ಕುಡಿದು ಅಡ್ಡಾದಿಡ್ಡಿ ಬಸ್ ಚಾಲನೆ: ಪ್ರಯಾಣಿಕರಿಂದ ಚಾಲಕನಿಗೆ ಬಿತ್ತು ಧರ್ಮದೇಟು
ಬೆಳಗಾವಿ: ಮದ್ಯದ ಅಮಲಿನಲ್ಲಿ ಬಸ್ ಚಲಾಯಿಸಿದ್ದ ಚಾಲಕನಿಗೆ ಥಳಿಸಿರುವ ಘಟನೆ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದಿದೆ. ಗೋವಾ ಸರ್ಕಾರದ ಕದಂಬ ಬಸ್ ಅನ್ನು ಚಾಲಕ ಪಣಜಿಯಿಂದ ಬೆಳಗಾವಿಗೆ ಪಾನಮತ್ತನಾಗಿಯೇ ಚಾಲನೆ ಮಾಡಿದ್ದಾನೆ ಎಂದು ಹೇಳಲಾಗಿದೆ. ಚಿಕ್ಕಮಕ್ಕಳು ಹಾಗೂ ವೃದ್ಧರು ಸೇರಿದಂತೆ 51 ಪ್ರಯಾಣಿಕರು ಬಸ್‌ನಲ್ಲಿ ಪ್ರಯಾಣಿಸುತ್ತಿದ್ರು ಎಂದು ತಿಳಿದುಬಂದಿದೆ. ಪಣಜಿಯಿಂದ ಅಡ್ಡಾದಿಡ್ಡಿಯಾಗಿ ವಾಹನ ಚಲಾಯಿಸಿಕೊಂಡು ಬಂದಿದ್ದ ಚಾಲಕ ಹೇಗೋ ಮಾಡಿ ಬೆಳಗಾವಿಗೆ ಬಂದು ತಲುಪಿದ್ದನಂತೆ. ಅಲ್ಲಿ ರೊಚ್ಚಿಗೆದ್ದ ಬಸ್ ಪ್ರಯಾಣಿಕರು ಆತನಿಗೆ ಧರ್ಮದೇಟು ನೀಡಿದ್ದಾರೆ. ಅಷ್ಟೇ […]

ಬೆಳಗಾವಿ: ಮದ್ಯದ ಅಮಲಿನಲ್ಲಿ ಬಸ್ ಚಲಾಯಿಸಿದ್ದ ಚಾಲಕನಿಗೆ ಥಳಿಸಿರುವ ಘಟನೆ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದಿದೆ. ಗೋವಾ ಸರ್ಕಾರದ ಕದಂಬ ಬಸ್ ಅನ್ನು ಚಾಲಕ ಪಣಜಿಯಿಂದ ಬೆಳಗಾವಿಗೆ ಪಾನಮತ್ತನಾಗಿಯೇ ಚಾಲನೆ ಮಾಡಿದ್ದಾನೆ ಎಂದು ಹೇಳಲಾಗಿದೆ.
ಚಿಕ್ಕಮಕ್ಕಳು ಹಾಗೂ ವೃದ್ಧರು ಸೇರಿದಂತೆ 51 ಪ್ರಯಾಣಿಕರು ಬಸ್‌ನಲ್ಲಿ ಪ್ರಯಾಣಿಸುತ್ತಿದ್ರು ಎಂದು ತಿಳಿದುಬಂದಿದೆ. ಪಣಜಿಯಿಂದ ಅಡ್ಡಾದಿಡ್ಡಿಯಾಗಿ ವಾಹನ ಚಲಾಯಿಸಿಕೊಂಡು ಬಂದಿದ್ದ ಚಾಲಕ ಹೇಗೋ ಮಾಡಿ ಬೆಳಗಾವಿಗೆ ಬಂದು ತಲುಪಿದ್ದನಂತೆ. ಅಲ್ಲಿ ರೊಚ್ಚಿಗೆದ್ದ ಬಸ್ ಪ್ರಯಾಣಿಕರು ಆತನಿಗೆ ಧರ್ಮದೇಟು ನೀಡಿದ್ದಾರೆ.
ಅಷ್ಟೇ ಅಲ್ಲದೆ, ಚಾಲಕ ಬೆಳಗಾವಿ ಮೂಲದ ವಕೀಲನ ಜೊತೆ ಸಹ ಕಿರಿಕ್ ಮಾಡಿಕೊಂಡಿದ್ದಾನೆ. ಗೋವಾದಿಂದ ಬಂದಿದ್ದ ಪಾರ್ಸಲ್ ಕೊಡಲ್ಲ ಎಂದು ಪಾನಮತ್ತನಾಗಿದ್ದ ಚಾಲಕ ಕಿರಿಕ್ ಮಾಡಿದ್ದನಂತೆ. ಇದರಿಂದ ಆಕ್ರೋಶಗೊಂಡ ವಕೀಲ ಸಹ ಚಾಲಕನಿಗೆ ಕಪಾಳಮೋಕ್ಷ ಮಾಡಿದ್ದು ಚೆನ್ನಾಗಿ ಬಾರಿಸಿದ್ದಾನೆ.




