ಕಿವಿ ಚೀನಾದ ಹಣ್ಣು ಎಂದು ಮೂಗುಮುರಿಯಬೇಡಿ; ನಿಯಮಿತವಾಗಿ ಸೇವಿಸಿ ಆರೋಗ್ಯದಿಂದಿರಿ
ಚರ್ಮದ ಆರೋಗ್ಯದಲ್ಲೂ ಕಿವಿ ಹಣ್ಣು ತುಂಬ ಮುಖ್ಯಪಾತ್ರ ವಹಿಸುತ್ತದೆ. ಅದರಲ್ಲೂ ಚರ್ಮ ಸುಕ್ಕುಗಟ್ಟುವುದನ್ನು ತಡೆಯುತ್ತದೆ. ಚರ್ಮದ ಆರೋಗ್ಯವನ್ನು ಉತ್ತಮಗೊಳಿಸುವ ಜತೆಗೆ, ಜೋತುಬೀಳುವುದನ್ನು ನಿಯಂತ್ರಿಸುತ್ತದೆ.

ಕಿವಿ ಹಣ್ಣು ದುಬಾರಿಯಾದರೂ ಉಪಯೋಗಗಳು ಹಲವು. ಸ್ವಲ್ಪ ಸಿಹಿ, ಹುಳಿ ಅಂಶಗಳನ್ನು ಹೊಂದಿದ್ದು, ತಿನ್ನಲು ರುಚಿಯೂ ಹೌದು. ಚೀನಾ ಮೂಲದ ಈ ಹಣ್ಣಿನಿಂದ ಇರುವ ವೈದ್ಯಕೀಯ ಪ್ರಯೋಜನಗಳು ಒಂದೆರಡಲ್ಲ. ಸ್ಮೂತಿ, ಜ್ಯೂಸ್ಗಳಿಗೂ ಹೇಳಿ ಮಾಡಿಸಿದ ಹಣ್ಣು ಇದು. ನಿಮ್ಮ ದಿನದ ಡಯೆಟ್ನಲ್ಲಿ ನಿಯಮಿತವಾಗಿ ಕಿವಿ ಹಣ್ಣಿನ ಬಳಕೆ ಮಾಡಿ ಎನ್ನುತ್ತಾರೆ ಆಹಾರ ತಜ್ಞರು.
ಕಿವಿ ಹಣ್ಣು ಕಡಿಮೆ ಕ್ಯಾಲರಿ ಹೊಂದಿದೆ. ಒಂದು ಹಣ್ಣು 61 ಕ್ಯಾಲೋರಿ ಹೊಂದಿರುತ್ತದೆ. 15 ಗ್ರಾಂ ಕಾರ್ಬೋಹೈಡ್ರೇಟ್ಸ್ ಇರುತ್ತದೆ ಹಾಗೇ 9 ಗ್ರಾಂ.ಗಳಷ್ಟು ಸಕ್ಕರೆ ಅಂಶವಿದೆ. ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮವನ್ನು ಬೀರುತ್ತದೆ.
ಅಸ್ತಮಾಕ್ಕೆ ಒಳ್ಳೆಯ ಚಿಕಿತ್ಸೆ ಹೊಸ ಅಧ್ಯಯನವೊಂದರ ಪ್ರಕಾರ ಕಿವಿ ಹಣ್ಣು ಅಸ್ತಮಾ ರೋಗಿಗಳಿಗೆ ಒಳ್ಳೆಯದು. ಇದು ಅಸ್ತಮಾ ವಿರುದ್ಧ ಹೋರಾಡಬಲ್ಲದು. ಕಿವಿ ಹಣ್ಣಿನಲ್ಲಿ ವಿಟಮಿನ್ ಸಿ ಸಂಪದ್ಭರಿತವಾಗಿದ್ದು, ಉತ್ಕರ್ಷಣ ನಿರೋಧಕಗಳು (Antioxidant) ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಇದರಿಂದ ಅಸ್ತಮಾ ಚಿಕಿತ್ಸೆಗೆ ಅತ್ಯುತ್ತಮ ಹಣ್ಣಾಗಿದೆ.
ಜೀರ್ಣಕ್ರಿಯೆಗೆ ಸಹಕಾರಿ ಕಿವಿ ಹಣ್ಣಿನಲ್ಲಿ ನಾರಿನ ಅಂಶಗಳು ಹೆಚ್ಚಾಗಿ ಇರುತ್ತದೆ. ಈ ಕಾರಣಕ್ಕೆ ಕರುಳಿನ ಆರೋಗ್ಯಕ್ಕೆ ತುಂಬ ಒಳ್ಳೆಯದು. ಅಲ್ಲದೆ ಜೀರ್ಣಕ್ರಿಯೆ ಸುಗಮವಾಗಿ ಆಗಲು ಸಹಾಯ ಮಾಡುತ್ತವೆ. ಮಲಬದ್ಧತೆಗೂ ತೀಕ್ಷ್ಣ ಮದ್ದು ಇದು. ಆಕ್ಟಿನಿಡಿನ್ ಎಂಬ ಪ್ರೋಟಿಯೋಲೈಟಿಕ್ ಕಿಣ್ವವನ್ನು ಹೊಂದಿರುವುದರಿಂದ ಕರುಳಿನ ಚಲನೆ ಮತ್ತು ಪ್ರೋಟೀನ್ಗಳ ಜೀರ್ಣಕ್ರಿಯೆಯಲ್ಲಿ ಸಹಾಯ ಮಾಡುತ್ತದೆ.
ಇಮ್ಯೂನಿಟಿ ಹೆಚ್ಚಿಸುತ್ತದೆ ಕಿವಿ ಹಣ್ಣು ಅದ್ಭುತ ಇಮ್ಯೂನಿಟಿ ಬೂಸ್ಟರ್. ಫಂಗಲ್ ಹಾಗೂ ಸೂಕ್ಷ್ಮಾಣು ಜೀವಿಗಳ ವಿರುದ್ಧ ಹೋರಾಡುವ ಅಂಶಗಳನ್ನು ಈ ಹಣ್ಣು ಹೊಂದಿದೆ. ಕಿವಿ ಹಣ್ಣುಗಳನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಸೋಂಕು, ಇತರ ಕಾಯಿಲೆಗಳಿಂದ ಪಾರಾಗಬಹುದು ಎಂದು ಅಧ್ಯಯನವೊಂದು ತಿಳಿಸಿದೆ. ರೋಗನಿರೋಧಕ ಶಕ್ತಿ ಹೆಚ್ಚಿಸುವ ಜತೆಗೆ, ಶೀತ, ಜ್ವರ, ಉಸಿರಾಟದ ಸಮಸ್ಯೆಯನ್ನೂ ನಿಯಂತ್ರಿಸುತ್ತದೆ.
ದೃಷ್ಟಿಯನ್ನು ಸುಧಾರಿಸುತ್ತದೆ ಝೀಕ್ಸಾಂಥಿನ್ ಮತ್ತು ಲ್ಯೂಟಿನ್ ಅಂಶಗಳನ್ನು ಹೇರಳವಾಗಿ ಹೊಂದಿರುವ ಕಿವಿ ಕಣ್ಣಿನ ಆರೋಗ್ಯಕ್ಕೆ ತುಂಬ ಒಳ್ಳೆಯದು. ದೃಷ್ಟಿಯಲ್ಲಿ ದೋಷವಿದ್ದವರು ಇದನ್ನು ತಿನ್ನಿ ಎಂದು ತಜ್ಞರು ಸಲಹೆ ನೀಡುತ್ತಾರೆ. ಕಣ್ಣಿನ ಆರೋಗ್ಯಕ್ಕೆ ಅಗತ್ಯ ವಿಟಮಿನ್ನ್ನು ಇದು ಒದಗಿಸುತ್ತದೆ.
ಚರ್ಮಕ್ಕೆ ಹೊಳಪು ನೀಡುತ್ತದೆ ಚರ್ಮದ ಆರೋಗ್ಯದಲ್ಲೂ ಕಿವಿ ಹಣ್ಣು ತುಂಬ ಮುಖ್ಯಪಾತ್ರ ವಹಿಸುತ್ತದೆ. ಅದರಲ್ಲೂ ಚರ್ಮ ಸುಕ್ಕುಗಟ್ಟುವುದನ್ನು ತಡೆಯುತ್ತದೆ. ಚರ್ಮದ ಆರೋಗ್ಯವನ್ನು ಉತ್ತಮಗೊಳಿಸುವ ಜತೆಗೆ, ಜೋತುಬೀಳುವುದನ್ನು ನಿಯಂತ್ರಿಸುತ್ತದೆ. ಹಾಗೇ ಸ್ನಾಯುರಜ್ಜು ಮತ್ತು ಎಲುಬನ್ನೂ ಬಲಪಡಿಸುತ್ತದೆ.
ಸದಾ ಹೊಳೆಯುತ್ತಿರಲಿ ಮೈಕಾಂತಿ; ಚಳಿಗಾಲದಲ್ಲಿ ಚರ್ಮದ ಆರೈಕೆಗೆ ಇಲ್ಲಿವೆ ಸರಳ ಉಪಾಯಗಳು
Published On - 8:56 pm, Sun, 17 January 21