Ganesha Chaturthi 2021: ಗಣೇಶ ಹಬ್ಬದ ದಿನ ವಿನಾಯಕನಿಗೆ ಈ ಐದು ವಸ್ತು ಸಮರ್ಪಿಸಿ, ದೇವರ ಕೃಪಾಕಟಾಕ್ಷಕ್ಕೆ ಪಾತ್ರರಾಗಿ

ಈ 10 ದಿನಗಳಲ್ಲಿ ಗಣೇಶನಿಗೆ ದಿನವೂ ವಿಶಿಷ್ಟವಾಗಿ ಪೂಜಾ ಅರ್ಚನೆಗಳು ನೆರವೇರುತ್ತವೆ. ಹಾಗಾದರೆ ಹಬ್ಬದ ವೇಳೆ ಈ 5 ವಸ್ತುಗಳನ್ನು ಭಗವಂತನಿಗೆ ಸಮರ್ಪಿಸಿ, ನಿಮ್ಮ ಮನೋಕಾಮನೆಗಳನ್ನು ನೆರವೇರಿಸಿಕೊಳ್ಳಿ.

Ganesha Chaturthi 2021: ಗಣೇಶ ಹಬ್ಬದ ದಿನ ವಿನಾಯಕನಿಗೆ ಈ ಐದು ವಸ್ತು ಸಮರ್ಪಿಸಿ, ದೇವರ ಕೃಪಾಕಟಾಕ್ಷಕ್ಕೆ ಪಾತ್ರರಾಗಿ
ಗಣೇಶ ಹಬ್ಬದ ದಿನ ವಿನಾಯಕನಿಗೆ ಈ ಐದು ವಸ್ತು ಸಮರ್ಪಿಸಿ, ದೇವರ ಕೃಪಾಕಟಾಕ್ಷಕ್ಕೆ ಪಾತ್ರರಾಗಿ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Sep 09, 2021 | 9:06 AM

ನಾಳೆ ಶುಕ್ರವಾರವೇ ಗಣೇಶನ ಹಬ್ಬ. ಗಣೇಶ ಚತುರ್ಥಿಯ ದಿನ ವಿನಾಯಕನಿಗೆ ಈ ಪಂಚ ವಸ್ತುಗಳನ್ನು ಸಮರ್ಪಿಸಿ, ನಿಮ್ಮ ಇಷ್ಟಾರ್ಥ ಸಿದ್ಧಿ ನೆರವೇರಿಸಿಕೊಳ್ಳಿ. ಭಾದ್ರಪದ ಮಾಸದ ಶುಕ್ಲ ಪಕ್ಷ ಚತುರ್ಥಿ ದಿನದಂದು ಅಂದರೆ ಇದೇ ಸೆಪ್ಟೆಂಬರ್ 10 ರಂದು ಗಣೇಶನ ಹಬ್ಬವನ್ನು ಭಕ್ತಿಯಿಂದ ಆಚರಿಸಲಾಗುತ್ತದೆ. ವಿಶೇಷ ವಿಧಿ ವಿಧಾನದಿಂದ ಗಣೇಶ ಬಪ್ಪಾ ಮೋರಿಯಾ ಎಂದು ಗಜಾನನನಿಗೆ ಪೂಜೆ ಪುನಸ್ಕಾರ ಮಾಡುತ್ತೇವೆ. ವಿನಾಯಕನನ್ನುಸುಪ್ರಸನ್ನಗೊಳಿಸಲು ವಿಭಿನ್ನ ಪ್ರಕಾರದ ವಸ್ತು, ತಿಂಡಿ, ತಿನಿಸುಗಳನ್ನು ಇಟ್ಟು ನೈವೇದ್ಯ ಮಾಡುತ್ತಾರೆ. ಈ ಗಣೇಶನನ್ನು ಸೆಪ್ಟೆಂಬರ್ 19ರಂದು ಬೀಳ್ಕೊಡಲಾಗುವುದು. ಅಂದರೆ ಗಣೇಶನ ಹಬ್ಬವು ಸೆ. 19ರಂದು ಪರಿಸಮಾಪ್ತಿಯಾಗುತ್ತದೆ.

ಈ 10 ದಿನಗಳಲ್ಲಿ ಗಣೇಶನಿಗೆ ದಿನವೂ ವಿಶಿಷ್ಟವಾಗಿ ಪೂಜಾ ಅರ್ಚನೆಗಳು ನೆರವೇರುತ್ತವೆ. ಹಾಗಾದರೆ ಹಬ್ಬದ ವೇಳೆ ಈ 5 ವಸ್ತುಗಳನ್ನು ಭಗವಂತನಿಗೆ ಸಮರ್ಪಿಸಿ, ನಿಮ್ಮ ಮನೋಕಾಮನೆಗಳನ್ನು ನೆರವೇರಿಸಿಕೊಳ್ಳಿ.

1. ಮೋದಕ (Modak):

ganesha chaturthi 2021 Trivia offer these five things to lord ganesha 1

ಗಣೇಶನಿಗೆ ಮೋದಕ ಅಥವಾ ಮೊತೀಚೂರ್​ ಸಿಹಿ ತಿಂಡಿ ಅರ್ಪಿಸಬೇಕು

ಶ್ರೀ ಗಣೇಶನಿಗೆ ಮೋದಕ ಅಥವಾ ಮೊತೀಚೂರ್​ ಸಿಹಿ ತಿಂಡಿ ಅರ್ಪಿಸಬೇಕು. ಗಣೇಶನ ಪೂಜೆ ವೇಳೆ ಭಕ್ತರು ನಾನಾ ಸ್ವರೂಪ, ಸ್ವಾದಿಷ್ಟದ ಸಿಹಿ ತಿನಿಸನ್ನು ಅರ್ಪಿಸುತ್ತಾರೆ. ಆದರೆ ಮೋದಕ ಅಥವಾ ಕಡುಬು ಮೇಲೆ ಭಗವಂತನಿಗೆ ವಿಶೇಷ ಪ್ರೀತಿ. ಹಾಗಾಗಿ ಅದನ್ನೇ ಮೃಷ್ಟಾನ್ನವಾಗಿ ಸಮರ್ಪಸಿಬೇಕು.

2. ಗರಿಕೆ (Durva Grass):

ganesha chaturthi 2021 Trivia offer these five things to lord ganesha 3

ವಿಘ್ನ ವಿನಾಯಕನನ್ನು ಸಂಪ್ರೀತಗೊಳಿಸಲು ಸುಭಿಷ್ಟವಾಗಿ ದೊರಕುವ ಗರಿಕೆಯಿಂದ ಅರ್ಚನೆ ಮಾಡಬೇಕು

ಶ್ರೀ ವಿಘ್ನ ವಿನಾಯಕನನ್ನು ಸಂಪ್ರೀತಗೊಳಿಸಲು ಸುಭಿಷ್ಟವಾಗಿ ದೊರಕುವ ಗರಿಕೆಯಿಂದ ಅರ್ಚನೆ ಮಾಡಬೇಕು. ಆ ಗರಿಕೆಯಲ್ಲಿ 3 ಅಥವಾ 5 ಎಳೆಗಳು ಇರಬೇಕು. ಹೀಗೆ ಗರಿಕೆಯೊಂದಿಗೆ ಪೂಜೆ ಮಾಡುವುದರಿಂದ ಗಣಪತಿ ಬಪ್ಪಾ ಸಂಪ್ರೀತನಾಗಿ ನಿಮ್ಮ ಇಷ್ಟಾರ್ಥಗಳನ್ನುನೆರವೇರಿಸುತ್ತಾನೆ ಎಂಬುದು ಪ್ರತೀತಿ.

3. ಸಿಂಧೂರ (Vermilion)

ganesha chaturthi 2021 Trivia offer these five things to lord ganesha 2

ಗಣೇಶನಿಗೆ ಸಿಂಧೂರದಿಂದ ತಿಲಕವಿಡಬೇಕು. ಇದು ಶುಭದ ಸಂಕೇತ. ತಿಲಕವು ಸುಖ ಮತ್ತು ಸಮೃದ್ಧಿಯನ್ನು ತರುತ್ತದೆ.

ಭಗವಾನ್​ ಗಣೇಶನಿಗೆ ಸಿಂಧೂರದಿಂದ ತಿಲಕವಿಡಬೇಕು. ಇದು ಶುಭದ ಸಂಕೇತ. ತಿಲಕವು ಸುಖ ಮತ್ತು ಸಮೃದ್ಧಿಯನ್ನು ತರುತ್ತದೆ. ಗಣೇಶನಿಗೆ ಕುಂಕುಮದಿಂದ ತಿಲಕವಿಟ್ಟು, ಪೂಜೆ ಮಾಡುವ ಭಕ್ತರೂ ಸಹ ತಮ್ಮ ಹಣೆಗೆ ತಿಲಕವಿಟ್ಟುಕೊಂಡು ಪೂಜೆ ಮಾಡಿದರೆ ಭಗವಂತ ಹೆಚ್ಚು ಸಂಪ್ರೀತಿಗೊಂಡು, ಭಕ್ತಗಣದ ಇಷ್ಟಾರ್ಥಗಳನ್ನು ನೆರವೇರಿಸುತ್ತಾನೆ.

4. ಬಾಳೆಹಣ್ಣು (Banana):

ganesha chaturthi 2021 Trivia offer these five things to lord ganesha

ಪ್ರಥಮ ಪೂಜಕ ಗಣೇಶನಿಗೆ ಬಾಳೆಹಣ್ಣಿನಿಂದ ನೈವೇದ್ಯ ಮಾಡುವ ಸಂಪ್ರದಾಯವಿದೆ

ಪ್ರಥಮ ಪೂಜಕ ಗಣೇಶನಿಗೆ ಬಾಳೆಹಣ್ಣಿನಿಂದ ನೈವೇದ್ಯ ಮಾಡುವ ಸಂಪ್ರದಾಯವಿದೆ. ಹಾಗಾಗಿ ಗಣೇಶನಿಗೆ ಈ ಬಾರಿಯೂ ಬಾಳೆಹಣ್ಣುಗಳನ್ನಿಟ್ಟು ಪೂಜೆ ಮಾಡಿ.

5. ಹಯಗ್ರೀವ (ಪಾಯಸ) Kheer:

ganesha chaturthi 2021 Trivia offer these five things to lord ganesha 10

ಹಯಗ್ರೀವ ಅಥವಾ ಪಾಯಸ ಗಣಪ್ಪನಿಗೆ ಇಷ್ಟ ಮತ್ತು ಶ್ರೇಷ್ಠ. ಪೌರಾಣಿಕ ಕತೆಗಳ ಪ್ರಕಾರ ಶಿವನಿಗೆ ಪಾಯಸ ಅಂದ್ರೆ ತುಂಬಾ ಇಷ್ಟ.

ಹಯಗ್ರೀವ ಅಥವಾ ಪಾಯಸ ಗಣಪ್ಪನಿಗೆ ಇಷ್ಟ ಮತ್ತು ಶ್ರೇಷ್ಠ. ಪೌರಾಣಿಕ ಕತೆಗಳ ಪ್ರಕಾರ ಶಿವನಿಗೆ ಪಾಯಸ ಅಂದ್ರೆ ತುಂಬಾ ಇಷ್ಟ. ಪಾರ್ವತಿ ಪಾಯಸ ಮಾಡಿದಾಗಲೆಲ್ಲ ಬಾಲ ಗಣಪ ಸುಪ್ರಸನ್ನನಾಗುತ್ತಿದ್ದ. ಮತ್ತು ಇಷ್ಟಪಟ್ಟು ಪಾಯಸ ತಿನ್ನುತ್ತಿದ್ದ. ಹಾಗಾಗಿ ಶಿವನಿಗೆ ಪ್ರೀತಿ ಪಾತ್ರವಾದ ಪಾಯಸವನ್ನು ಗಣೇಶನಿಗೂ ಸಮರ್ಪಿಸುವುದರಿಂದ ಆತ ಸಂಪ್ರೀತನಾಗಿ ನಿಮ್ಮ ಕೃಪೆ ತೋರುತ್ತಾನೆ.

Also Read: ಶುಕ್ರವಾರ ಗಣೇಶ ಚತುರ್ಥಿ: ಸಕಲ ದೇವಗಣದಲ್ಲಿ ಶ್ರೇಷ್ಠನೂ, ಪ್ರಥಮ ಪೂಜ್ಯನೂ ಆದ ವಿಘ್ನನಿವಾರಕನ ಸೃಷ್ಟಿ ರಹಸ್ಯ ಇಲ್ಲಿದೆ

(ganesha chaturthi 2021 Trivia offer these five things to lord ganesha)

Published On - 5:34 am, Thu, 9 September 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ