ನಾಯಿಗಳ ಹಸಿವು ತಣಿಸಿ‌ ನಿಜ‌ ಮಾನವೀಯತೆ ಮೆರೆಯುತಿರುವ ಮಹಾಮಾತೆ.. ಎಲ್ಲಿ?

ನಾಯಿಗಳ ಹಸಿವು ತಣಿಸಿ‌ ನಿಜ‌ ಮಾನವೀಯತೆ ಮೆರೆಯುತಿರುವ ಮಹಾಮಾತೆ.. ಎಲ್ಲಿ?

ಉಡುಪಿ: ಲಾಕ್‌ಡೌನ್‌ ಹಾಗೂ ಕೊರೊನಾ ಸಾಂಕ್ರಮಿಕ ರೋಗದಿಂದ ಸಂಕಷ್ಟಕ್ಕೀಡಾದ ಜನರ ಕಷ್ಟವನ್ನೇ ಕೇಳೋರಿಲ್ಲ. ಇಂತಹ ಸಂದರ್ಭದಲ್ಲಿ ಬೀದಿ ನಾಯಿಗಳ ಹಸಿವನ್ನು ತಣಿಸಿ‌ ನಿಜ‌ ಮಾನವೀಯತೆ ಮೆರೆಯುತ್ತಿದ್ದಾರೆ ಕುಂದಾಪುರದ ಹಂಗ್ಳೂರಿನ ಹುಡುಗಿ ಮೋನಿಶಾ ಗೇಬ್ರಿಯಲ್. ಲಾಕ್ ಡೌನ್ ಆದಾಗ ಇವರ ಸೇವೆ ಆರಂಭವಾಗಿದೆ. ಬೀದಿಯಲ್ಲಿ ಅಡ್ಡಾಡುವ ನಾಯಿಗಳು ಹೋಟೆಲ್ ಗಳು ಮುಚ್ಚಿದ ನಂತ್ರ ಆಹಾರಕ್ಕೆ ಸಂಕಟ ಪಡುತ್ತಿದ್ದವು. ಅದರಲ್ಲೂ ಬೀದಿನಾಯಿಗಳು ಹಸಿವೆಯಲ್ಲೇ ಸಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು, ಈ ಪರಿಸ್ಥಿತಿ ನೋಡಲಾಗದೆ ಲಾಕ್‌ಡೌನ್ ಆರಂಭವಾದಾಗಿನಿಂದ ಕಳೆದ ಸುಮಾರು 120 ದಿನದಿಂದ […]

sadhu srinath

| Edited By:

Jul 30, 2020 | 3:05 PM

ಉಡುಪಿ: ಲಾಕ್‌ಡೌನ್‌ ಹಾಗೂ ಕೊರೊನಾ ಸಾಂಕ್ರಮಿಕ ರೋಗದಿಂದ ಸಂಕಷ್ಟಕ್ಕೀಡಾದ ಜನರ ಕಷ್ಟವನ್ನೇ ಕೇಳೋರಿಲ್ಲ. ಇಂತಹ ಸಂದರ್ಭದಲ್ಲಿ ಬೀದಿ ನಾಯಿಗಳ ಹಸಿವನ್ನು ತಣಿಸಿ‌ ನಿಜ‌ ಮಾನವೀಯತೆ ಮೆರೆಯುತ್ತಿದ್ದಾರೆ ಕುಂದಾಪುರದ ಹಂಗ್ಳೂರಿನ ಹುಡುಗಿ ಮೋನಿಶಾ ಗೇಬ್ರಿಯಲ್.

ಲಾಕ್ ಡೌನ್ ಆದಾಗ ಇವರ ಸೇವೆ ಆರಂಭವಾಗಿದೆ. ಬೀದಿಯಲ್ಲಿ ಅಡ್ಡಾಡುವ ನಾಯಿಗಳು ಹೋಟೆಲ್ ಗಳು ಮುಚ್ಚಿದ ನಂತ್ರ ಆಹಾರಕ್ಕೆ ಸಂಕಟ ಪಡುತ್ತಿದ್ದವು. ಅದರಲ್ಲೂ ಬೀದಿನಾಯಿಗಳು ಹಸಿವೆಯಲ್ಲೇ ಸಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು, ಈ ಪರಿಸ್ಥಿತಿ ನೋಡಲಾಗದೆ ಲಾಕ್‌ಡೌನ್ ಆರಂಭವಾದಾಗಿನಿಂದ ಕಳೆದ ಸುಮಾರು 120 ದಿನದಿಂದ ನಿರಂತರವಾಗಿ ತಮ್ಮ ಸ್ಥಳೀಯ ಪ್ರದೇಶದಲ್ಲಿ ನಾಯಿಗೆ ರುಚಿಕರ ಹಾಗೂ ಶುದ್ದ ಆಹಾರವನ್ನು ನೀಡುತ್ತಾ ಬಂದಿದ್ದಾರೆ ಮೋನಿಶಾ.

ಇವರ ಈ ಸೇವೆಗೆ ಅವರ ಸ್ನೇಹಿತ ಅರವಿಂದ್ ಫರ್ನಾಂಡಿಸ್ ಕೂಡ ಕೈ ಜೋಡಿಸಿದ್ದಾರೆ. ಇಂಗ್ಲೆಂಡಿನ ಲ್ಯಾಂಕಸ್ಟರ್ ಯುನಿವರ್ಸಿಟಿಯಲ್ಲಿ ವಕೀಲ ಪದವಿ ಪಡೆದಿರುವ ಈಕೆ, ಮುಂದೆ ತಮ್ಮ ಊರಲ್ಲಿ ಹೊಸ ಉದ್ಯಮ ಪ್ರಾರಂಭ ಮಾಡುವ ಯೋಚನೆಯಲ್ಲೂ ಇದ್ದಾರೆ. ಸಾಕು ಪ್ರಾಣಿಗಳ ರಕ್ಷಣೆಗಾಗಿ ಒಂದು ಎನ್‌ಜಿಓ ಆರಂಭಿಸಿ, ಬೀದಿ ನಾಯಿಗಳನ್ನು ರಕ್ಷಣೆ ಮಾಡಲು ಸಮೀಪದ ಜಾಗದಲ್ಲಿ ಆರೈಕೆ  ಕೇಂದ್ರವೊಂದನ್ನು ವ್ಯವಸ್ಥೆ ಮಾಡಬೇಕು ಎನ್ನುವ ಕನಸು ಇವರದ್ದು.

ಪ್ರತಿದಿನ ಬೆಳಗ್ಗೆ ಏಳು ಗಂಟೆಯಿಂದಲೇ ಪ್ರಾಣಿಗೆ ಅನ್ನ ಬೇಯಿಸುವ ಕೆಲಸ ಪ್ರಾರಂಭ ಮಾಡುತ್ತಾರೆ. ಮೊನಿಶಾ ಅವರ ತಂದೆ-ತಾಯಿಯೂ ಕೂಡ ಸಹಕಾರ ಕೊಡುತ್ತಾರಂತೆ. ಪ್ರತಿದಿನ ಬೇರೆ ಬೇರೆ ಆಹಾರ ಪದಾರ್ಥದೊಂದಿಗೆ, ಕೋಳಿ ಮಾಂಸವನ್ನು ಆಹಾರವಾಗಿ ಬೀದಿ ನಾಯಿಗಳಿಗೆ ನೀಡಲಾಗುತ್ತದೆ. ನಾಯಿಗಳಿಗೆ ಬಡಿಸಲು ಹೊಸ ತಟ್ಟೆಗಳನ್ನು ಖರೀದಿಸಿ, ಊಟ ಆದಮೇಲೆ ಮನೆಗೆ ತಂದು ತಾವೇ ಶುಚಿಗೊಳಿಸುತ್ತಾರೆ.

ಪ್ರತಿದಿನ ಬೀದಿ ನಾಯಿಗಳಿಗಾಗಿಯೇ 15 ಕಿಲೋದಷ್ಟು ಅನ್ನ ಬೇಯಿಸುತ್ತಾರೆ. ಮಳೆ ಬಂದಾಗಲೂ ಈ ಸೇವಾ ಕಾರ್ಯಕ್ಕೆ ವಿರಾಮ ನೀಡಲ್ಲ. ಇವರ ಸೇವೆಯನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಿದ ಕೆಲವರು ಅಕ್ಕಿ, ಹಾಲು, ಆಹಾರ ಪದಾರ್ಥ ಬಿಸ್ಕತ್ತು ನೀಡಿ ಸಹಾಯ ಮಾಡಿದ್ದುಂಟು. -ಹರೀಶ್ ಪಾಲೆಚ್ಚಾರ್

Follow us on

Related Stories

Most Read Stories

Click on your DTH Provider to Add TV9 Kannada