ಕೆಸರು ಗದ್ದೆಯಲ್ಲಿ ಮುಗ್ಗರಿಸಿ ಬಿದ್ರೂ ಗುರಿ ಮುಟ್ಟಿದ ಸಚಿವ ಸಿ.ಟಿ.ರವಿ
ಚಿಕ್ಕಮಗಳೂರು: ಜಿಲ್ಲಾ ಉತ್ಸವ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಕೆಸರುಗದ್ದೆ ಓಟದಲ್ಲಿ ಓಡುವಾಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಅವರು ಕೆಸರಿನಲ್ಲಿ ಮುಗ್ಗರಿಸಿ ಬಿದ್ದಿದ್ದಾರೆ. ತಾಲೂಕಿನ ನಲ್ಲೂರು ಗೇಟ್ನಲ್ಲಿ ಕೆಸರುಗದ್ದೆ ಓಟಕ್ಕೆ ಚಾಲನೆ ನೀಡಿ, ಓಟದಲ್ಲಿ ಸಚಿವ ಸಿ.ಟಿ.ರವಿ ಭಾಗವಹಿಸಿದ್ದರು. ಕೆಸರುಗದ್ದೆಯಲ್ಲಿ ಓಡುವಾಗ ಕೆಸರಿನಲ್ಲಿ ಸಚಿವರು ಬಿದ್ದಿದ್ದಾರೆ. ಆದ್ರೂ ಸಹ ಸಚಿವರು ಕೊನೆಗೆ ಗುರಿ ಮುಟ್ಟಿದ್ದಾರೆ. ಇದಕ್ಕೂ ಮುನ್ನ ಚಿಕ್ಕಮಗಳೂರು ಜಿಲ್ಲಾ ಉತ್ಸವದ ಪ್ರಯುಕ್ತ ಉತ್ಸವಥಾನ್ ನಡಿಗೆ ಆಯೋಜಿಸಲಾಗಿತ್ತು. ನಗರದ 10 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ನಡೆದ ನಡಿಗೆಯಲ್ಲಿ ಸಿ.ಟಿ.ರವಿ ಭಾಗವಹಿಸಿದ್ದರು. […]
ಚಿಕ್ಕಮಗಳೂರು: ಜಿಲ್ಲಾ ಉತ್ಸವ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಕೆಸರುಗದ್ದೆ ಓಟದಲ್ಲಿ ಓಡುವಾಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಅವರು ಕೆಸರಿನಲ್ಲಿ ಮುಗ್ಗರಿಸಿ ಬಿದ್ದಿದ್ದಾರೆ. ತಾಲೂಕಿನ ನಲ್ಲೂರು ಗೇಟ್ನಲ್ಲಿ ಕೆಸರುಗದ್ದೆ ಓಟಕ್ಕೆ ಚಾಲನೆ ನೀಡಿ, ಓಟದಲ್ಲಿ ಸಚಿವ ಸಿ.ಟಿ.ರವಿ ಭಾಗವಹಿಸಿದ್ದರು. ಕೆಸರುಗದ್ದೆಯಲ್ಲಿ ಓಡುವಾಗ ಕೆಸರಿನಲ್ಲಿ ಸಚಿವರು ಬಿದ್ದಿದ್ದಾರೆ. ಆದ್ರೂ ಸಹ ಸಚಿವರು ಕೊನೆಗೆ ಗುರಿ ಮುಟ್ಟಿದ್ದಾರೆ.
ಇದಕ್ಕೂ ಮುನ್ನ ಚಿಕ್ಕಮಗಳೂರು ಜಿಲ್ಲಾ ಉತ್ಸವದ ಪ್ರಯುಕ್ತ ಉತ್ಸವಥಾನ್ ನಡಿಗೆ ಆಯೋಜಿಸಲಾಗಿತ್ತು. ನಗರದ 10 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ನಡೆದ ನಡಿಗೆಯಲ್ಲಿ ಸಿ.ಟಿ.ರವಿ ಭಾಗವಹಿಸಿದ್ದರು. ಸಚಿವ ಸಿ.ಟಿ.ರವಿಗೆ ಜಿಲ್ಲಾಧಿಕಾರಿ ಗೌತಮ್ ಬಗಾದಿ ಸೇರಿದಂತೆ ಹಲವರ ಸಾಥ್ ನೀಡಿದ್ದರು.