ಇಳಿಕೆಯತ್ತ ಚಿನ್ನದ ಬೆಲೆ.. ಇಂದಿನ ಚಿನ್ನದ ದರ ಎಷ್ಟು ಗೊತ್ತಾ?
ಕಳೆದೆರಡು ದಿನಗಳಿಂದ ಒಂದೇ ಬೆಲೆ ಕಾಯ್ದುಕೊಂಡಿದ್ದ 22 ಕ್ಯಾರೆಟ್ ಚಿನ್ನದ ಬೆಲೆ ಇಂದು 40 ರೂ ಕಡಿಮೆಯಾಗುವುದರ ಮುಖಾಂತರ 4759 ರೂಪಾಯಿಗೆ ಬಂದು ನಿಂತಿದೆ. ಬುಧವಾರದಂದು 5189 ರೂ ಇದ್ದ 24 ಕ್ಯಾರೆಟ್ನ ಚಿನ್ನದ ಬೆಲೆ, ಇಂದು 50 ರೂಪಾಯಿ ಕಡಿಮೆಯಾಗುವುದರೊಂದಿಗೆ 5139 ರೂ. ಗೆ ಬಂದು ತಲುಪಿದೆ.
ಬೆಂಗಳೂರು: ನಗರದಲ್ಲಿ ಕಳೆದ ಎರಡು ದಿನಗಳಿಂದ ಏರಿಕೆ ಕಾಣದೆ ಗ್ರಾಹಕರಲ್ಲಿ ಕೊಂಚ ನಿರಾಳತೆ ಮೂಡಿಸಿದ್ದ ಚಿನ್ನದ ಬೆಲೆಯಲ್ಲಿ ಇಂದು ಸಹ ಇಳಿಕೆಯಾಗುವ ಮೂಲಕ ಸತತ ಬೆಲೆ ಏರಿಕೆಯ ನಾಗಾಲೋಟಕ್ಕೆ ಬ್ರೇಕ್ ಹಾಕಿದೆ.
ಕಳೆದೆರಡು ದಿನಗಳಿಂದ ಒಂದೇ ಬೆಲೆ ಕಾಯ್ದುಕೊಂಡಿದ್ದ 22 ಕ್ಯಾರೆಟ್ ಚಿನ್ನದ ಬೆಲೆ ಇಂದು 40 ರೂ ಕಡಿಮೆಯಾಗುವುದರ ಮುಖಾಂತರ 4,759 ರೂಪಾಯಿಗೆ ಬಂದು ನಿಂತಿದೆ. ಬುಧವಾರದಂದು 5,189 ರೂ ಇದ್ದ 24 ಕ್ಯಾರೆಟ್ನ ಚಿನ್ನದ ಬೆಲೆ, ಇಂದು 50 ರೂಪಾಯಿ ಕಡಿಮೆಯಾಗುವುದರೊಂದಿಗೆ 5,139 ರೂ. ಗೆ ಬಂದು ತಲುಪಿದೆ.
ಹಾಗೆಯೇ ಬೆಳ್ಳಿಯ ಬೆಲೆಯಲ್ಲಿ ಯಾವುದೇ ಏರಿಕೆಯಾಗದೆ ನಿನ್ನೆಯ ಬೆಲೆಯೇ ಇಂದು ಸಹ ಮುಂದುವರೆದಿದೆ. ಹೀಗಾಗಿ ಪ್ರತಿ ಗ್ರಾಂ ಬೆಳ್ಳಿಗೆ 71 ರೂ. ದರ ನಿಗದಿಯಾಗಿದೆ.