
ಬೆಂಗಳೂರು: ನಾಡಿನ ಜನತೆಗೆ ಅನಾನುಕೂಲವಾದ್ರೆ ಕಾಯ್ದೆಗೆ ಬೆಂಬಲವಿಲ್ಲ ಎಂದು ಪರೋಕ್ಷವಾಗಿ ಗೋಹತ್ಯೆ ನಿಷೇಧಕ್ಕೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರೋಧ ವ್ಯಕ್ತಪಡಿಸಿದ್ದಾರೆ. ಜೆಡಿಎಲ್‌ಪಿ ಸಭೆಗೆ ಆಗಮಿಸಿದ್ದ ವೇಳೆ ಕುಮಾರಸ್ವಾಮಿ ಈ ಕುರಿತು ಮಾತನಾಡಿದ್ದಾರೆ.
ಜೊತೆಗೆ, ಸಭಾಪತಿ ಸ್ಥಾನದಲ್ಲಿ ಮುಂದುವರಿಯಲು ಪ್ರತಾಪ್ಚಂದ್ರ ಶೆಟ್ಟಿ ಇಷ್ಟವಿಲ್ಲವೆಂದಿದ್ದಾರೆ. ವೈಯಕ್ತಿಕವಾಗಿ ಇಷ್ಟವಿಲ್ಲವೆಂದು ಸಭಾಪತಿರವರೇ ಹೇಳಿದ್ದಾರೆ. ಆದ್ರೆ ಕಾಂಗ್ರೆಸ್‌ನ ಒಂದು ಗುಂಪಿನ ನಾಯಕರು ಬಿಡುತ್ತಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.
JDS ಬಣ್ಣ ಬಯಲು ಮಾಡಲು ಸಿದ್ದರಾಮಯ್ಯ ಹೊರಟಿದ್ದಾರೆ. ಹೀಗಾಗಿ ಸಭಾಪತಿ ರಾಜೀನಾಮೆ ವಿಳಂಬ ಮಾಡಿಸುತ್ತಿದ್ದಾರೆ. ಸಿದ್ದರಾಮಯ್ಯ ಜೆಡಿಎಸ್ ಪಕ್ಷವೇ ಇಲ್ಲ ಅಂತಾರೆ. ದಿನ ಬೆಳಗಾದ್ರೆ ಜೆಡಿಎಸ್ ಬಗ್ಗೆಯೇ ಅವರು ಮಾತನಾಡುತ್ತಾರೆ. ಕಾಂಗ್ರೆಸ್‌ಗೆ ಬಹುಮತ ಇಲ್ಲದಿದ್ರೂ ಮುಂದುವರಿಯುತ್ತಿದೆ. ನಾಚಿಕೆ ಬಿಟ್ಟು ಸಭಾಪತಿ ಸ್ಥಾನದಲ್ಲಿ ಮುಂದುವರಿಯುತ್ತಿದೆ ಎಂದು ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಗರಂ ಆದರು.
ಕಾಂಗ್ರೆಸ್ ನಡವಳಿಕೆಯಿಂದ ಸ್ನೇಹಿತನನ್ನು ಕಳೆದುಕೊಂಡಿರುವೆ. ಮತ್ತೊಬ್ಬರನ್ನೂ ಕಳೆದುಕೊಳ್ಳಲು ನನಗೆ ಇಷ್ಟವಿಲ್ಲ. ಜೆಡಿಎಸ್‌ಗೆ ಅಸ್ತಿತ್ವದ ಅನಿವಾರ್ಯತೆ ಇದೆ. ಕೊನೆವರೆಗೂ ಜೆಡಿಎಸ್ ಇರಲಿದೆ ಎಂದ ಮಾಜಿ ಸಿಎಂ HDK ಹೇಳಿದರು. ಹಾಗಾಗಿ, ವಿಷಯಾಧಾರಿತವಾಗಿ ಸಭಾಪತಿ ಸ್ಥಾನಕ್ಕೆ ಬೆಂಬಲ ನೀಡಿದ್ದೇವೆ ಎಂದು ಕುಮಾರಸ್ವಾಮಿ ಹೇಳಿದರು.
Published On - 8:38 pm, Tue, 2 February 21