AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ganesha Chaturti Special: ಇಡಗುಂಜಿ ಬಾಲ ಗಣಪತಿಯ ಆರಾಧನೆ ಮಹತ್ವ ನಿಮಗೆಷ್ಟು ಗೊತ್ತು?

ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಇಡಗುಂಜಿ ಗಣಪತಿ ದೇವಾಲಯದ ವಿಶೇಷ, ಹಿನ್ನೆಲೆಯನ್ನು ಇಲ್ಲಿ ವಿವರಿಸಲಾಗಿದೆ.

Ganesha Chaturti Special: ಇಡಗುಂಜಿ ಬಾಲ ಗಣಪತಿಯ ಆರಾಧನೆ ಮಹತ್ವ ನಿಮಗೆಷ್ಟು ಗೊತ್ತು?
ಕೃಪೆ: ಫೇಸ್​ಬುಕ್​
Follow us
TV9 Web
| Updated By: shruti hegde

Updated on:Sep 09, 2021 | 11:04 AM

“ಇಂಥವರು ನಿನ್ನ ಆಶೀರ್ವಾದ ಕೇಳಿಕೊಂಡು ಬಂದಿದ್ದಾರೆ. ನಿನ್ನಲ್ಲಿ ಅಪಾರ ನಂಬಿಕೆಯಿಂದ ಬಂದಿರುವವರ ಬೇಡಿಕೆಯನ್ನು ಈಡೇರಿಸಿ ಕಾಪಾಡು, ಹರಸು…” ಹೀಗೆ ಕನ್ನಡದಲ್ಲಿ ಪ್ರಾರ್ಥನೆ ಮಾಡಿದರು. ಈ ದೇವಾಲಯನ್ನು ಮೊದಲ ಬಾರಿಗೆ ನೋಡಿದಾಗ ನನಗೆ ಹದಿನೈದು ವರ್ಷ ವಯಸ್ಸು. ಆಗಿನ ಪ್ರಾರ್ಥನೆ ಮನದಲ್ಲಿ ಹಾಗೇ ಉಳಿದುಹೋಯಿತು. ಆ ಸ್ಥಳದಲ್ಲಿ ತುಂಬ ಸುಂದರವಾದ ಬಾಲ ಗಣಪತಿಯ ವಿಗ್ರಹ ಇದೆ. ಅದನ್ನು ಇಡಗುಂಜಿ ಅಂತಲೂ, ಅಲ್ಲಿನ ಗಣಪನನ್ನು ಇಡಗುಂಜಿ ಗಣಪತಿ ಅಂತಲೂ ಕರೆಯುತ್ತಾರೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಒಂದು ಸಣ್ಣ ಸ್ಥಳ ಇಡಗುಂಜಿ. ಆದರೆ ಬಸ್ಸು ಮತ್ತಿತರ ವ್ಯವಸ್ಥೆ ಬಹಳ ಚೆನ್ನಾಗಿದೆ. ಯಾವುದೇ ಅಡೆ-ತಡೆ ನಿವಾರಣೆ, ವಿಳಂಬ ನಿವಾರಣೆಗಾಗಿ ಈ ಇಡಗುಂಜಿ ಗಣಪತಿಗೆ ಹರಸಿಕೊಂಡರೆ ಎಲ್ಲವೂ ಸರಾಗವಾಗಿ ನೆರವೇರುತ್ತದೆ ಎಂಬುದು ನಂಬಿಕೆ. ವರ್ಷಕ್ಕೆ ಸಾಮಾನ್ಯ ಸಂದರ್ಭದಲ್ಲಿ (ಕೊರೊನಾ ಹೊರತಾದ ಕಾಲದಲ್ಲಿ) ಇಲ್ಲಿಗೆ ಬರುತ್ತಿದ್ದ ಹತ್ತು ಲಕ್ಷ ಸಂಖ್ಯೆಯಷ್ಟು ಭಕ್ತರ ಸಮೂಹವೇ ಈ ಮಾತಿಗೆ ನಿದರ್ಶನವಾಗಿತ್ತು.

ಅಂದಹಾಗೆ ಈ ದೇಗುಲಕ್ಕೆ 1500 ವರ್ಷಗಳ ಇತಿಹಾಸ ಇದೆ ಎನ್ನುತ್ತಾರೆ. ಕರ್ನಾಟಕದ ಕರಾವಳಿಯಲ್ಲಿ ಐದು ಪ್ರಸಿದ್ಧ ಗಣಪತಿ ದೇಗುಲಗಳಿವೆ. ಸಾಮಾನ್ಯವಾಗಿ ಪ್ರವಾಸಿಗರು, ಭಕ್ತಾದಿಗಳು ಈ ಎಲ್ಲ ಕಡೆಗೂ ಭೇಟಿ ನೀಡುತ್ತಾರೆ. ಅವು ಯಾವುದೆಂದರೆ, ಗೋಕರ್ಣ, ಇಡಗುಂಜಿ, ಹಟ್ಟಿಯಂಗಡಿ, ಗುಡ್ಡಟು ಆನೆಗುಡ್ಡೆ, ಶರವು, ಸೌತಡ್ಕ. ಇವೆಲ್ಲವೂ ಪ್ರಸಿದ್ಧವೇ ಆಗಿದ್ದರೂ ಇಡಗುಂಜಿ ಗಣಪತಿ ದೇವಸ್ಥಾನಕ್ಕೆ ಬರುವ ಭಕ್ತಾದಿಗಳ ಸಂಖ್ಯೆ ಹೆಚ್ಚು. ನಿಮಗೆ ಆರಂಭದಲ್ಲಿಯೇ ಹೇಳಿದಂತೆ, ಪ್ರವಾಸಕ್ಕೆ ತೆರಳಿದ್ದಾಗ ಉಳಿದ ದೇವಸ್ಥಾನಗಳನ್ನು ಸಹ ನೋಡಿದ ನೆನಪಿದೆ. ಇಡಗುಂಜಿ ಗಣಪತಿಗೆ ಬೆಳ್ಳಿ ಜನಿವಾರ ಸಮರ್ಪಣೆ ಮಾಡುವುದಾಗಿ ಹರಸಿಕೊಳ್ಳುವರು ಹೆಚ್ಚು.

ವಿಶೇಷ ಸೇವೆಗಳು ದೇವಾಲಯದ ಆವರಣದಲ್ಲಿ ಮಾಡುವ ಗಣಪತಿ ಹವನ, ರಂಗಪೂಜೆ, ತುಲಾಭಾರ ಮೊದಲಾದ ಸೇವೆಗಳು ನಿರಂತರವಾಗಿ ನಡೆಯುತ್ತಲೇ ಇರುತ್ತವೆ. ಇಲ್ಲಿನ ಮೂರ್ತಿ ಹೇಗಿದೆ ಅಂದರೆ, ದ್ವಿಭುಜ ಭಂಗಿಯಲ್ಲಿ ಇದೆ. ಆದರೆ ದೇವರ ವಿಗ್ರಹದ ಬಳಿ ಗಣಪನ ವಾಹನವಾದ ಇಲಿ (ಮೂಷಿಕ) ನೋಡುವುದಕ್ಕೆ ಸಿಗಲ್ಲ. ಬಲ ಕೈಯಲ್ಲಿ ಹೂವು ಹಾಗೂ ಎಡ ಕೈಯಲ್ಲಿ ವೋದಕವನ್ನು ಹಿಡಿದು, ಬಾಲ ಗಣಪ ಮುದ್ದಾಗಿ ನಿಂತಂತೆ ಇದೆ. ಈ ದೇವಸ್ಥಾನದ ವೆಬ್​ಸೈಟ್​ನಲ್ಲಿ ಇರುವ ಮಾಹಿತಿಯಂತೆ, ದೇವಾಲಯವು ಬೆಳಗ್ಗೆ 6ರಿಂದ ಮಧ್ಯಾಹ್ನ 1 ಹಾಗೂ ಮಧ್ಯಾಹ್ನ 3ರಿಂದ ರಾತ್ರಿ 8.30ರ ತನಕ ತೆರೆದಿರುತ್ತದೆ. ಬೆಳಗ್ಗೆ 7ಕ್ಕೆ ಬೆಳಗಿನ ಅಭಿಷೇಕ, ಬೆಳಗ್ಗೆ 11ಕ್ಕೆ ಮಹಾ ಅಭಿಷೇಕ ಹಾಗೂ ರಾತ್ರಿ 7ಕ್ಕೆ ಸಂಜೆಯ ಅಭಿಷೇಕ ಎಂದಿದೆ. ಇನ್ನು ಬೆಳಗ್ಗೆ ಪೂಜೆ 8ಕ್ಕೆ, ಮಹಾ ಪೂಜೆ ಮಧ್ಯಾಹ್ನ 12.30ಕ್ಕೆ ಹಾಗೂ ಸಂಜೆ ಪೂಜೆ ರಾತ್ರಿ 8ಕ್ಕೆ ಇರುತ್ತದೆ.

ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಮಧ್ಯಾಹ್ನ ಮಯೂರ ಪ್ರಸಾದ ಭೋಜನಾಲಯದಲ್ಲಿ ಊಟದ ವ್ಯವಸ್ಥೆ ಇದ್ದು, ಇಡಗುಂಜಿ ದೇವಸ್ಥಾನದಲ್ಲೂ ವಾಸ್ತವ್ಯಕ್ಕೆ ವ್ಯವಸ್ಥೆ ಇದೆ. ಇನ್ನು ಹತ್ತಿರದ ಹೊನ್ನಾವರ, ಕುಮಟಾ ಮತ್ತು ಭಟ್ಕಳದಲ್ಲೂ ಉಳಿದುಕೊಳ್ಳುವುದಕ್ಕೆ ವ್ಯವಸ್ಥೆ ಆಗುತ್ತದೆ. ಇಡಗುಂಜಿ ಸುತ್ತಮುತ್ತ ಮುರ್ಡೇಶ್ವರ, ಗೋಕರ್ಣ, ಅಪ್ಸರಕೊಂಡ, ಕಾಸರಕೋಡ್ ಬೀಚ್, ಶರಾವತಿ ನದಿ, ರಾಮ ತೀರ್ಥ, ಲಕ್ಷ್ಮಣ ತೀರ್ಥ ಸೇರಿದಂತೆ ಇತರ ಆಕರ್ಷಣೆ ಕೇಂದ್ರಗಳಿವೆ.

ಇನ್ನು ದೇವಾಲಯದಲ್ಲಿ ಕಲ್ಯಾಣ ಮಂಟಪ ಇದ್ದು, ಮದುವೆ ಮೊದಲಾದ ಕಾರ್ಯಕ್ರಮಗಳನ್ನು ಆಯೋಜಿಸುವುದಕ್ಕೆ ಅವಕಾಶ ಇದೆ. ಜ್ಯೋತಿಷ್ಯ ಕೇಳಬೇಕು ಅಂದುಕೊಂಡಲ್ಲಿ ಅದಕ್ಕೂ ಇಲ್ಲಿ ಅವಕಾಶ ಇದೆ. ಗಣೇಶ ಚತುರ್ಥಿ ಇಲ್ಲಿ ಬಹಳ ವಿಶೇಷ. ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಜನರು ಬರುತ್ತಾರೆ.

ದೇವಾಲಯದ ವಿಳಾಸ ಶ್ರೀ ವಿನಾಯಕ ದೇವರು, ಇಡಗುಂಜಿ ಪೋಸ್ಟ್ : ಮೇಲಿನ ಇಡಗುಂಜಿ ಹೊನ್ನಾವರ (ಉತ್ತರ ಕನ್ನಡ) ಕರ್ನಾಟಕ ಭಾರತ ಪಿನ್ ಕೋಡ್ : 581 423

ದೂರವಾಣಿ ಸಂಖ್ಯೆ: ದೇವಸ್ಥಾನದ ಕಚೇರಿ – (08387)247227 ಅತಿಥಿ ಗೃಹ//ಮಂಗಳ ಕಾರ್ಯಾಲಯ – (08387)296827 ಇಮೇಲ್: contact@idagunjidevaru.com

ದೇವಸ್ಥಾನಕ್ಕೆ ತೆರಳುವುದು ಹೇಗೆ? ಹೊನ್ನಾವರದಿಂದ ಇಡಗುಂಜಿ ದೇವಸ್ಥಾನ ಸುಮಾರು 15 ಕಿ.ಮೀ. ದೂರದಲ್ಲಿದೆ. ಹೊನ್ನಾವರದಿಂದ ಇಡಗುಂಜಿ ದೇವಸ್ಥಾನಕ್ಕೆ ಬಸ್‌ಗಳು, ಮಿನಿ ವ್ಯಾನ್‌ಗಳು ಮತ್ತು ಟೆಂಪೋಗಳು ಆಗಾಗ ಕಾರ್ಯ ನಿರ್ವಹಿಸುತ್ತವೆ.

ರಾಷ್ಟ್ರೀಯ ಹೆದ್ದಾರಿ 17 (NH17) ಹೊನ್ನಾವರ ಮತ್ತು ಭಟ್ಕಳವನ್ನು ಸಂಪರ್ಕಿಸುತ್ತದೆ. NH 17ರ ಈ ಭಾಗದಲ್ಲಿ ಇಡಗುಂಜಿ ರಸ್ತೆಯು ಸ್ವಲ್ಪ ಕವಲೊಡೆಯುತ್ತದೆ. NH17ರಲ್ಲಿನ ಈ ಕವಲಿಗೆ ಲ್ಯಾಂಡ್‌ಮಾರ್ಕ್ ಎಂದರೆ ಹೊನ್ನಾವರದಿಂದ 11 ಕಿಮೀ ದೂರದಲ್ಲಿರುವ ಇಡಗುಂಜಿ ಪ್ರವೇಶ ಕಮಾನು. ಇಡಗುಂಜಿ ದೇವದಸ್ಥಾನವು ಈ ಪ್ರವೇಶ ದ್ವಾರದಿಂದ ಸುಮಾರು 4 ಕಿ.ಮೀ. ದೂರದಲ್ಲಿದೆ.

ಕೊಂಕಣ ರೈಲ್ವೆ ಇಡಗುಂಜಿ ಪ್ರವೇಶ ಕಮಾನು ಬಳಿ ಹಾದು ಹೋದರೂ ಯಾರಾದರೂ ಇಳಿಯಬಹುದಾದ ಹತ್ತಿರದ ನಿಲ್ದಾಣ ಅಂದರೆ ಹೊನ್ನಾವರ ಅಥವಾ ಮುರುಡೇಶ್ವರ. ಗೋವಾದಿಂದ ಬಂದರೆ ಹೊನ್ನಾವರ ನಿಲ್ದಾಣದಲ್ಲಿ ಅಥವಾ ಮಂಗಳೂರಿನಿಂದ ಪ್ರಯಾಣಿಸುತ್ತಿದ್ದರೆ ಮುರುಡೇಶ್ವರ ನಿಲ್ದಾಣದಲ್ಲಿ ಇಳಿಯಬಹುದು.

ಇದನ್ನೂ ಓದಿ: Ganesha Chaturthi 2021: ಗಣಪತಿಯ ವಾಹನವಾದ ಇಲಿ; ಮೂಷಿಕ ಗಣೇಶನ ಹೊತ್ತು ಸವಾರಿ ಮಾಡಿದ ಹಿಂದಿದೆ ಒಂದು ಅಪರೂಪದ ಕಥೆ

Ganesha Chaturthi 2021; ಸಂಕಷ್ಟಹರ ಗಣಪತಿಯ ಶಕ್ತಿಯುತ ಮಂತ್ರಗಳು ಮತ್ತು ಪ್ರಯೋಜನಗಳು ನಿಮಗೆ ಗೊತ್ತೇ?

(Idagunji Ganapati Temple Background Special Explainer On The Occasion Of Ganesha Chaturthi)

Published On - 11:03 am, Thu, 9 September 21

ಬೆಂಗಳೂರಿನ ದೊಡ್ಡಕಲ್ಲಸಂದ್ರ ರಸ್ತೆಯ ದುಸ್ಥಿತಿ: ವಿಡಿಯೋ ಮಾಡಿ ತೋರಿಸಿದ ನಟ
ಬೆಂಗಳೂರಿನ ದೊಡ್ಡಕಲ್ಲಸಂದ್ರ ರಸ್ತೆಯ ದುಸ್ಥಿತಿ: ವಿಡಿಯೋ ಮಾಡಿ ತೋರಿಸಿದ ನಟ
ಕಮಲ್ ಹಾಸನ್ ಆಡಿದ್ದು ದುರಹಂಕಾರದ ಮಾತು: ವಾಟಾಳ್ ನಾಗರಾಜ್
ಕಮಲ್ ಹಾಸನ್ ಆಡಿದ್ದು ದುರಹಂಕಾರದ ಮಾತು: ವಾಟಾಳ್ ನಾಗರಾಜ್
ತಮಿಳು ಕನ್ನಡದ ತಾಯಿ ಭಾಷೆ ಅಲ್ಲ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ
ತಮಿಳು ಕನ್ನಡದ ತಾಯಿ ಭಾಷೆ ಅಲ್ಲ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ
ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್
ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್
ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು
ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು
ಹೆಚ್​​ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್
ಹೆಚ್​​ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್
ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಣೆ
ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಣೆ
ವಿಧಾನಸಭೆ ವಿಸರ್ಜಸಿ ಚುನಾವಣೆ ಎದುರಿಸುವಂತೆ ಸರ್ಕಾರಕ್ಕೆ ಅಶ್ವಥ್ ಸವಾಲು
ವಿಧಾನಸಭೆ ವಿಸರ್ಜಸಿ ಚುನಾವಣೆ ಎದುರಿಸುವಂತೆ ಸರ್ಕಾರಕ್ಕೆ ಅಶ್ವಥ್ ಸವಾಲು
ಟೈಲರ್​ ಬಳಿ ಹೋಗಿ ಪತ್ನಿ ಬಾಯಿಗೆ ಹೊಲಿಗೆ ಹಾಕ್ತೀರಾ ಎಂದು ಕೇಳಿದ ಪತಿ
ಟೈಲರ್​ ಬಳಿ ಹೋಗಿ ಪತ್ನಿ ಬಾಯಿಗೆ ಹೊಲಿಗೆ ಹಾಕ್ತೀರಾ ಎಂದು ಕೇಳಿದ ಪತಿ
ಹೆಚ್​ಎಎಲ್ ಬೇರೆ ರಾಜ್ಯಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಅಶೋಕ
ಹೆಚ್​ಎಎಲ್ ಬೇರೆ ರಾಜ್ಯಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಅಶೋಕ