ದ್ವೇಷ ಭಾಷಣ: ಮಹಾರಾಷ್ಟ್ರದ ಮಾಜಿ ಶಾಸಕ ವಾರಿಷ್ ಪಠಾಣ್ ವಿರುದ್ಧ ಎಫ್​ಐಆರ್

ಕಲಬುರಗಿ: ಮಹಾರಾಷ್ಟ್ರದ ಮಾಜಿ ಶಾಸಕ ವಾರಿಷ್ ಪಠಾಣ್ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಡಿ ವಕೀಲೆ ಶ್ವೇತಾ ಅನ್ನೋರಿಂದ ನಿನ್ನೆ ಸಂಜೆ ಕಲಬುರಗಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ. ಇದೇ ತಿಂಗಳು 15 ರಂದು ಎಐಎಂಎಂ ಪಕ್ಷದ ವತಿಯಿಂದ ಕಲಬುರಗಿ ನಗರದ ಪೀರ್ ಬಂಗಾಲಿ ಮೈದಾನದಲ್ಲಿ ನಡೆದ ಸಭೆಯಲ್ಲಿ ವಾರಿಷ್ ಪಠಾಣ್ ಭಾಷಣ ಮಾಡಿದ್ದರು. ಈ ವೇಳೆ 15 ಕೋಟಿ ಮುಸ್ಲಿಮರು 100 ಕೋಟಿ ಹಿಂದೂಗಳಲ್ಲಿ ಪ್ರಾಬಲ್ಯ ಸಾಧಿಸಬಹುದು. ಬರೀ ಮಹಿಳೆಯರು ಮುಂದೆ ಬಂದಿದ್ದಕ್ಕೆ ನಿಮ್ಮ […]

ದ್ವೇಷ ಭಾಷಣ: ಮಹಾರಾಷ್ಟ್ರದ ಮಾಜಿ ಶಾಸಕ ವಾರಿಷ್ ಪಠಾಣ್ ವಿರುದ್ಧ ಎಫ್​ಐಆರ್
ಸಾಧು ಶ್ರೀನಾಥ್​

Updated on: Feb 22, 2020 | 9:39 AM

ಕಲಬುರಗಿ: ಮಹಾರಾಷ್ಟ್ರದ ಮಾಜಿ ಶಾಸಕ ವಾರಿಷ್ ಪಠಾಣ್ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಡಿ ವಕೀಲೆ ಶ್ವೇತಾ ಅನ್ನೋರಿಂದ ನಿನ್ನೆ ಸಂಜೆ ಕಲಬುರಗಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದೇ ತಿಂಗಳು 15 ರಂದು ಎಐಎಂಎಂ ಪಕ್ಷದ ವತಿಯಿಂದ ಕಲಬುರಗಿ ನಗರದ ಪೀರ್ ಬಂಗಾಲಿ ಮೈದಾನದಲ್ಲಿ ನಡೆದ ಸಭೆಯಲ್ಲಿ ವಾರಿಷ್ ಪಠಾಣ್ ಭಾಷಣ ಮಾಡಿದ್ದರು. ಈ ವೇಳೆ 15 ಕೋಟಿ ಮುಸ್ಲಿಮರು 100 ಕೋಟಿ ಹಿಂದೂಗಳಲ್ಲಿ ಪ್ರಾಬಲ್ಯ ಸಾಧಿಸಬಹುದು. ಬರೀ ಮಹಿಳೆಯರು ಮುಂದೆ ಬಂದಿದ್ದಕ್ಕೆ ನಿಮ್ಮ ಬೆವರು ಹರಿಯುತ್ತಿದೆ, ಇನ್ನು ಅವರ ಜೊತೆ ನಾವು ಬಂದ್ರು ಏನಾಗುತ್ತೆ ನೋಡಿ ಅಂತ ಪ್ರಚೋದನಕಾರಿ ಭಾಷಣ ಮಾಡಿದ್ದರು.

ಸಿಎಎ ವಿರೋಧಿ ಕಾರ್ಯಕ್ರಮದಲ್ಲಿ ಈ ರೀತಿಯ ಹೇಳಿಕೆ ನೀಡಿದ್ದರಿಂದ ಇದನ್ನು ಖಂಡಿಸಿ ವಕೀಲೆ ಶ್ವೇತಾ ವಾರಿಷ್ ಪಠಾಣ್ ವಿರುದ್ಧ ದೂರು ದಾಖಲು ಮಾಡಿದ್ದಾರೆ.

ಪೊಲೀಸ್ ಆಯುಕ್ತರಿಗೆ ಗೃಹಸಚಿವರಿಂದ ತರಾಟೆ:
ವಾರಿಸ್ ಪಠಾಣ್ ವಿರುದ್ಧ ಯಾವುದೇ ಕ್ರಮ ಜರುಗಿಸದ ಹಿನ್ನೆಲೆ ದೂರವಾಣಿ ಮೂಲಕ ಕಲ್ಬುರ್ಗಿ ನಗರ ಪೊಲೀಸ್ ಆಯುಕ್ತರಿಗೆ ಗೃಹಸಚಿವ ಬಸವರಾಜ ಬೊಮ್ಮಾಯಿ ತರಾಟೆಗೆ ತೆಗೆದುಕೊಂಡಿದ್ದಾರೆ. ಫೆಬ್ರವರಿ 15ರಂದು ಕಲ್ಬುರ್ಗಿ ನಗರದಲ್ಲಿ ಸಿಎಎ ವಿರುದ್ಧದ ಪ್ರತಿಭಟನಾ ಸಭೆಯಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ. ಆದ್ರೆ ನೀವು ಇನ್ನೂ ಯಾಕೆ ಕ್ರಮ ತೆಗೆದುಕೊಂಡಿಲ್ಲ ಎಂದು ಪ್ರಶ್ನಿಸಿದ್ದಾರೆ.

ಇದಕ್ಕೆ ನಾನು ರಜೆಯಲ್ಲಿದ್ದೆ ಎಂದು ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ್ ಗೃಹಸಚಿವರಿಗೆ ಉತ್ತರಿಸಿದ್ದಾರೆ. ನೀವು ರಜೆಯಲ್ಲಿದ್ದರೆ ಇಲಾಖೆ ನಿದ್ದೆ ಮಾಡುತ್ತಿದ್ಯಾ? ಕೂಡಲೇ ಸೂಕ್ತ ಕಾನೂನು ಕ್ರಮ ಜರುಗಿಸಿ ವರದಿ ನೀಡಿ ಎಂದು ಬೊಮ್ಮಾಯಿ ಆದೇಶ ನೀಡಿದ್ದಾರೆ. ಮಹಾರಾಷ್ಟ್ರದ ಎಐಎಐಎಂ ಪಕ್ಷದ ಮಾಜಿ ಶಾಸಕ ವಾರಿಸ್ ಪಠಾಣ್ ಪ್ರಚೋದನಾಕಾರಿ ಭಾಷಣ ನಡೆದು ಐದು ದಿನಗಳಾದರೂ ಪೊಲೀಸರ ನಿರ್ಲಕ್ಷ್ಯಕ್ಕೆ ಗೃಹಸಚಿವರು ಗರಂ ಆಗಿದ್ರು.

Published On - 7:28 am, Sat, 22 February 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us