ರಭಾರಿ ಎಸ್ಪಿ ಕಾರ್ತಿಕ್ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಪ್ರಕರಣ ಸಂಬಂಧ ಆರೋಪಿ ಪ್ರಶಾಂತ್ನನ್ನು ಪೊಲೀಸರು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.




